ಕರ್ನಾಟಕ

karnataka

ETV Bharat / entertainment

'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ಹಾಡಿಗೆ ಮನಸೋತ ರಿಯಲ್ ಸ್ಟಾರ್ ಉಪ್ಪಿ - ಉಪೇಂದ್ರ

ಬಹುನಿರೀಕ್ಷಿತ 'ಕೆರೆಬೇಟೆ' ಸಿನಿಮಾದ 'ಮಲೆನಾಡ ಗೊಂಬೆ' ಹಾಡನ್ನು ನಟ ಉಪೇಂದ್ರ ಅನಾವರಣಗೊಳಿಸಿದ್ದಾರೆ.

kerebete movie
'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ರಿಲೀಸ್​

By ETV Bharat Karnataka Team

Published : Feb 3, 2024, 1:20 PM IST

'ಕೆರೆಬೇಟೆ' ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ 'ಕೆರೆಬೇಟೆ' ತಂಡ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಎದುರು ಬಂದಿದೆ. ಅದ್ಧೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಎಂದರೆ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡುವ ಮೂಲಕ ಗೌರಿ ಶಂಕರ್ ಸಿನಿಮಾಗೆ ಸಾಥ್​ ನೀಡಿದ್ದಾರೆ.

'ಕೆರೆಬೇಟೆ' ತಂಡದೊಂದಿಗೆ ಉಪೇಂದ್ರ

'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ರಿಲೀಸ್​.. 'ಮಲೆನಾಡ ಗೊಂಬೆ' ಎನ್ನುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ರಿಯಲ್ ಸ್ಟಾರ್ ಉಪೇಂದ್ರ ಕೂಡ ಈ ಹಾಡಿಗೆ ಫಿದಾ ಆಗಿದ್ದಾರೆ. ಮಲೆನಾಡಿನ ಸುತ್ತಮುತ್ತವೇ ಈ ಹಾಡಿನ ಚಿತ್ರೀಕರಣ ನಡೆಸಿರುವುದು ವಿಶೇಷ.

'ಕೆರೆಬೇಟೆ'ಯ 'ಮಲೆನಾಡ ಗೊಂಬೆ' ರಿಲೀಸ್​

'ಕೆರೆಬೇಟೆ' ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ನಾಯಕ ಗೌರಿಶಂಕರ್ ಮತ್ತು ನಾಯಕಿ ಬಿಂಧು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ರೊಮ್ಯಾಂಟಿಕ್ ಹಾಡು ಇದಾಗಿದೆ. ಅಂದಹಾಗೆ ಈ ಸುಂದರ ಹಾಡಿಗೆ 'ಕಾಂತಾರ' ಸಿನಿಮಾದ 'ಸಿಂಗಾರ ಸಿರಿಯೇ...' ಹಾಡಿನ ಖ್ಯಾತಿಯ ಪ್ರಮೋದ್ ಮರುವಂತೆ ಸಾಹಿತ್ಯ ರಚಿಸಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡನ್ನು ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.

'ಮಲೆನಾಡ ಗೊಂಬೆ' ಹಾಡಿಗೆ ಮನಸೋತ ಉಪ್ಪಿ

ಇದನ್ನೂ ಓದಿ:I am alive; ನಾನು ಜೀವಂತವಾಗಿದ್ದೇನೆ ಎಂದು ಹೇಳಿಕೊಂಡ ನಟಿ ಪೂನಂ ಪಾಂಡೆ

ಈ ಹಾಡಿನ ಚಿತ್ರೀಕರಣದ ಅನುಭವ ತೆರೆದಿಟ್ಟ ಸಿನಿಮಾ ತಂಡ, 'ಈ ಹಾಡನ್ನು ತುಂಬಾ ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಅತಿಯಾದ ಮಳೆಯಿಂದ ಅನೇಕ ಬಾರಿ ಚಿತ್ರಿಕರಣ ನಿಲ್ಲಿಸಲಾಗಿತ್ತು. ಮನುಷ್ಯರು ಓಡಾಡದೇ ಇರುವ ಜಾಗದಲ್ಲಿ ಶೂಟಿಂಗ್ ನಡೆಸಿದ್ದೇವೆ. ಪ್ರಾಣಿಗಳ ಭಯ ಕೂಡ ಇತ್ತು. ಮಲೆನಾಡಿನ ರಿಮೋಟ್ ಏರಿಯಾದಲ್ಲಿ ನಾಲ್ಕು ದಿನಗಳ ಕಾಲ ಈ ಹಾಡು ಸೆರೆಹಿಡಿದಿದ್ದೇವೆ. ಈ ಹಾಡಿಗಾಗಿ ಹರಸಾಹಸ ಪಟ್ಟಿದ್ದೇವೆ' ಎಂದು ತಿಳಿಸಿದ್ದಾರೆ.

'ಮಲೆನಾಡ ಗೊಂಬೆ' ಅನಾವರಣಗೊಳಿಸಿದ ಉಪೇಂದ್ರ

ಇದನ್ನೂ ಓದಿ:ಸ್ಯಾಂಡಲ್​​ವುಡ್​ ಅಂಗಳದಲ್ಲಿ 'ಮತ್ಸ್ಯಗಂಧ' ಘಮಲು: ಪೃಥ್ವಿ ಅಂಬಾರ್ ಸಿನಿಮಾದ ಶೂಟಿಂಗ್​​ ಫೋಟೋಗಳಿವು

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ 'ಕೆರೆಬೇಟೆ' ಸಿನಿಮಾ ಈ ಹಾಡಿನ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಮುಂದಿನ ತಿಂಗಳು ಅಂದರೆ ಮಾರ್ಚ್ 15 ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ 'ಕೆರಬೇಟೆ'ಯು ಮಲೆನಾಡಿನ ಮೀನು ಬೇಟೆಯನ್ನು ಆಧರಿಸಿದೆ. ಮೀನು ಬೇಟೆ ಸಂಸ್ಕೃತಿ ಚಿತ್ರದಲ್ಲಿ ಹೇಗೆ ಮೂಡಿ ಬಂದಿದೆ ಅನ್ನೋದು ಅಭಿಮಾನಿಗಳ ಕುತೂಹಲ.

ABOUT THE AUTHOR

...view details