ಹೈದರಾಬಾದ್ : ದಕ್ಷಿಣದ ಸೂಪರ್‌ಸ್ಟಾರ್ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ಭಾನುವಾರ ತಮಿಳು ಮತ್ತು ಮಲಯಾಳಿ ಹೊಸ ವರ್ಷವನ್ನು (ವಿಶು) ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರೊಂದಿಗೆ ಚೆನ್ನೈನ ಮನೆಯಲ್ಲಿ ಆಚರಿಸಿದರು.
ದಂಪತಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಕ್ಕಳೊಂದಿಗಿನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ವಿಶೇಷ ದಿನದಂದು ವಿಘ್ನೇಶ್ ಮತ್ತು ನಯನತಾರಾ ತಮ್ಮ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಪೋಸ್ ನೀಡಿದ್ದಾರೆ. ನಾಲ್ವರು ಕ್ಯಾಮೆರಾಗಾಗಿ ಮುಗುಳು ನಕ್ಕಾಗ ಸಂತೋಷದ ಕುಟುಂಬದಂತೆ ಕಂಡುಬಂದಿದೆ.
ನಯನತಾರಾ ಮತ್ತು ವಿಘ್ನೇಶ್ ತಮ್ಮ ಮಕ್ಕಳೊಂದಿಗೆ ಫೋಟೋಗಳನ್ನು ಹಂಚಿಕೊಂಡ ನಂತರ ಎಲ್ಲರಿಗೂ ತಮಿಳು ಹೊಸ ವರ್ಷ ಮತ್ತು ಏಪ್ರಿಲ್ 14 ರ ವಿಶು ಶುಭಾಶಯಗಳು ಎಂದು ತಿಳಿಸಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಾ ಜವಾನ್ ನಟ ಹೀಗೆ ಬರೆದಿದ್ದಾರೆ: "ವಿಶು ಮತ್ತು ತಮಿಳು ಹೊಸ ವರ್ಷದ ಶುಭಾಶಯಗಳು😇😇🙏🏻🙏🏻💥💥ದೇವರು ನಿಮ್ಮೆಲ್ಲರಿಗೂ ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ಆಶೀರ್ವದಿಸಲಿ" ಎಂದಿದ್ದಾರೆ.
ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ಸ್ವಲ್ಪ ಸಮಯದ ನಂತರ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ಜೋಡಿಗೆ ಪ್ರೀತಿ ಸುರಿಮಳೆಯನ್ನೇ ಸುರಿಸಿದ್ದಾರೆ. ನಟ ಸಿದ್ಧಾರ್ಥ್ ದಂಪತಿಗೆ ಎರಡು ಹೃದಯಾಕಾರದ ಎಮೋಜಿಗಳನ್ನು ನೀಡಿದ್ದಾರೆ.