ಕರ್ನಾಟಕ

karnataka

ETV Bharat / entertainment

ಎಲ್ಲವೂ 'ಪೌಡರ್'ಮಯ ಅಂತಿದ್ದಾರೆ ದೂದ್ ಪೇಡಾ ದಿಗಂತ್: ಚಿತ್ರದ ಮೊದಲ ಗೀತೆ ಅನಾವರಣ - POWDER MOVIE

'ಪೌಡರ್' ಚಿತ್ರದ ಮೊದಲ ಹಾಡು 'ಮಿಷನ್‌ ಘಮ ಘಮ' ಅನಾವರಣಗೊಂಡಿದೆ.

Powder poster
ಪೌಡರ್ ಪೋಸ್ಟರ್, ಮೊದಲ ಗೀತೆ ಅನಾವರಣ (ETV Bharat)

By ETV Bharat Karnataka Team

Published : Jul 6, 2024, 8:12 AM IST

ಸ್ಯಾಂಡಲ್​ವುಡ್​ನ ದೂದ್ ಪೇಡಾ ದಿಗಂತ್ ಹಾಗೂ ನಟಿ ಧನ್ಯಾ ರಾಮ್​​ಕುಮಾರ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಪೌಡರ್'. ಕಾಮಿಡಿ ಚಿತ್ರ ಇದೀಗ 'ಮಿಷನ್‌ ಘಮ ಘಮ' ಎಂಬ ತನ್ನ ಮೊದಲ ಗೀತೆಯನ್ನು ಅನಾವರಣಗೊಳಿಸಿ, ಸಿನಿಪ್ರಿಯರ ಗಮನ ಸೆಳೆದಿದೆ.

ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮತ್ತು ಖ್ಯಾತ ಗಾಯಕ ಎಂ.ಸಿ.ಬಿಜ್ಜು ಅವರ ಕಾಂಬಿನೇಷನ್​​ನಲ್ಲಿ ಮೂಡಿ ಬಂದಿರುವ ಮೊದಲ ಗೀತೆ ಇದಾಗಿದ್ದು, ತನ್ನ ವಿಭಿನ್ನ ಟ್ಯೂನ್‌ ಮೂಲಕ ಬಹುತೇಕರ ಗಮನ ಸೆಳೆಯುತ್ತಿದೆ. ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್‌ ಮತ್ತು ರ್ಯಾಪ್ ಸಂಗೀತದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಎಂ.ಸಿ. ಬಿಜ್ಜು ಒಟ್ಟಾಗಿ ಬಂದಿರುವುದು ಹಾಡಿಗೆ ಹೆಚ್ಚು ಮೆರಗನ್ನು ತಂದಿದೆ.

ಇಬ್ಬರು ಯುವಕರು ಒಂದು ನಿಗೂಢ ಪೌಡರ್ ಪ್ರಭಾವದಿಂದಾಗಿ ದಿಢೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳೆಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುವ ಕಥೆಯೇ 'ಪೌಡರ್'. ‌ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಉತ್ತರ ದೊರೆಯಲಿದೆ.

ಇದನ್ನೂ ಓದಿ:ಪಡೆದುಕೊಂಡಿದ್ದ ಹಣವನ್ನು ದರ್ಶನ್​ಗೆ ವಾಪಸ್ ಕೊಟ್ಟಿದ್ದೇನಷ್ಟೇ: ವಿಚಾರಣೆ ಬಳಿಕ ಮೋಹನ್ ರಾಜ್ - Mohan Raj On Darshan Case

ದಿಗಂತ್ ಮಂಚಾಲೆ, ಧನ್ಯಾ ರಾಮ್​​ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ‌ ಪೌಡರ್ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆ್ಯಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ. ಕೆ‌.ಆರ್.ಜಿ. ಸ್ಟುಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್​​​ ಕಾಂಬೋದ ಚೊಚ್ಚಲ ಚಿತ್ರ 'ಪೌಡರ್'. ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ‌.

ಇದನ್ನೂ ಓದಿ:ಹಣದ ಸೂಟ್‌ಕೇಸ್​​ನೊಂದಿಗೆ ರಶ್ಮಿಕಾ ಮಂದಣ್ಣ; ಕುತೂಹಲ ಹೆಚ್ಚಿಸಿದ 'ಕುಬೇರ' ಫಸ್ಟ್ ಗ್ಲಿಂಪ್ಸ್​​ - Rashmika Mandanna Kubera Glimpse

ABOUT THE AUTHOR

...view details