ಬುದ್ಧಿವಂತ ನಟ ನಿರ್ದೇಶಕ ಖ್ಯಾತಿಯ ಉಪೇಂದ್ರ ನಟಿಸಿ, ನಿರ್ದೇಶಿಸಿರೋ 'ಯುಐ' ಸಿನಿಮಾ ಕಳೆದ ಶುಕ್ರವಾರ ಬಹಳ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಬರೋಬ್ಬರಿ 9 ವರ್ಷಗಳ ಅಂತರದ ನಂತರ ರಿಯಲ್ ಸ್ಟಾರ್ ನಿರ್ದೆಶನದಲ್ಲಿ ಬಂದ ಚಿತ್ರವಿದು. ಹಾಗಾಗಿ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ನೋಡಿದ ಅದೆಷ್ಟೋ ಮಂದಿಗೆ ಕಥಾಹಂದರ ಅರ್ಥವಾಗಿಲ್ಲ. ಅಷ್ಟರ ಮಟ್ಟಿಗೆ ವಿಭಿನ್ನವಾಗಿ ಕಥೆ ಹೆಣೆದು, ತೆರೆ ಮೇಲೆ ರವಾನಿಸಿದ್ದಾರೆ. ತಮ್ಮ ಸಿಗ್ನೇಚರ್ ಸ್ಟೈಲ್‌ನೊಂದಿಗೆ ಬಂದ ರಿಯಲ್ ಸ್ಟಾರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿದೆ.
'ಯುಐ' ಬಾಕ್ಸ್ ಆಫೀಸ್ ಕಲೆಕ್ಷನ್: ವಿಭಿನ್ನ ಸಿನಿಮೀಯ ಅನುಭವ ಒದಗಿಸಿರುವ 'ಯುಐ' 6 ದಿನಗಳಲ್ಲಿ ಒಟ್ಟು 25.38 ಕೋಟಿ ರೂಪಾಯಿ (ಇಂಡಿಯಾ ನೆಟ್ ಕಲೆಕ್ಷನ್) ಮಾಡಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಯುಐ ತೆರೆಕಂಡ ದಿನ ಶುಕ್ರವಾರದಂದು 6.95 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಎರಡನೇ ದಿನ ಮೊದಲ ವಾರಾಂತ್ಯ 5.6 ಕೋಟಿ ರೂ. ಕಲೆಕ್ಷನ್ ಆಗಿತ್ತು. ನಂತರ ಭಾನುವಾರದಂದು 5.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಆದ್ರೆ ಮೊದಲ ಸೋಮವಾರ ಸಿನಿಮಾ ತನ್ನ ಕಲೆಕ್ಷನ್ನಲ್ಲಿ ಗಮನಾರ್ಹ ಕುಸಿತ ಕಂಡಿತು. ಹೌದು, ಯುಐ ತನ್ನ ನಾಲ್ಕನೇ ದಿನ 2.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಐದನೇ ದಿನ ಮಂಗಳವಾರದಂದು 2.1 ಕೋಟಿ ರೂಪಾಯಿ, ಆರನೇ ದಿನ ಅಂದರೆ ಕಳೆದ ದಿನ 2.48 ಕೊಟಿ ರೂಪಾಯಿ ಕಲೆಕ್ಷನ್ ಮಾಡಿದೆ. 'ಮ್ಯಾಕ್ಸ್' ಅಬ್ಬರದ ನಡುವೆಯೂ ಕ್ರಿಸ್ಮಸ್ ರಜೆಯನ್ನು ಸದುಪಯೋಗಪಡಿಸಿಕೊಂಡ ಯುಐ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಿದೆ. ಆದ್ರೆ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಕ್ಯಾಕ್ನಿಲ್ಕ್ ವರದಿ ಮಾಡಿದಂತೆ ಇಂದಿನ ಸಂದರೆ ಗುರುವಾರದ ಕಲೆಕ್ಷನ್ 0.34 ಕೊಟಿ ರೂಪಾಯಿ ಆಗಲಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡ್ರ ನಿವಾಸಕ್ಕೆ ತೆರಳಿ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್, ಧನ್ಯತಾ
ಪುಷ್ಪ 2: ದಿ ರೂಲ್, ಮುಫಾಸಾ: ದಿ ಲಯನ್ ಕಿಂಗ್, ವಿದುತಲೈ 2ನಂತಹ ಬಿಗ್ ಪ್ರಾಜೆಕ್ಟ್ಗಳೊಂದಿಗೆ ಚಿತ್ರಮಂದಿರದಲ್ಲಿ ಯುಐ ಉತ್ತಮ ಪ್ರದರ್ಶನ ಕಂಡಿದೆ. ನಿನ್ನೆ, ಡಿಸೆಂಬರ್ 25ರಂದು ಸುದೀಪ್ ಮುಖ್ಯಭೂಮಿಕೆಯ ಮ್ಯಾಕ್ಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ವರುಣ್ ಧವನ್, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಬೇಬಿ ಜಾನ್ ಸೇರಿದಂತೆ ಕೆಲ ಸಿನಿಮಾಗಳು ಚಿತ್ರಮಂದಿರ ಪ್ರವೇಶಿಸಿವೆ. ಈ ಎಲ್ಲಾ ಸಿನಿಮಾಗಳ ನಡುವೆ ಯುಐ ಉತ್ತಮ ಗಳಿಕೆ ಮಾಡಿದ್ದು, ಇಂದಿನ ಕಲೆಕ್ಷನ್ ಎಷ್ಟಾಗಲಿದೆ ಎಂಬ ಕುತೂಹಲ ಅಭಿಮಾನಿಗಳದ್ದು.
ಇದನ್ನೂ ಓದಿ: ಮ್ಯಾಕ್ಸ್ ಭರ್ಜರಿ ಕಲೆಕ್ಷನ್: ಅದ್ಭುತ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸುದೀಪ್ ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹಿಂದಿನ ಸಿನಿಮಾಗಳಂತೆಯೇ ಡಿಫ್ರೆಂಟ್ ಸ್ಟೋರಿಯೊಂದಿಗೆ ಮರಳಿದ್ದಾರೆ. ಆ್ಯಕ್ಷನ್ ಕಟ್ ಹೇಳಿದ್ದಲ್ಲದೇ ಬುದ್ಧಿವಂತ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದವರು ಕೊಟ್ಟಿರುವ ವಿಮರ್ಶೆಗಳು ಕೂಡಾ ಬಹಳ ವಿಭಿನ್ನವಾಗಿವೆ.