ಬಾಲಿವುಡ್ ನಟ ಬಾಬಿ ಡಿಯೋಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ತಾರೆಗೆ ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ನಟನ ಮುಂಬರುವ ಚಿತ್ರವಾದ 'ಕಂಗುವ'ದ ತಂಡ ಕೂಡ ನಟನ ಲುಕ್ ಅನಾವರಣಗೊಳಿಸುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ.
ಕಂಗುವ ಚಿತ್ರ ತಯಾರಕರಿಂದು ಸಿನಿಮಾದ ಉಧಿರನ್ ಪಾತ್ರದ ಸುತ್ತಲಿನ ಊಹಾಪೋಹಗಳನ್ನು ಕೊನೆಗೊಳಿಸಿದ್ದಾರೆ. ಬಾಬಿ ಡಿಯೋಲ್ ಅವರ ಹುಟ್ಟುಹಬ್ಬದ ನಿಮಿತ್ತ ಕಂಗುವ ಚಿತ್ರತಂಡ ಇಂದು ಅವರ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದೆ. ಇದನ್ನು ನೋಡಿದ ಸಿನಿಪ್ರಿಯರ ಸಿನಿಮಾ ನೋಡುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ನಟ ಬಾಬಿ ಡಿಯೋಲ್ ಸೇರಿದಂತೆ ಚಿತ್ರತಂಡ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ 'ಕಂಗುವ'ನ ಉಧಿರನ್ ಲುಕ್ ಶೇರ್ ಮಾಡಿದ್ದಾರೆ. ಬಾಬಿ ಡಿಯೋಲ್ ನಿರ್ವಹಿಸುತ್ತಿರುವ ಉಧಿರನ್ ಪಾತ್ರದ ಚಿತ್ರಣ ಈ ಪೋಸ್ಟರ್‌ನಲ್ಲಿ ಸಿಕ್ಕಿದೆ. ಪೋಸ್ಟರ್ನ ಕ್ಯಾಪ್ಷನ್ಗಳು ಉಧಿರನ್ ಅವರನ್ನು "ನಿರ್ದಯ, ಶಕ್ತಿಶಾಲಿ, ಮರೆಯಲಾಗದ" ಎಂದು ವಿವರಿಸಿದೆ. ಬಾಬಿ ಡಿಯೋಲ್ ಪಾತ್ರವನ್ನು ಫೈನಲಿ ಅನಾವರಣಗೊಳಿಸಲಾಗಿದೆ. ನಟ ಸ್ವತಃ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಳ್ಳೋ ಮುಖೇನ ತಮ್ಮ ಪಾತ್ರದ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದ್ದಾರೆ.
ಪೋಸ್ಟರ್‌ನಲ್ಲಿ, ಉಧಿರನ್ ಪಾತ್ರವನ್ನು ರಕ್ತಸಿಕ್ತ ರಕ್ಷಾಕವಚವನ್ನು ಧರಿಸಿರುವಂತೆ ಚಿತ್ರಿಸಲಾಗಿದೆ. ಅವರ ಎಡಗಣ್ಣು ಗಮನ ಸೆಳೆದಿದೆ. ಜಿಂಕೆ ಕೊಂಬುಗಳಿಂದ ಅಲಂಕರಿಸಲ್ಪಟ್ಟಿರುವ ಉಧಿರನ್‌ನ ನೋಟ ಬಹಳಾನೇ ವಿಭಿನ್ನವಾಗಿದ್ದು, ಪಾತ್ರದ ತೀವ್ರತೆಯ ಒಂದು ನೋಟವನ್ನು ಬಹಿರಂಗಪಡಿಸಿದೆ. ಶಿವ ನಿರ್ದೇಶನದ ಕಂಗುವ ಚಿತ್ರದಲ್ಲಿ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿರ್ವಹಿಸಿದ್ದರೆ, ಸೌತ್ ಸೂಪರ್ ಸ್ಟಾರ್ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್‌ನ ಪಾತ್ರ ಉಧಿರನ್‌ನ ಒಂದು ನೋಟ ಬಹಿರಂಗವಾಗಿದ್ದರೆ, ಉಳಿದ ಪಾತ್ರ ವರ್ಗದ ವಿವರಗಳು ಇನ್ನೂ ಬಹಿರಂಗವಾಗಿಲ್ಲ.
ಇದನ್ನೂ ಓದಿ:ಎರಡೇ ದಿನಕ್ಕೆ ಭಾರತದಲ್ಲಿ ₹ 60 ಕೊಟಿ ದಾಟಿದ 'ಫೈಟರ್': ಯಶಸ್ಸಿನಲೆಯಲ್ಲಿ ಹೃತಿಕ್-ದೀಪಿಕಾ
ಅನಿಮಲ್ ಮೂಲಕ ಯಶಸ್ಸು ಕಂಡಿರುವ ಬಾಬಿ, ಸಹೋದರ ಸನ್ನಿ ಡಿಯೋಲ್ ಮತ್ತು ಸಹೋದರಿ ಇಶಾ ಡಿಯೋಲ್ ಅವರಿಂದಲೂ ಸ್ಪೆಷಲ್ ಬರ್ತ್ಡೇ ವಿಶ್ ಸ್ವಿಕರಿಸಿದ್ದಾರೆ. ಫೋಟೋ ಹಂಚಿಕೊಂಡ ಸನ್ನಿ ಬಾಬಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸನ್ನಿ ಬಾಬಿ ಅವರನ್ನು "ಮೈ ಲಿಟಲ್, ಲಾರ್ಡ್‌ಬಾಬಿ" ಎಂದು ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ, ಇಶಾ ಡಿಯೋಲ್ ಕೂಡ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಫೋಟೋ ಹಂಚಿಕೊಂಡು ಸಹೋದರನಿಗೆ ಶುಭ ಕೋರಿದ್ದಾರೆ. ಸಹೋದರನ ಬಗ್ಗೆ ತನ್ನ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:'ಚಂದು ಚಾಂಪಿಯನ್': ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಕಾರ್ತಿಕ್ ಆರ್ಯನ್ ಲುಕ್