ಭಾಯ್ಜಾನ್ ಸಲ್ಮಾನ್ ಖಾನ್ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸೂಪರ್ ಸ್ಟಾರ್ನನ್ನು ಪ್ರೀತಿಸುತ್ತಾರೆ, ಜೊತೆಗೆ ಆರಾಧಿಸುತ್ತಾರೆ. ಅಮೋಘ ಅಭಿನಯ, ಸ್ಕ್ರೀನ್ ಪ್ರಸೆನ್ಸ್ಗೆ ಹೆಸರುವಾಸಿಯಾಗಿರುವ ನಟನ ಸಮಾಜಸೇವೆ ಕೂಡಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ.
ನಟನ ಮಾನವೀಯ ಕಾರ್ಯಗಳು ವ್ಯಾಪಕವಾಗಿ ಜನರ ಗಮನ ಸೆಳೆದಿವೆ. ಶೂಟಿಂಗ್ ಸೆಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಲ್ಮಾನ್ ಖಾನ್ 35 ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದು, ಇದಕ್ಕೊಂದು ಉತ್ತಮ ಉದಾಹರಣೆ.
2009ರಲ್ಲಿ ಸಲ್ಮಾನ್ ಖಾನ್ ಅವರು ಪ್ರಭುದೇವ ಅವರ ಸಾಹಸ ಸಿನಿಮಾ 'ವಾಂಟೆಡ್'ನ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪರೋಪಕಾರಕ್ಕೆ ಹೆಸರಾದ ಸಲ್ಮಾನ್ ಸೆಟ್‌ನಲ್ಲಿ ತಮ್ಮ ಮಾನವೀಯ ಕಾರ್ಯದಿಂದ ಸದ್ದು ಮಾಡಿದ್ದರು. ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಕಸ ಗುಡಿಸುವ ನಾಲ್ವರು ಮಹಿಳೆಯರು ನಟನ ಬಳಿ ಸೀರೆ ಕೇಳಿದ್ದರು. ಆಗ, ಎಷ್ಟು ಮಹಿಳಾ ಸ್ವೀಪರ್‌ಗಳಿದ್ದೀರ ಎಂದು ಸಲ್ಮಾನ್ ಪ್ರಶ್ನಿಸಿದ್ದರು. ಆ ಕೂಡಲೇ 35 ಸೀರೆಗಳನ್ನು ಖರೀದಿಸಲು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ನಂತರ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಈ ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದರು. 35 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ವಾಂಟೆಡ್ ಬಾಕ್ಸ್ ಆಫೀಸ್‌ನಲ್ಲಿ 90 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಪ್ರಕರಣ: 'ಸೆಲೆಬ್ರಿಟಿಗಳು ಅಭಿಮಾನಿಗಳನ್ನು ನಿಯಂತ್ರಿಸಬೇಕು'; ಸಿಎಂ ರೇವಂತ್ ರೆಡ್ಡಿ
ಸಲ್ಮಾನ್ ಖಾನ್ ಅವರ ಈ ಉದಾತ್ತ ಹೆಜ್ಜೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮತ್ತಷ್ಟು ಸಂತೋಷಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದಾ ಸಹಾಯ ಮಾಡಲು ಸಿದ್ಧರಿರುತ್ತಾರೆ ಅನ್ನೋ ಅಭಿಮಾನಿಗಳ ನಂಬಿಕೆಯನ್ನು ಉಳಿಸುತ್ತಾರೆ. ನಾಳೆ ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬ. ಸದ್ಯ ಈ ವಿಶೇಷ ಕ್ಷಣವನ್ನು ನೆನಪಿಸಿಕೊಂಡರೆ ಅವರ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ. ವಾಂಟೆಡ್ ಚಿತ್ರವು ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಹಿಟ್ ಲಿಸ್ಟ್‌ನಲ್ಲಿ ಸೇರಿದೆ. 35 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ವಾಂಟೆಡ್ ಸಿನಿಮಾ ಉತ್ತಮ ಪ್ರತಿಕ್ರಿಯೆ ಗಳಿಸಿದ್ದಲ್ಲದೇ ಬಾಕ್ಸ್ ಆಫೀಸ್‌ನಲ್ಲಿ 90 ಕೋಟಿ ರೂಪಾಯಿಗೂ ಹೆಚ್ಚು ವ್ಯವಹಾರ ನಡೆಸಿತ್ತು.
ಇದನ್ನೂ ಓದಿ: 'ಏನುಕ್ಕಮ್ಮಾ ಇದಿಯಾ ಬಿಗ್ ಬಾಸ್ನಲ್ಲಿ, ದಮ್ಮಯ್ಯಾ ಹೊರಡಮ್ಮಾ ಮನೆಗೆ': ಚೈತ್ರಾ ಕುಂದಾಪುರಗೆ ರಜತ್ ಟಾಂಗ್
ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಚಿತ್ರ ಸಿಕಂದರ್. 2025ರ ಈದ್ ಸಂದರ್ಭ ಸಿಕಂದರ್ ಸಿನಿಮಾದಿಂದ ತೆರೆ ಮೇಲೆ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರಕ್ಕೆ ಎಆರ್ ಮುರುಗದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಲ್ಮಾನ್ 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಸಿಕಂದರ್ ಚಿತ್ರದಿಂದ ಅಭಿಮಾನಿಗಳಿಗೆ ಉಡುಗೊರೆ ಸಿಗಲಿದೆ.