ETV Bharat / state

ಲಿಂಗ ಪರಿವರ್ತನೆಗೊಳಗಾದವರಿಗೆ ಪರಿಷ್ಕೃತ ಜನನ ಪ್ರಮಾಣ ಪತ್ರ: ಕಾನೂನು ತಿದ್ದುಪಡಿಗೆ ಹೈಕೋರ್ಟ್ ಸೂಚನೆ - HIGH COURT

ಲಿಂಗ ಪರಿವರ್ತನೆಗೆ ಒಳಗಾದವರಿಗೆ ಪರಿಷ್ಕೃತ ಜನನ ಪ್ರಮಾಣ ಪತ್ರ ನೀಡಲು ಕಾನೂನಿಗೆ ತಿದ್ದುಪಡಿ ಮಾಡಲು ಸಲಹೆ ನೀಡುವಂತೆ ಕಾನೂನು ಆಯೋಗಕ್ಕೆ ಹೈಕೋರ್ಟ್ ಸೂಚಿಸಿದೆ.

high court
ಹೈಕೋರ್ಟ್ (ETV Bharat)
author img

By ETV Bharat Karnataka Team

Published : 16 hours ago

ಬೆಂಗಳೂರು: ಪುರುಷನಾಗಿ ಹುಟ್ಟಿ ಲಿಂಗ ಪರಿವರ್ತನೆ ಮಾಡಿಕೊಂಡು ತೃತೀಯ ಲಿಂಗಿಯಾಗಿ ಬದಲಾದ ವ್ಯಕ್ತಿಗೆ ಲಿಂಗ ಮತ್ತು ಹೆಸರು ಬದಲಾವಣೆ ಮಾಡಿ ಪರಿಷ್ಕೃತ ಜನನ ಪ್ರಮಾಣ ಪತ್ರ ವಿತರಣೆ ಮಾಡುವುದಕ್ಕೆ ಕಾನೂನುಗಳ ಅಗತ್ಯ ತಿದ್ದುಪಡಿಗೆ ಸಲಹೆ ನೀಡುವಂತೆ ಕಾನೂನು ಆಯೋಗಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಅಲ್ಲದೆ, ಲಿಂಗ ಪರಿವರ್ತನೆ ಮಾಡಿಕೊಂಡ ವ್ಯಕ್ತಿಯೊಬ್ಬರಿಗೆ ಜನನ ಪ್ರಮಾಣ ಪತ್ರದಲ್ಲಿ ಲಿಂಗ ಮತ್ತು ಹೆಸರನ್ನು ಬದಲಾವಣೆಗೆ ಅವಕಾಶ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಯ ಜನನ - ಮರಣ ನೋಂದಣಾಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.

ಪುರುಷನಾಗಿ ಹುಟ್ಟಿ ಶಸ್ತ್ರ ಚಿಕಿತ್ಸೆಯ ಮೂಲಕ ಲಿಂಗವನ್ನು ಬದಲಾಯಿಸಿಕೊಂಡು ಮಹಿಳೆಯಾದ ವ್ಯಕ್ತಿಯು ತನ್ನ ಜನನ ಪ್ರಮಾಣಪತ್ರದಲ್ಲಿ ಹೆಸರು ಮತ್ತು ಲಿಂಗವನ್ನು ಬದಲಾಯಿಸಲು ಮಂಗಳೂರು ಮಹಾನಗರ ಪಾಲಿಕೆಯ ಜನನ - ಮರಣ ನೋಂದಣಾಧಿಕಾರಿಗೆ ಸೂಚನೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಜನನ ಮತ್ತು ಮರಣ ನೋಂದಣಿ ಕಾಯಿದೆ 1969ಕ್ಕೆ ತಿದ್ದುಪಡಿಗಳನ್ನು ಮಾಡುವವರೆಗೂ ಲಿಂಗವನ್ನು ಬದಲಾಯಿಸಿಕೊಂಡವರಿಗೆ ಪರಿಷ್ಕೃತ ಜನನ - ಮರಣ ಪ್ರಮಾಣಪತ್ರವನ್ನು ವಿತರಣೆ ಮಾಡಬೇಕು ಎಂದು ಪೀಠ ಸೂಚನೆ ನೀಡಿದೆ.

ಇದನ್ನೂ ಓದಿ: BMTC ಚಾಲಕ ಕಂ ನಿರ್ವಾಹಕ ವಜಾ ಕೇಸ್: ಅನಧಿಕೃತವಾಗಿ ಉದ್ಯೋಗಕ್ಕೆ ಗೈರು ದುರ್ನತಡೆಗೆ ಸಮ ಎಂದ ಹೈಕೋರ್ಟ್

ತೃತಿಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019ರ ಪ್ರಕಾರ ಲಿಂಗ ಬದಲಾವಣೆ ಪ್ರಕ್ರಿಯೆಗಳಿಗೆ ಒಳಗಾದ ವ್ಯಕ್ತಿಯು ಲಿಂಗ ಪರಿವರ್ತನೆಯಾದ ಬಳಿಕ ಎಲ್ಲ ದಾಖಲೆಗಳಲ್ಲಿ ಹೆಸರು ಮತ್ತು ಲಿಂಗ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ಲಿಂಗವನ್ನು ಬದಲಾಯಿಸಿಕೊಂಡ ಕುರಿತು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದ ಬಳಿಕ ಪರಿಷ್ಕೃತ ಜನನ ಪ್ರಮಾಣ ಪತ್ರ ಪಡೆಯುವುದಕ್ಕೆ ಅವಕಾಶ ಇಲ್ಲವಾಗಿದೆ. ಆದ್ದರಿಂದ ಕಾಯಿದೆಯ ಅನ್ವಯ ಜನನ ಮತ್ತು ಮರಣ ನೋಂದಣಿ ಕಾಯಿದೆ 1969ಕ್ಕೆ ಸೂಕ್ತ ರೀತಿಯಲ್ಲಿ ನಿಯಮಗಳಿಗೆ ತಿದ್ದುಪಡಿ ತರುವುದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುವಂತೆ ಕಾನೂನು ಆಯೋಗಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: ಈ ಪ್ರಕರಣದಲ್ಲಿ ಅರ್ಜಿದಾರರು 1983 ಏಪ್ರಿಲ್ 6ರಂದು ಪುರುಷನಾಗಿ ಜನಿಸಿದ್ದರು.‌ 2007ರ ಜುಲೈ 16ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮನೋವಿಜ್ಞಾನ ತಪಾಸಣೆಯ ಸಂದರ್ಭದಲ್ಲಿ ಇವರ ದೇಹದಲ್ಲಿ ಮಹಿಳೆಯ ಭಾವನೆ ವ್ಯಕ್ತವಾಗಿದ್ದು, ಲಿಂಗತ್ವ ಇರುಸುಮುರುಸಿನಿಂದ (gender Dysphoria) ಬಳಲುತ್ತಿದ್ದರು. ಅವರನ್ನು ವೈದ್ಯರು ಪರೀಕ್ಷಿಸಿದ್ದು, ಪ್ರಾಧಿಕಾರವು ಮರು ಮೌಲ್ಯಮಾಪನ ನಡೆಸಿದ ಬಳಿಕ ಅರ್ಜಿದಾರರು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಹೆಸರು ಬದಲಿಸಿಕೊಂಡಿದ್ದು, ಆಧಾರ್‌, ಚಾಲನಾ ಪರವಾನಗಿ ಮತ್ತು ಪಾಸ್‌ಪೋರ್ಟ್‌ ಇತ್ಯಾದಿ ದಾಖಲೆಗಳಲ್ಲಿ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು.

ಅಲ್ಲದೆ, ಮಂಗಳೂರು ನಗರ ಪಾಲಿಕೆಯ ಜನನ ಮತ್ತು ಮರಣ ಸರ್ಟಿಫಿಕೆಟ್‌ ನೀಡುವ ರಿಜಿಸ್ಟ್ರಾರ್‌/ಆರೋಗ್ಯಾಧಿಕಾರಿಗೆ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡುವಂತೆ ಕೋರಿದ್ದರು. ಆಗ ಆರೋಗ್ಯಾಧಿಕಾರಿಯು ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್‌ 15ರ ಅಡಿ ಈಗಾಗಲೇ ನೀಡಿರುವ ಸರ್ಟಿಫಿಕೆಟ್‌ನಲ್ಲಿ ದೋಷಗಳಿದ್ದರೆ ಸರಿಪಡಿಸಬಹುದೇ ವಿನಾಃ ಅರ್ಜಿದಾರರು ಕೋರುವ ಬದಲಾವಣೆ ಮಾಡಲಾಗದು ಎಂದು ಹೇಳಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 'ಕನ್ನಡ ಭಾಷೆ, ನಾಡಗೀತೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ' ಸೇರಿ 2024ರಲ್ಲಿ ಹೈಕೋರ್ಟ್ ನೀಡಿದ ಅಭಿಪ್ರಾಯಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.