ಕರ್ನಾಟಕ

karnataka

ETV Bharat / entertainment

26 ವರ್ಷಗಳ ಬಳಿಕ ನಾಳೆ 'A' ರೀ ರಿಲೀಸ್: ಇದು ನನ್ನ ಬದುಕು ಬದಲಿಸಿದ ಸಿನಿಮಾ ಎಂದ ನಟಿ ಚಾಂದಿನಿ - A Movie Re Release - A MOVIE RE RELEASE

26 ವರ್ಷಗಳ ಬಳಿಕ 'A' ಸಿನಿಮಾ ರೀ ರಿಲೀಸ್ ಆಗುತ್ತಿದೆ.

Chandini
ನಟಿ ಚಾಂದಿನಿ (Pic: ETV Bharat)

By ETV Bharat Karnataka Team

Published : May 16, 2024, 11:13 AM IST

Updated : May 16, 2024, 1:15 PM IST

'A'. ಇದು ಕನ್ನಡ ಚಿತ್ರರಂಗದ ಬ್ಲಾಕ್​​ಬಸ್ಟರ್ ಸಿನಿಮಾ. ರಿಯಲ್​ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುವ ಜೊತೆಗೆ ಆ್ಯಕ್ಷನ್​​ ಕಟ್​ ಹೇಳಿದ್ದ ಈ ಸಿನಿಮಾದಲ್ಲಿ ನಾಯಕಿಯಾಗಿ ಚಾಂದಿನಿ ಅಭಿನಯಿಸಿದ್ದರು. ಮೇ 17ರಂದು, ಅಂದರೆ ನಾಳೆ 'A' ರೀ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಚಾಂದಿನಿ ಚಿತ್ರದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

'ಎ' ಚಾಂದಿನಿ ಅವರ ಜೀವನವನ್ನೇ ಬದಲಿಸಿದ ವಿಶೇಷ ಸಿನಿಮಾ. ಇದು ಕನ್ನಡ ಚಿತ್ರರಂಗದ ಒಂದು ಮೈಲಿಗಲ್ಲು ಸಿನಿಮಾ ಎಂದರೂ ತಪ್ಪಾಗದು. ಈ ರೀತಿಯಲ್ಲೂ ಸಿನಿಮಾ ಮಾಡಬಹುದು ಎಂದು ಸಿನಿಮಾ ಜಗತ್ತಿಗೆ ತೋರಿಸಿಕೊಟ್ಟವರು ಉಪೇಂದ್ರ. A ಸಿನಿಮಾ ಆ ಕಾಲಕ್ಕೆ ಹೇಗೆ ಪ್ರಸ್ತುತವೋ, ಈ ಕಾಲಕ್ಕೂ ಅಷ್ಟೇ ಪ್ರಸ್ತುತ ಎಂಬುದು ಸಿನಿಮಾ ಪ್ರೇಮಿಗಳ ಮಾತು.

A ಸಿನಿಮಾ ಕ್ಷಣ (Pic: 'A' movie Clip)

ನಟಿ ಚಾಂದಿನಿ ಎ ಸಿನಿಮಾದಲ್ಲಿ ಹೇಗಿದ್ದರೋ, ಈಗಲೂ ಹಾಗೆಯೇ ಇದ್ದಾರೆ. ಅದಕ್ಕವರು ನೀಡುವ ಕಾರಣವೇನು ಗೊತ್ತಾ?. ''ನನ್ನ ಜೀವನವನ್ನೇ ಬದಲಿಸಿದ ಸಿನಿಮಾ ಅದು. ಅದರಿಂದ ನನಗೆ ಸಿಕ್ಕಿದ್ದು ಎರಡು ವಿಚಾರಗಳು. ಒಂದು ಕನ್ನಡ ಜನರ ಪ್ರೀತಿ, ಮತ್ತೊಂದು ಆ ಸಿನಿಮಾದ ಫೇಮಸ್ ಡೈಲಾಗ್ "GOD IS GREAT" ನಂತೆ ಸಿಕ್ಕ ಆಶೀರ್ವಾದ. ನಾನಿಂದಿಗೂ A ಚಾಂದಿನಿ ರೀತಿಯೇ ಇದ್ದೇನೆ. ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ 'A' ಅಂತಾರೆ" ಅಂತಾರೆ ಚಾಂದಿನಿ.

ಉಪೇಂದ್ರ ನಿರ್ದೇಶನದ ಬಗ್ಗೆ ವರ್ಣಿಸಲು ಪದಗಳಿಲ್ಲ. ಅಂದಿಗೂ ಇಂದಿಗೂ ಉಪೇಂದ್ರ ನನ್ನ ಮೆಚ್ಚಿನ ನಿರ್ದೇಶಕ. ಗುರುಕಿರಣ್ ಸಂಗೀತದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಕನ್ನಡಿಗರು ಎ ಚಿತ್ರದಿಂದ ಇಲ್ಲಿಯವರೆಗೂ ನನಗೆ ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ. ಇಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದಗಳು. ಮೇ 17ರಂದು ಚಿತ್ರ ರೀ ರಿಲೀಸ್ ಆಗುತ್ತಿದೆ. ಈಗಲೂ ಭರ್ಜರಿ ಯಶಸ್ಸು ಕಾಣಲಿದೆ ಎಂದು ಚಾಂದಿನಿ ವಿಶ್ವಾಸ ವ್ಯಕ್ತಪಡಿಸಿದರು. ಇದರ ಜೊತೆಗೆ, ಒಳ್ಳೆಯ ಕಥೆ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಕೂಡ ತಿಳಿಸಿದ್ದಾರೆ.

ಚಾಂದಿನಿ (Pic: ETV Bharat)

ಇದನ್ನೂ ಓದಿ:6 ಮುದ್ದು ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್​​ ಶೆಟ್ಟಿ ಹಂಚಿಕೊಂಡ ವಿಡಿಯೋ ನೋಡಿ - Charlie Puppies

ಸ್ಯಾಂಡಲ್​ವುಡ್​ನ ಖ್ಯಾತ ನಟ-ನಿರ್ದೇಶಕ ಉಪೇಂದ್ರ ರಾವ್​​​ ನಟಿಸಿ, ನಿರ್ದೇಶಿಸಿದ್ದ 'A' ಸಿನಿಮಾ 1998ರ ಫೆಬ್ರವರಿ 12ರಂದು ಕರ್ನಾಟಕದಾದ್ಯಂತ ಚಿತ್ರಮಂದಿರ ಪ್ರವೇಶಿಸಿತ್ತು. ಗುರುಕಿರಣ್​ ಸಂಗೀತವಿರುವ ಈ ಸಿನಿಮಾವನ್ನು ಯಶ್​ ರಾಜ್​​ ಫಿಲ್ಮ್ಸ್​​ ವಿತರಿಸಿತ್ತು. ಅಂದಿನ ಕಾಲಕ್ಕೆ ಚಿತ್ರ 20 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿತ್ತು ಎಂದು ಹೇಳಲಾಗಿದೆ.

ಇದನ್ನೂ ಓದಿ:ಆಂಧ್ರಪ್ರದೇಶದ ಪ್ರಸಿದ್ಧ ದೇಗುಲಕ್ಕೆ ₹12.5 ಲಕ್ಷ ದೇಣಿಗೆ ನೀಡಿದ ಜೂ.ಎನ್​ಟಿಆರ್​ - Jr NTR

Last Updated : May 16, 2024, 1:15 PM IST

ABOUT THE AUTHOR

...view details