ಬೆಂಗಳೂರು : ಕಾರು ಓವರ್ ಟೇಕ್ ಮಾಡುವ ಭರದಲ್ಲಿ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜನವರಿ 18ರಂದು ಬೆಳಿಗ್ಗೆ 10:30ರ ಸುಮಾರಿಗೆ ಅಶೋಕನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಈಜೀಪುರ ಸಿಗ್ನಲ್ ಬಳಿ ಘಟನೆ ನಡೆದಿದ್ದು, ಡೆಡ್ಲಿ ಅಪಘಾತದ ದೃಶ್ಯ ಹಿಂಬದಿ ಸಾಗುತ್ತಿದ್ದ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಜಾಗರೂಕತೆ ಹಾಗೂ ಅತಿವೇಗದಿಂದ ಬಂದ ಬೈಕ್ ಸವಾರನೊಬ್ಬ ಕಾರಿನ ಎಡಭಾಗದಿಂದ ಓವರ್ ಟೇಕ್ ಮಾಡಿ ಬಲಭಾಗಕ್ಕೆ ಬಂದಿದ್ದು, ಈ ವೇಳೆ ಕಾರಿನ ಬಲಭಾಗದಿಂದ ಬರುತ್ತಿದ್ದ ಮತ್ತೋರ್ವನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರಸ್ತೆಯಲ್ಲಿ ಬೈಕ್ ಸವಾರ ಬಿದ್ದರೂ ಸಹ ತನ್ನ ಬೈಕ್ ನಿಲ್ಲಿಸದೇ ಮುಂದೆ ಸಾಗಿದ್ದಾನೆ. ಇದೇ ವೇಳೆ, ಬೈಕ್ ಹಿಂದಿದ್ದ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಸವಾರ ಪಾರಾಗಿದ್ದಾನೆ.
@CPBlr @PoliceBangalore
— Hisham Ibrahim (@HishamIbrah) January 19, 2025
* Misbehaviour and rude behaviour by a police officer named Devaraj from the Ashok Nagar Traffic Police Station.
1. The police officer refused to file a complaint despite being requested to do so. pic.twitter.com/gxkXt1E21m
ಅಪಘಾತದ ಬಗ್ಗೆ ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಬೈಕ್ ಸವಾರ ಎಕ್ಸ್ ಆ್ಯಪ್‌ನಲ್ಲಿ ದೂರಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಪ್ರಾಣ ಕಳೆದುಕೊಂಡ ಬೈಕ್ ಸವಾರ - ಬಿಎಂಟಿಸಿ ಬಸ್