ಕರ್ನಾಟಕ

karnataka

ETV Bharat / entertainment

'ನಟಿಯರಿಗೆ ಶಿಕ್ಷೆ': ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ಬಯಲಿಗೆಳೆದ ಹೇಮಾ ಸಮಿತಿ ವರದಿ - Hema Committee Report - HEMA COMMITTEE REPORT

ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಮಲಯಾಳಂ ಚಿತ್ರರಂಗದ ಕರಾಳತೆಯ ಅಂಶಗಳನ್ನೊಳಗೊಂಡಿದೆ. ನಟಿಯರು ಸಿನಿಮಾಗಳಲ್ಲಿ ಉತ್ತಮ ಅವಕಾಶ ಪಡೆಯಲು ಕೆಲವರ ಬೇಡಿಕೆಗಳಿಗೆ ಸಮ್ಮತಿಸಬೇಕು. ಇಲ್ಲವಾದಲ್ಲಿ ಅವಕಾಶ ವಂಚಿತರಾಗುತ್ತಾರೆ, ಬದಿಗೆ ಸರಿದುಬಿಡುತ್ತಾರೆ. ಇಲ್ಲವಾದಲ್ಲಿ ಶಿಕ್ಷೆಗೊಳಗಾಗುತ್ತಾರೆ ಎಂಬ ಭಯಾನಕ ಅಂಶಗಳನ್ನು ಈ ವರದಿ ಒಳಗೊಂಡಿದೆ.

Hema Committee Report
ಹೇಮಾ ಸಮಿತಿ ವರದಿ (ETV Bharat)

By ETV Bharat Karnataka Team

Published : Aug 20, 2024, 1:49 PM IST

ತಿರುವನಂತಪುರಂ (ಕೇರಳ): ಮಲಯಾಳಂ ಚಿತ್ರರಂಗದಲ್ಲಿನ ಮಹಿಳಾ ನಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಅಂಶಗಳನ್ನೊಳಗೊಂಡ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಸೋಮವಾರದಂದು ಬಿಡುಗಡೆ ಮಾಡಿದೆ.

ಮಲಯಾಳಂ ಸಿನಿರಂಗದಲ್ಲಿ 'ಕಾಸ್ಟಿಂಗ್ ಕೌಚ್' ಗಂಭೀರ ಸಮಸ್ಯೆಯಾಗಿ ಉಳಿದುಕೊಂಡಿದೆ ಎಂಬುದನ್ನು ವರದಿ ಬಹಿರಂಗಪಡಿಸಿದೆ. ಈ ಡಾಕ್ಯುಮೆಂಟ್​​ ಇದು 233 ಪುಟಗಳ ಮಾಹಿತಿ ಹೊಂದಿದೆ.

2019ರ ಡಿಸೆಂಬರ್ 31ರಂದು ವರದಿ ಕೇಳಲಾಗಿತ್ತು. ಐದು ವರ್ಷಗಳ ನಂತರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ವರದಿಯನ್ನು ಕೋರಿ ಮಾಹಿತಿ ಆಯೋಗವನ್ನು ಸಂಪರ್ಕಿಸಿದ್ದ ಪತ್ರಕರ್ತರು ಸೇರಿದಂತೆ ಐದು ಜನರಿಗೆ ಈ ವರದಿಯನ್ನು ನೀಡಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿನ ಮಹಿಳಾ ಕಲಾವಿದರ ಸಮಸ್ಯೆಗಳನ್ನು ಅಧ್ಯಯನ ಮಾಡಲು ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಲಾಗಿತ್ತು.

ವರದಿಯಲ್ಲಿರುವ ಪ್ರಮುಖ ಅಂಶಗಳೇನು?

  • ಲೈಂಗಿಕ ಕ್ರಿಯೆಗಳಿಗೆ ಸಮ್ಮತಿಸದ ನಟಿಯರಿಗೆ ಸಿನಿಮಾ ಅವಕಾಶಗಳು ತಪ್ಪಿ ಹೋಗುತ್ತವೆ.
  • ಪಾತ್ರಗಳನ್ನು ಪಡೆಯಲು ನಟಿಯರು ಅಡ್ಜೆಸ್ಟ್ ಆಗಬೇಕು.
  • ಪ್ರಮುಖ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಈ ಆರೋಪಗಳಿಗೆ ಗುರಿಯಾಗಿದ್ದಾರೆ.
  • ಚಿತ್ರರಂಗದಲ್ಲಿ ಪುರುಷ ಪ್ರಾಬಲ್ಯವಿದೆ.
  • ಅವರ ಬೇಡಿಕೆಗಳಿಗೆ ಸಮ್ಮತಿಸದ ನಟಿಯರಿಗೆ ಶೂಟಿಂಗ್​ನಲ್ಲಿ ರೀಟೇಕ್​​ ಮೂಲಕ ಗುರಿ ಮಾಡಲಾಗುತ್ತಿತ್ತು. ಕೆಲ ನಟಿಯರಿಗೆ ಶಿಕ್ಷೆಯಾಗಿ 17 ರಿಪಿಡೆಡ್​ ಶಾಟ್ಸ್ ನೀಡಲಾಗಿದೆ.
  • ನಟರೊಂದಿಗೆ ನಟಿಯರು ಸಹಕರಿಸಬೇಕು ಎಂಬ ಗ್ರಹಿಕೆ ಸಾಮಾನ್ಯವಾಗಿಬಿಟ್ಟಿದೆ.
  • ಯುವ ನಟಿಯರಿಗೆ ಮಾತ್ರ ಮಹತ್ವದ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ.
  • ಸಹಕರಿಸಲು ಇಚ್ಛಿಸುವವರನ್ನು ಮಾತ್ರ ಗುರುತಿಸಲಾಗುತ್ತದೆ. ಸಮ್ಮತಿಸದವರನ್ನು ಬದಿಗೆ ಸರಿಸಲಾಗುತ್ತದೆ.
  • ದೂರು ನೀಡಲು ಮುಂದಾದರೆ ಸ್ವಂತ ಜೀವನ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ.
  • ಮಲಯಾಳಂ ಚಿತ್ರರಂಗವನ್ನು ಅಪರಾಧಿಗಳು ನಿಯಂತ್ರಿಸುತ್ತಿದ್ದಾರೆ.
  • ಚಿತ್ರರಂಗದಲ್ಲಿ ಹೊರಗಿನಿಂದ ಕಾಣುವ ಗ್ಲಾಮರ್​​​ ಇಲ್ಲ.
  • ಅವರ ಬೇಡಿಕೆಗಳನ್ನು ಒಪ್ಪುವ ನಟಿಯರನ್ನು ಮಾತ್ರ ಕೋಡ್ ಹೆಸರುಗಳಿಂದ ಕರೆಯಲಾಗುತ್ತದೆ.
  • ದೂರು ನೀಡಲು ನಟಿಯರು ಭಯಪಡುತ್ತಿದ್ದಾರೆ.
  • ನಟಿಯರು ನೀಡಿರುವ ಮಾಹಿತಿ ಆಘಾತಕಾರಿಯಾಗಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ:ಸಾಂಪ್ರದಾಯಿಕ ಶೈಲಿಯಲ್ಲಿ ಬೇಬಿಬಂಪ್​​ ಫೋಟೋಶೂಟ್​ ಮಾಡಿಸಿದ ಹರ್ಷಿಕಾ ಪೂಣಚ್ಚ: ನಟಿಯ ವಿಡಿಯೋ ನಿಮಗಾಗಿ - Harshika Poonacha

ABOUT THE AUTHOR

...view details