ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುವ ಅತ್ಯಂತ ಪಾಪ್ಯುಲರ್ ಪ್ರೋಗ್ರಾಮ್ ''ಬಿಗ್ ಬಾಸ್ ಸೀಸನ್ 11'' ತನ್ನ ಆರನೇ ವಾರದ ಆಟ ಮುಂದುವರಿಸಿದೆ. ಐದನೇ ವಾರಾಂತ್ಯ ಮಾನಸಾ ಅವರು ಎಲಿಮಿನೇಟ್ ಆಗಿದ್ದಾರೆ. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದ ಮಾನಸಾ ಹೊರಬಂದಿದ್ದು, ಎಂದಿನಂತೆ ಮನೆಯಲ್ಲೀಗ ಕಿರುಚಾಟ, ವಾದ ವಿವಾದ, ಚರ್ಚೆ, ಮನಸ್ತಾಪಗಳು ಒಂದು ಮಟ್ಟದಲ್ಲಿ ಮುಂದುವರಿದಿವೆ. ಸ್ಪರ್ಧಿಗಳಿಗೆ ಬಿಗ್ ಶಾಕ್ ಎನ್ನುವಂತೆ ಮನೆಯೊಳಗಿನ ಟಿವಿಯಲ್ಲಿ ಬಿಗ್ ಬಾಸ್ ತಂಡ ವಿಡಿಯೋ ಒಂದನ್ನು ಅನಾವರಣಗೊಳಿಸಿದೆ.
''ಹಿಂದೆ ನಡೆದದ್ದೆಲ್ಲಾ ಮುಂದೆ ನಡೆಯೋದಕ್ಕೆ ಕಾರಣವಾಗುತ್ತಾ? ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಈ ದೃಶ್ಯದಲ್ಲಿ, ಸ್ಪರ್ಧಿಗಳು ಮತ್ತೊಬ್ಬರ ಬಗ್ಗೆ ಬೆನ್ನ ಹಿಂದೆ ಮಾತನಾಡಿದ ಕ್ಷಣಗಳನ್ನೆಲ್ಲವನ್ನೂ ಮನೆ ಮಂದಿಗೆ ತೋರಿಸಲಾಗಿದೆ. ಇದು ಮನೆಯ ವಾತಾವರಣವನ್ನೇ ಬದಲಾಯಿಸುವಂತಿದೆ.
ಇದನ್ನೂ ಓದಿ:ಕಾಂತಾರ ಅಧ್ಯಾಯ 1 ಚಿತ್ರಕ್ಕಾಗಿ ಕನ್ನಡಕ್ಕೆ ಬಂದ RRR ಸಿನಿಮಾದ ಆಕ್ಷನ್ ಡೈರೆಕ್ಟರ್!
ಕಣ್ಣಿಗೆ ಕಾಣಿಸ್ತಾ ಇದೆ ಅವಳ ಹೊಟ್ಟೆಕಿಚ್ಚು ಎಂದು ಭವ್ಯಾ ಅವರ ಬಗ್ಗೆ ಐಶ್ವರ್ಯಾ ಮಾತನಾಡಿದ್ದನ್ನು ಈ ದೃಶ್ಯದಲ್ಲಿ ಕಾಣಬಹುದು. ಅಲ್ಲಿ ಒಂದ್ ಹಕ್ಕಿನ ಹೊಡೆದರೆ ಎರಡು ಹಕ್ಕಿ ಫ್ರೀ. ಒಂದ್ ಹಕ್ಕಿ, ಅದ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ತ್ರಿವಿಕ್ರಮ್ ಮಾತನಾಡಿದ್ದಾರೆ. ಇದು ಆತ್ಮೀಯ ಸ್ನೇಹಿತೆಯರಾದ ಮೋಕ್ಷಿತಾ ಮತ್ತು ಗೌತಮಿ ಬಗ್ಗೆ ಮಾತನಾಡಿದಂತೆ ತೋರುತ್ತಿದೆ. ಕೆರಳಿದ ಮೋಕ್ಷಿತಾ, ಅಕ್ಕ ತಂಗಿಯರೊಂದಿಗೆ ಬೆಳೆದವರು ಹಕ್ಕಿ ಅಂತಾ ಮಾತನಾಡ್ತಾರಾ?, ಅವರ ತನ ಏನು ಅನ್ನೋದನ್ನು ತೋರಿಸುತ್ತೆ. ಅಂದು ತ್ರಿವಿಕ್ರಮ್ಗೆ ಘೋಮುಖ ವ್ಯಾಘ್ರ ಎಂದು ಹೇಳಿದ್ದೆ. ಅದಕ್ಕೆಂದೂ ವಿಷಾದಿಸೋಲ್ಲ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ವಾ? ಅದು ಇದೇ ನೋಡಿ ಎಂದು ತಮ್ಮ ಆಕ್ರೊಶ ಹೊರಹಾಕಿದ್ದಾರೆ. ಒಟ್ಟಾರೆ, ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡಿರುವ ವಿಡಿಯೋವನ್ನು ಎಲ್ಲರ ಮುಂದೆ ಪ್ಲೇ ಮಾಡಲಾಗಿದ್ದು, ಮನಸ್ತಾಪಗಳು ಮತ್ತು ವಾದ ವಿವಾದಗಳು ಹೆಚ್ಚಾಗುವ ಲಕ್ಷಣಗಳಿವೆ. ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ.
ಎಲಿಮಿನೇಷನ್ಗೆ ನಾಮಿನೇಷನ್ ಆಗಿದ್ದವರು: ಮಂಜು, ಅನುಷಾ, ಮೋಕ್ಷಿತಾ, ಭವ್ಯಾ, ಧರ್ಮ, ಮಾನಸಾ, ಚೈತ್ರಾ, ಧನರಾಜ್, ಶಿಶಿರ್, ಹನುಮಂತ, ಗೋಲ್ಡ್ ಸುರೇಶ, ಐಶ್ವರ್ಯಾ.
ಇದನ್ನೂ ಓದಿ:'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ
ಎಲಿಮಿನೇಟ್ ಆದವರು:ಮಾನಸಾ ಅವರು ಐದು ವಾರಗಳ ಕಾಲ ಮನೆಯಲ್ಲಿದ್ದು, ಐದನೇ ವಾರಾಂತ್ಯ ಎಲಿಮಿನೇಷನ್ ಮೂಲಕ ಮನೆಯಿಂದ ಹೊರನಡೆದಿದ್ದಾರೆ. ಇವರ ಪತಿ ತುಕಾಲಿ ಸಂತು ಅವರು ಕಳೆದ ಬಿಗ್ ಬಾಸ್ ಸೀಸನ್ ಅಲ್ಲಿ ಕಾಣಿಸಿಕೊಂಡು, ಬಹಳ ಜನಪ್ರಿಯರಾಗಿದ್ದಾರೆ. ಫಿನಾಲೆವರೆಗೂ ತಲುಪಿದ್ದರು. ಈ ಬಾರಿ ಬಿಗ್ ಬಾಸ್ ಮನೆಗೆ ಪತ್ನಿಯನ್ನು ಕಳುಹಿಸಿಕೊಟ್ಟಿದ್ದರು. ಮಾನಸಾ ಮನೆಯಿಂದ ಹೊರಬಂದ ಬಳಿಕ, ಕಿಚ್ಚನಿದ್ದ ವೇದಿಕೆಯಲ್ಲಿ ತುಕಾಲಿ ಕೂಡಾ ಕಾಣಿಸಿಕೊಂಡು ಮಾತನಾಡಿದ್ದರು. ಮಾನಸಾ ಮುಗ್ಧೆ. ಅವಳಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡರು. ಜೊತೆಗೆ ಪತ್ನಿ ಮೇಲೆ ಎಲ್ಲರ ಸಮ್ಮುಖದಲ್ಲಿ ಪ್ರೀತಿಯ ಮಳೆಗೈದು ಮೆಚ್ಚುಗೆಗೆ ಪಾತ್ರರಾದರು.