ಕರ್ನಾಟಕ

karnataka

ETV Bharat / entertainment

ಮಂಚು ಮನೋಜ್ ನಟನೆಯ 'ಮಿರಾಯ್' ಸಿನಿಮಾಗೆ ಕಿಚ್ಚನ ಬೆಂಬಲ - Mirai Movie - MIRAI MOVIE

ಹಲವು ವರ್ಷಗಳ ಬಳಿಕ ಮಂಚು ಮನೋಜ್ ಮತ್ತೆ ಬಣ್ಣ ಹಚ್ಚಿದ್ದಾರೆ. ಇವರ ಅಭಿನಯದ 'ಮಿರಾಯ್' ಸಿನಿಮಾಕ್ಕೆ ಕಿಚ್ಚ ಸುದೀಪ್​ ಸಾಥ್ ನೀಡಿದ್ದಾರೆ.

MANCHU MANOJ  MIRAI MOVIE  KICHCHA SUDEEP  KARTHIK GATTAMNENI
ಮಂಚು ಮನೋಜ್ ಹಾಗು ಕಿಚ್ಚ ಸುದೀಪ್ (ETV Bharat)

By ETV Bharat Karnataka Team

Published : May 22, 2024, 7:28 AM IST

ತೆಲುಗು ನಟ ಮಂಚು ಮನೋಜ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 8 ವರ್ಷಗಳ ಬಳಿಕ ಇವರು ಮತ್ತೆ ಬಣ್ಣ ಹಚ್ಚಿದ್ದಾರೆ. ಹನುಮಾನ್ ಖ್ಯಾತಿಯ ತೇಜ್ ಸಜ್ಜಾ ನಾಯಕನಾಗಿ ನಟಿಸುತ್ತಿರುವ 'ಮಿರಾಯ್' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಬರ್ತ್ ಡೇ ವಿಶೇಷವಾಗಿ ಮಿರಾಯ್ ಚಿತ್ರತಂಡ ಸ್ಪೆಷಲ್ ವಿಡಿಯೋ ಬಿಡುಗಡೆ ಮಾಡಿತು. ನಟ ದರ್ಶನ್ ಹಾಗೂ ಸುದೀಪ್ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ದಿ ಬ್ಲ್ಯಾಕ್ ಸ್ವೋರ್ಡ್ ಟೈಟಲ್​ನಡಿ ರಿಲೀಸ್ ಆಗಿರುವ ಫಸ್ಟ್ ಲುಕ್​ನಲ್ಲಿ ಮನೋಜ್ ಉದ್ದ ಕೂದಲು ಬಿಟ್ಟು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್‌ಗಳ ಮೂಲಕ ಗಮನಸೆಳೆಯುವ ಮಂಚು ಮನೋಜ್, ಡಬಲ್ ಶೇಡ್​ನಲ್ಲಿ ನಟಿಸಿದ್ದಾರೆ.

'ಮಿರಾಯ್' ಸಿನಿಮಾ ಪೋಸ್ಟರ್​ (ETV Bharat)

ಈ ಸಿನಿಮಾಗೆ ಕಾರ್ತಿಕ್ ಗಟ್ಟಮ್ನೇನಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಿರಾಯ್ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಸಿನಿಮಾ ಹೇಳುತ್ತದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಕಾರ್ತಿಕ್ ಗಟ್ಟಮ್ನೇನಿ ಮಿರಾಯ್‌ಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ ಬರೆದಿದ್ದಾರೆ. ಶ್ರೀ ನಾಗೇಂದ್ರ ತಂಗಳ ಕಲಾ ನಿರ್ದೇಶನ, ವಿವೇಕ್ ಕೂಚಿಭೋಟ್ಲ ಸಹ ನಿರ್ಮಾಪಕರು. ಕೃತಿ ಪ್ರಸಾದ್ ಕ್ರಿಯೇಟಿವ್ ನಿರ್ಮಾಪಕರಾಗಿದ್ದು, ಸುಜಿತ್ ಕುಮಾರ್ ಕೊಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಮಿರಾಯ್ ಸಿನಿಮಾವನ್ನು 2 ಡಿ ಹಾಗೂ 3 ಡಿ ವರ್ಷನ್​ನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮುಂದಿನ ವರ್ಷದ ಏಪ್ರಿಲ್ 18ರಂದು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಇದನ್ನೂ ಓದಿ:ಗೌರಿ ಸಿನಿಮಾಕ್ಕಿದೆ 4 ಜನ ಸಂಗೀತ ನಿರ್ದೇಶಕರು, 14 ಗಾಯಕರ ಅದ್ದೂರಿತನ - Gowri movie

ABOUT THE AUTHOR

...view details