ಕರ್ನಾಟಕ

karnataka

ETV Bharat / entertainment

'ಅಪ್ಪು ಸವಿನೆನಪಿನಲ್ಲಿ 3 ವರ್ಷಗಳು': ಅಶ್ವಿನಿ ಪುನೀತ್​​ ರಾಜ್​ಕುಮಾರ್​​​ - ASHWINI PUNEETH RAJKUMAR

ಪುನೀತ್​ ರಾಜ್​ಕುಮಾರ್​​​ ವಿಧಿವಶರಾಗಿ ಇಂದಿಗೆ ಮೂರು ವರ್ಷ. ಪತ್ನಿ ಅಶ್ವಿನಿ ಪೋಸ್ಟ್​​ ಒಂದನ್ನು ಶೇರ್​ ಮಾಡಿದ್ದಾರೆ.

Puneeth Rajkumar and Ashwini
ಪುನೀತ್​ ರಾಜ್​ಕುಮಾರ್​​​ ಅಶ್ವಿನಿ ದಂಪತಿ (ETV Bharat)

By ETV Bharat Entertainment Team

Published : Oct 29, 2024, 2:44 PM IST

ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆಯಿಂದಲೂ ಇಡೀ ಭಾರತದಲ್ಲಿ ಹೆಸರು ಸಂಪಾದಿಸಿದ ನಟಸಾರ್ವಭೌಮ ಡಾ.ರಾಜ್​ಕುಮಾರ್​ ಅವರ ಕಿರಿಪುತ್ರ ಪುನೀತ್​ ರಾಜ್​ಕುಮಾರ್​​​ ವಿಧಿವಶರಾಗಿ ಇಂದಿಗೆ ಮೂರು ವರ್ಷ. ಅವರ ಸ್ಮರಣೆಯಲ್ಲಿ ಕರುನಾಡಿದ್ದು, ಮಡದಿ ಅಶ್ವಿನಿ ಪುನೀತ್​​ ರಾಜ್​ಕುಮಾರ್​​​ ಸೋಷಿಯಲ್​ ಮೀಡಿಯಾದಲ್ಲಿ ಸರಳ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ವಿವಿಧ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳಲ್ಲಿ ನಗಮೊಗದ ಒಡೆಯನ ಫೋಟೋ ಹಂಚಿಕೊಂಡ ಅಶ್ವಿನಿ ಪುನೀತ್​ ರಾಜ್​​ಕುಮಾರ್​​, ''ಅಪ್ಪು ಅವರ ಸವಿನೆನಪಿನಲ್ಲಿ 3 ವರ್ಷಗಳು'' ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಮೇಲೆ 'ಫಾರೆವರ್​ ಇನ್​ ಅವರ್ ಹಾರ್ಟ್ಸ್' ಎಂದು ಬರೆಯಲಾಗಿದೆ. ಜೊತೆಗೆ, ''3ನೇ ವರ್ಷದ ಸವಿನೆನಪು: ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮತ್ತು ಕಾರ್ಯಗಳಲ್ಲಿ, ನಮ್ಮ ಜೀವನದ ಪ್ರತಿನಿತ್ಯ ಮತ್ತು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುವ ವಿಶೇಷ ಚೇತನ'' ಎಂದು ಬರೆದುಕೊಂಡಿದ್ದಾರೆ.

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್​​ ರಾಜ್​ಕುಮಾರ್​​​ (ETV Bharat)

ಇದನ್ನೂ ಓದಿ:ಪುನೀತ್​​​ ಸಮಾಧಿಗೆ ರಾಜ್​ ಕುಟುಂಬದಿಂದ ಪೂಜೆ ಸಲ್ಲಿಕೆ: 'ಪರಮಾತ್ಮ'ನಿಗೆ ನಮನ

ಅಪ್ಪು ಅವರ ಮರಣದ ನಂತರ ತೆರೆಗಪ್ಪಳಿಸಿದ 'ಗಂಧದ ಗುಡಿ' ಸಿನಿಮಾಗೆ ಕಳೆದ ದಿನ ಎರಡು ವರ್ಷಗಳಾಗಿವೆ. ವಿಡಿಯೋ ಹಂಚಿಕೊಂಡಿದ್ದ ಅಶ್ವಿನಿ ಪುನೀತ್​ ರಾಜ್​ಕುಮಾರ್​, ''ಅಪ್ಪು ಅವರ ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ 'ಗಂಧದ ಗುಡಿ' ಚಿತ್ರಕ್ಕೆ ಎರಡು ವರ್ಷಗಳ ಸಂಭ್ರಮ'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ಸಿನಿಮಾವೆಂಬ 'ಮಾಯಾಬಜಾರ್​'ನಲ್ಲಿ 'ದೊಡ್ಮನೆ ಹುಡ್ಗ'ನ ಪವರ್: ರಾಷ್ಟ್ರಪ್ರಶಸ್ತಿ ಸೇರಿ ಅಪ್ಪುಗೆ ಸಂದ ಪ್ರತಿಷ್ಠಿತ ಗೌರವಗಳಿವು

ABOUT THE AUTHOR

...view details