ಹೈದರಾಬಾದ್: ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 AD ಚಿತ್ರವು ಈ ವರ್ಷ ಜಾಗತಿಕವಾಗಿ ಸುಮಾರು 1,300 ಕೋಟಿ ರೂಪಾಯಿ ಗಳಿಸುವ ಮೂಲಕ ಗಲ್ಲಾಪೆಟ್ಟಿಯಲ್ಲಿ ಭಾರಿ ಸದ್ದು ಮಾಡಿ ಯಶಸ್ವಿಯಾಗಿದೆ. ಜೂನ್ 27ರಂದು ಬಿಡುಗಡೆಯಾದ ಈ ಚಿತ್ರವು, ಹಲವು ಹೊಸ ಚಿತ್ರಗಳ ಬಿಡುಗಡೆ ಮಧ್ಯೆಯೂ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಮುಂದುವರೆಸಿದೆ. ಕಲ್ಕಿ 2898 AD ತಯಾರಕರು ಚಲನಚಿತ್ರವನ್ನು ದೊಡ್ಡ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಟಿಕೆಟ್ ಬೆಲೆಯನ್ನು ಕಡಿತಗೊಳಿಸಿದ್ದಾರೆ. ಅಭಿಮಾನಿಗಳು ಮತ್ತು ಚಲನಚಿತ್ರ ಪ್ರೇಕ್ಷಕರಿಗೆ ಗಿಫ್ಟ್ ನೀಡಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ವೈಜ್ಞಾನಿಕ ಆ್ಯಕ್ಷನ್ ಚಿತ್ರದ ಕಲ್ಕಿ 2898 AD ತಯಾರಕರು ಟಿಕೆಟ್ ದರವನ್ನು 100 ರೂ.ಗೆ ಇಳಿಕೆ ಮಾಡಿ, ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದರು. ಆಗಸ್ಟ್ 1 ರಂದು, ತಯಾರಕರು ತಮ್ಮ ಅಧಿಕೃತ Instagram ಖಾತೆಯಲ್ಲಿ ಗಿಫ್ಟ್ ಆಗಿ ನೂತನ ಘೋಷಣೆ ಮಾಡಿದ್ದಾರೆ.
ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಪೋಸ್ಟ್ ಹೀಗಿದೆ: "ಧನ್ಯವಾದಗಳು ಎಂಬುದು ಒಂದು ಸಣ್ಣ ಪದ. ಈ ವಾರ ನಮ್ಮ ಮೆಚ್ಚುಗೆಯ ಸಂಕೇತವಾಗಿದೆ ❤️ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಕೇವಲ ರೂ. 100/- ಕ್ಕೆ ಟಿಕೆಟ್ ಪಡೆದು ಎಪಿಕ್ ಮಹಾ ಬ್ಲಾಕ್‌ಬಸ್ಟರ್ #Kalki2898AD ಅನ್ನು ಆನಂದಿಸಿ, ಆಗಸ್ಟ್ 2ರಿಂದ ಒಂದು ವಾರದವರೆಗೆ ಲಭ್ಯವಿದೆ!"