ಕೆಜಿಎಫ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಗ್ಲ್ಯಾಮರ್ ಲೋಕ ತೊರೆದು ಬಹಳ ಕಾಲವಾಗಿದೆ. ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಬರದಿದ್ರೂ ನಟಿಯ ಖ್ಯಾತಿ ಜೀವಂತವಾಗಿದೆ. ಅಷ್ಟಕ್ಕೂ ಒಂದು ಸಮಯದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ಖ್ಯಾತ ನಟಿ ಅಲ್ಲವೇ?. ಇದೀಗ ತಮ್ಮ ಹೊಸ ಪೋಸ್ಟ್ ಮೂಲಕ ಸದ್ದು ಮಾಡಿದ್ದಾರೆ.
ನಟಿಗೆ 40 ವರ್ಷ ಅಂದ್ರೆ ನಂಬೋದು ಕಷ್ಟ ಅಂತಾರೆ ಫ್ಯಾನ್ಸ್: ಮಕ್ಕಳಾದ ಬಳಿಕ ಸಿನಿಮಾಗಳಿಂದ ದೂರವೇ ಉಳಿದಿರುವ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್. ಆಗಾಗ್ಗೆ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಸೌಂದರ್ಯ, ಉಡುಗೆ-ತೊಡುಗೆಗಳ ಆಯ್ಕೆ ವಿಚಾರವಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುತ್ತಲೇ ಇರುತ್ತಾರೆ. ನಟಿಗೆ 40 ವರ್ಷ ಅಂದ್ರೆ ಹುಬ್ಬೇರಿಸುವವರ ಸಂಖ್ಯೆ ಹೆಚ್ಚೇ ಇದೆ. ಆ ಮಟ್ಟಿಗೆ ಫಿಟ್ನೆಸ್, ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ ರಾಕಿಂಗ್ ಬ್ಯೂಟಿ.
ಮಂತ್ರಮುಗ್ಧಗೊಳಿಸುವ ಸಾಂಪ್ರದಾಯಿಕ ನೋಟ: ಇದೀಗ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಆಕರ್ಷಕ ಫೋಟೋ ಹಂಚಿಕೊಂಡಿದ್ದಾರೆ. ರೇಷ್ಮೆ ಸೀರೆಯುಟ್ಟಿರುವ ನಟಿಯ ಸಾಂಪ್ರದಾಯಿಕ ನೋಟ ಅಭಿಮಾನಿಗಳನ್ನು ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗಿದೆ. ಸುಂದರಿಯ ಸೊಬಗಿಗೆ ಸಾಟಿ ಯಾರು? ಎಂಬಂತಿದೆ ಈ ಒಂದು ಫೋಟೋ. ಕೇಸರಿ ರೇಷ್ಮೆ ಸೀರೆ, ಶೃಂಗಾರಗೊಳಿಸಿದ ರವಿಕೆ, ಸಾಂಪ್ರದಾಯಿಕ ನೋಟ ಸಂಪೂರ್ಣಗೊಳಿಸಿಕೊಳ್ಳಲು ತೊಟ್ಟ ಆಭರಣಗಳು ನಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ರಾಧಿಕಾ ದೇವತೆಯಂತೆ ಕಾಣಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಇದನ್ನೂ ಓದಿ: ಚಿತ್ರರಂಗದಲ್ಲಿ 29 ವರ್ಷ: ಸಾಥ್ ಕೊಟ್ಟವರಿಗೆ 'ಥ್ಯಾಂಕ್ಸ್'; ಅಭಿಮಾನಿಗಳು ನನ್ನ 'ಸೌಭಾಗ್ಯ'ವೆಂದ ಕಿಚ್ಚ
ಚೆಲುವೆಗೆ ಅಭಿಮಾನಿಗಳ ಪ್ರೀತಿಯ ಧಾರೆ: ನಟಿ ತಮ್ಮ ಸುಂದರ ಫೋಟೋ ಜೊತೆಗೆ, ''ರೆಡಿಯಾಗುತ್ತಿದ್ದೇನೆ ಹಾಗೇ ಇತ್ತೀಚೆಗೆ ನಾನು ನಿಮ್ಮನ್ನು ಭೇಟಿ ಮಾಡಿಲ್ಲ ಎಂಬುದನ್ನು ಅರಿತುಕೊಂಡೆ! ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ'' ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಅಲ್ಲಿಗೆ ಈ ಪೋಟೋ ತಮ್ಮನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳಿಗಾಗಿ ಹಂಚಿಕೊಂಡಿರುವ ಪೋಸ್ಟ್ ಆಗಿದೆ. ಫ್ಯಾನ್ಸ್ ತಮ್ಮ ಮೆಚ್ಚಿನ ನಟಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ: ವಿದ್ಯಾಭ್ಯಾಸಕ್ಕೆ ಅಡ್ಡಿಯಾಯ್ತು ಬಡತನ, ಅದೃಷ್ಟ ಬದಲಿಸಿತು ಕುಂಭಮೇಳ: ಬಾಲಿವುಡ್‌ಗೆ 'ಮೊನಾಲಿಸಾ' ಎಂಟ್ರಿ
ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬಹುತೇಕರು, ನಮ್ಮ ಅತ್ತಿಗೆ ಎಂದು ಕಮೆಂಟ್ ಮಾಡಿದ್ದಾರೆ. ಯಶ್ ಅವರನ್ನು ಬಹುತೇಕರು ತಮ್ಮ ಅಣ್ಣ ಎಂದೇ ಭಾವಿಸಿದ್ದಾರೆ. ನಮ್ಮ ಕಡೆ ಗಮನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ತಿಳಿಸಿದ್ದಾರೆ. ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ. 'ಸಾಕ್ಷಾತ್ ಮಹಾಲಕ್ಷ್ಮೀನೆ ನಮ್ಮ ರಾಧೇ' ಎಂದು ಫ್ಯಾನ್ ಓರ್ವರು ಕಮೆಂಟ್ ಮಾಡಿದ್ದಾರೆ. ತುಂಬಾ ದಿನಗಳಿಂದ ಕಾಣಿಸಿಕೊಂಡಿರಲಿಲ್ಲ, ಹೇಗಿದ್ದೀರಾ? ಎಂದು ನೆಟ್ಟಿಗರೋರ್ವರು ಪ್ರಶ್ನಿಸಿದ್ದಾರೆ. ಹೀಗೆ ನಟಿಯ ಕಮೆಂಟ್ ವಿಭಾಗ ಪ್ರೀತಿ ತುಂಬಿದ ಸಂದೇಶಗಳಿಂದ ತುಂಬಿ ತುಳುಕುತ್ತಿದೆ. ನೆಟ್ಟಿಗರು ಈ ಫೋಟೋವನ್ನು ವೈರಲ್ ಮಾಡುತ್ತಿದ್ದಾರೆ.