ಹೈದರಾಬಾದ್: ಕೊರಟಾಲ ಶಿವ ನಿರ್ದೇಶನದ ''ದೇವರ: ಭಾಗ 1'' ಕಳೆದ ದಿನ ಬಹಳ ಅದ್ಧೂರಿಯಾಗಿ ತೆರೆಕಂಡಿದೆ. ಬಹುತೇಕ ಮೆಚ್ಚುಗೆಯನ್ನೇ ಸ್ವೀಕರಿಸಿರುವ ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ. ದೊಡ್ಡ ಮಟ್ಟದ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ಗಮನಾರ್ಹವಾಗಿ, 'ಕಲ್ಕಿ 2898 ಎಡಿ' ದಾಖಲೆಯನ್ನೂ ಮೀರಿಸಿ, ತೆಲುಗು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.
ಶುಕ್ರವಾರ ತೆರೆಗಪ್ಪಳಿಸಿದ 'ದೇವರ' ಸಿನಿಮಾವನ್ನು ಅಭಿಮಾನಿಗಳು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. 'ದೇವರ ಭಾಗ 1' ನಿರ್ಮಾಪಕರಾದ ಯುವಸುಧಾ ಆರ್ಟ್ಸ್, ಇಂದು ಚಿತ್ರದ ಮೊದಲ ದಿನದ ವಿಶ್ವದಾದ್ಯಂತ ಗಳಿಕೆಯ ಅಂಕಿಅಂಶಗಳನ್ನು ಹಂಚಿಕೊಂಡಿದೆ. ಚಿತ್ರ ಮೊದಲ ದಿನವೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 172 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
2024ರಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು (ಗ್ರಾಸ್ ಕಲೆಕ್ಷನ್):
- ಕಲ್ಕಿ 2898 ಎಡಿ – 191.5 ಕೋಟಿ ರೂಪಾಯಿ.
- ದೇವರ ಭಾಗ 1 - 172 ಕೋಟಿ ರೂಪಾಯಿ.
- ಗೋಟ್ - 126.3 ಕೋಟಿ ರೂಪಾಯಿ.
- ಸ್ತ್ರೀ 2 - 80.2 ಕೋಟಿ ರೂಪಾಯಿ.
- ಗುಂಟೂರು ಕರಮ್ - 73.2 ಕೋಟಿ ರೂಪಾಯಿ.
- ಇಂಡಿಯನ್ 2 - 56.2 ಕೋಟಿ ರೂಪಾಯಿ.
- ಫೈಟರ್ - 30.8 ಕೋಟಿ ರೂಪಾಯಿ.