ಪ್ರೀತಿ-ವಿಶ್ವಾಸ, ಸುಖ-ದುಃಖ, ವಾದ-ವಿವಾದ, ಜಗಳ, ಮನಸ್ತಾಪ, ಪ್ರಾಮಾಣಿಕತೆ ಜೊತೆಗೆ ಒಂದಿಷ್ಟು ಮನರಂಜನೆ.... ಇವೆಲ್ಲದರ ಸಮ್ಮಿಶ್ರಣವೇ 'ಬಿಗ್ ಬಾಸ್' ಕಾರ್ಯಕ್ರಮ. ಕನ್ನಡ ಸೀಸನ್ 11ರಲ್ಲಿದ್ದು, ಏಳನೇ ವಾರದ ಆಟ ಸಾಗಿದೆ. ಈ ಸೀಸನ್ನಲ್ಲಿ ಕಿರುಚಾಟ, ವಾದ ವಿವಾದಗಳು ಕೊಂಚ ಹೆಚ್ಚೇ ಎನ್ನಬಹುದು. ಮನೆಯಿಂದ ಇಬ್ಬರು ಹೊರಗೋಗುವಂತಾಗಿದ್ದು, ಇದಕ್ಕೆ ಸಾಕ್ಷಿ. ಮನಸ್ತಾಪ, ವಾದ ವಿವಾದಗಳು ಸಾಗಿದ್ದು, ಇದೀಗ ಅನುಷಾ ಮತ್ತು ಗೋಲ್ಡ್ ಸುರೇಶ್ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ.
'ಒಡೆದು ಹೋಯ್ತಾ ಗೋಲ್ಡ್ ಸುರೇಶ್ ತಾಳ್ಮೆಯ ಕಟ್ಟೆ?' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ಇದಕ್ಕೂ ಮುನ್ನ ಬಿಡುಗಡೆ ಆದ ಪ್ರೋಮೋದಲ್ಲಿ ಅನುಷಾ ಅಸಮಧಾನಗೊಂಡಿದ್ದರೆ, ಹೊಸ ಪ್ರೋಮೋದಲ್ಲಿ ಗೋಲ್ಡ್ ಸುರೇಶ್ ಅವರ ತಾಳ್ಮೆಯ ಕಟ್ಟೆ ಒಡೆದಂತೆ ತೋರುತ್ತಿದೆ. ಸಂಪೂರ್ಣ ಸಂಚಿಕೆ ವೀಕ್ಷಿಸುವ ಕುತೂಹಲ ಪ್ರೇಕ್ಷಕರದ್ದು.
ಇದನ್ನೂ ಓದಿ:ಧರ್ಮ- ಅನುಷಾ ನಡುವೆ ಹುಳಿ ಹಿಂಡಿದ ನಾಮಿನೇಷನ್: ಅಸಲಿ ಆಟ ಶುರು ಮಾಡಿದ ಬಿಗ್ ಬಾಸ್
''ಮೋಕ್ಷಿತಾ ಅವರಿಗೆ ಹೇಳೋದೇನಂದ್ರೆ, ಮಾತು, ಮಾತು, ಮಾತು. ನನ್ನ ಮಾತುಗಳಿಗೆ ಕಳೆದ ವಾರ ಕ್ಷಮೆ ಕೇಳಿದ್ದೇನೆ. ಅದಾಗ್ಯೂ, ಅದೊಂದೇ ರೀಸನ್ ಕೊಡುತ್ತಾ ಬಂದಿದ್ದೀರಿ. ಅದನ್ನು ಬಿಟ್ರೆ ನಿಮ್ಮ ಹತ್ರ ಬೇರೆ ಕಾರಣಗಳೇ ಇಲ್ಲ. ಮನೆಯ ಇನ್ವಾಲ್ಮೆಂಟ್ ವಿಷಯಕ್ಕೆ ಬರುತ್ತೀರ (ಭವ್ಯಾ - ಮಂಜು ಜೋಡಿಯನ್ನುದ್ದೇಶಿಸಿ ಮಾತನಾಡಿರುವುದು). ಕಸ ಹೊಡೆಯುವುದರಿಂದ ಹಿಡಿದು, ಅಡುಗೆ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಒಬ್ಬೊಬ್ಬರತ್ರನೂ ಕುಳಿತು ಕಷ್ಟ ಸುಖ ಹಂಚಿಕೊಂಡಿದ್ದೇನೆ. ಚೈತ್ರಾ ಕೂಡಾ ಕಾರಣಗಳನ್ನು ಬಹಳ ಚೆನ್ನಾಗಿ ತೆಗೆದುಕೊಳ್ತಾರೆ. ಒಮ್ಮೆ ನಿಮ್ಮ ದನಿ ಕಿರಿಕಿರಿ ಆಗುತ್ತೆ ಎಂದು ಹೇಳಿದ್ದೇನೆ. ಅದಕ್ಕೆ ಸೂಕ್ತ ಸ್ಪಷ್ಟನೆಯನ್ನೂ ಕೊಟ್ಟಿದ್ದೇನೆ. ಆದ್ರೆ ಅದನ್ನೇ ವೈಯಕ್ತಿಕವಾಗಿ ತೆಗೆದುಕೊಳ್ತೀರ. ಎಲ್ಲರ ಬಾಯಲ್ಲೂ ಸುರೇಶ್, ಸುರೇಶ್, ಸುರೇಶ್. ನಾಮಿನೇಷನ್ಗೆ ನನ್ನೊಬ್ಬನ್ನದ್ದೇ ಹೆಸರು. ನೇರ ನಾಮಿನೇಷನ್ - ಸುರೇಶ್, ನಾಮಿನೇಷನ್ - ಸುರೇಶ್'' - ಗೋಲ್ಡ್ ಸುರೇಶ್ ಅಸಮಾಧಾನಗೊಂಡ ರೀತಿಯಿದು.
ಇದನ್ನೂ ಓದಿ:ಶಾರುಖ್ ಖಾನ್‌ಗೆ ಜೀವ ಬೆದರಿಕೆ: ಛತ್ತೀಸ್‌ಗಢದ ವಕೀಲ ಅರೆಸ್ಟ್
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎಲಿಮಿನೇಷನ್ಗಾಗಿ ನಡೆಸುವ ನಾಮಿನೇಷನ್ ಬಗ್ಗೆ ಪರಸ್ಪರ ಚರ್ಚೆ ನಡೆಸುವಂತಿಲ್ಲ. ಆದ್ರೆ ಈ ಬಾರಿ ನಿಮಯ ಉಲ್ಲಂಘನೆಯಾಗಿದೆ. ಪ್ರಮುಖ ರೂಲ್ ಬ್ರೇಕ್ ಮಾಡಿದ್ದಕ್ಕಾಗಿ ಕ್ಯಾಪ್ಟನ್ ತ್ರಿವಿಕ್ರಮ್ ಅವರ 'ನೇರ ನಾಮಿನೇಷನ್' ಅಧಿಕಾರವನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ತ್ರಿವಿಕ್ರಮ್ ಹೊರತುಪಡಿಸಿ, ಇತರೆ ಸ್ಪರ್ಧಿಗಳು ಸೇರಿ ಈ ನಿರ್ಧಾರ ಕೈಗೊಳ್ಳಬೇಕಿದೆ. ಎಲಿಮಿನೇಷನ್ಗೆ ನೇರ ನಾಮಿನೇಷನ್ ಮಾಡೋ ಸಲುವಾಗಿ ಓರ್ವ ಜೋಡಿಯನ್ನು ಸಹಮತದಿಂದ ಆಯ್ಕೆ ಮಾಡಬೇಕಾಗಿದೆ. ಇದಕ್ಕಾಗಿ ಮನೆಯಲ್ಲಿ ಚರ್ಚೆ ನಡೆದಿದೆ. ಹೆಚ್ಚಿನವರು ಅನುಷಾ ಮತ್ತು ಗೋಲ್ಡ್ ಸುರೇಶ್ ಹೆಸರು ತೆಗೆದುಕೊಂಡ ಹಿನ್ನೆಲೆ, ಈ ಇಬ್ಬರೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.