ನವದೆಹಲಿ: 2025ರ ಆರಂಭದಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಎಲೆಕ್ಷನ್ಗೆ ಸಜ್ಜಾಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಮಾಜಿ ಶಾಸಕ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದ ನಾಯಕ ಸುಖ್ಬೀರ್ ದಲಾಲ್ ಜೈನ್ ಬಿಜೆಪಿ ಸೇರಿದ್ದಾರೆ.
ಕೇಂದ್ರ ಸಚಿವ ಹರ್ಷಾ ಮಲ್ಹೋತ್ರಾ, ಬಿಜೆಪಿ ರಾಜ್ಯ ಅಧ್ಯಕ್ಷ ವಿರೇಂದ್ರ ಸಚ್ದೇವ್ ಮತ್ತು ಇತರ ರಾಜಕೀಯ ನಾಯಕರ ಸಮ್ಮುಖದಲ್ಲಿ ಅವರು ದೆಹಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿದ್ದಾರೆ. ಗುರುದ್ವಾರ ನಿರ್ವಹಣಾ ಸಮಿತಿಯ ಕಾರ್ಯಕಾರಿ ಸದಸ್ಯ ಬಲ್ಬೀರ್ ಸಿಂಗ್, ಮುಂಡ್ಕಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು
ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆಯಿಂದಾಗಿ ಎಎಪಿ ತೊರೆದಿಲ್ಲ. ಬದಲಾಗಿ ಬಿಜೆಪಿ ನೀತಿಯಲ್ಲಿ ವಿಶ್ವಾಸ ಹುಟ್ಟಿ ಈ ನಿರ್ಧಾರ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಶೀಶಾ ಮಹಲ್ ಕಟ್ಟಿದಾಗಿನಿಂದ ಎಎಪಿ ಭ್ರಷ್ಟಚಾರ ಎಲ್ಲ ಮೀತಿ ಮೀರಿದೆ. ಎಎಪಿ ಸರ್ಕಾರ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷ್ಯಿಸಿ, ಭ್ರಷ್ಟಚಾರವನ್ನೇ ಆದ್ಯತೆಯಾಗಿ ಪರಿಗಣಿಸಿದೆ ಎಂದು ಇದೇ ವೇಳೆ ಅವರು ಹರಿಹಾಯ್ದಿದ್ದಾರೆ.
ಬಿಜೆಪಿ ಸೇರಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ ದೇಶದ ಪ್ರಗತಿಗೆ ಕಾರ್ಯ ನಿರ್ವಹಿಸಲು ಬದ್ದವಾಗಿರುವುದಾಗಿ ತಿಳಿಸಿದರು.
ಪ್ರಧಾನಿಗಳು ಸಿಖ್ ಸಮುದಾಯಕ್ಕೆ ಸಾಕಷ್ಟು ಕಾರ್ಯ ನಿರ್ವಹಿಸಿದ್ದು, ಬಿಜೆಪಿ ಸೇರಲು ನನಗೆ ಈ ಅಂಶ ಪ್ರೇರಣೆಯಾಯಿತು ಎಂದಿದ್ದಾರೆ.
ಎಎಪಿ ತೊರೆದ ಹಲವು ನಾಯಕರು: ಚುನಾವಣೆ ಹೊತ್ತಲ್ಲಿಎಎಪಿಯ ಅನೇಕ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ಎಎಪಿಗೆ ಆಘಾತ ಮೂಡಿಸಿದ್ದಂತೂ ಸುಳ್ಳಲ್ಲ. ಇತ್ತೀಚೆಗಷ್ಟೇ ಕೈಲಾಶ್ ಗೆಹ್ಲೋಟ್ ಮತ್ತು ಹರ್ಶರಣ್ ಸಿಂಗ್ ಬಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ನಾವೀನ್ಯತೆ ಮೂಲಕ ಮಹಾನ್ ಕ್ರಾಂತಿ ಮಾಡಿದ ಯುವ ರೈತ; ಹಲವು ಅನ್ನದಾತರಿಗೆ ಮಾದರಿ ವೆಂಕಟೇಶ್