ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಫ್ಯಾಷನೇಟ್ ಪ್ರೊಡ್ಯೂಸರ್ ಎಂದೇ ಹೆಸರು ಗಳಿಸಿರುವ ರಮೇಶ್ ರೆಡ್ಡಿ ಅವರ ಮಗಳ ಮದುವೆ ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ರಮೇಶ್ ರೆಡ್ಡಿ ಅವರ ಪುತ್ರಿ ತೇಜಸ್ವಿನಿ ಅವರನ್ನು ಕಾರ್ತಿಕ್ ಎಂಬವರು ವರಿಸಿದರು. ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಹಲವು ತಾರೆಯರು, ರಾಜಕೀಯ ನಾಯಕರು ಮತ್ತು ಉದ್ಯಮಿಗಳು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದರು.
ಸುಧಾ ಮೂರ್ತಿ, ಯೋಗರಾಜ್ ಭಟ್, ಧ್ರುವ ಸರ್ಜಾ, ದಿಗಂತ್, ರವಿಚಂದ್ರನ್, ನಿರ್ದೇಶಕ ಇಂದ್ರಜಿತ್ ಲಂಕೇಶ್, ರಮೇಶ್ ಅರವಿಂದ್, ಗುರು ದೇಶಪಾಂಡೆ, ಅರ್ಜುನ್ ಜನ್ಯ ಹಾಗು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹುಪಾಲು ಗಣ್ಯರು ಕಾರ್ಯಕ್ರಮದಲ್ಲಿದ್ದರು. ಕನ್ನಡದ ಸ್ಟಾರ್ ಮ್ಯೂಜಿಕ್ ಡೈರೆಕ್ಟರ್ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ಸಂಜೆ ನಡೆಯಿತು.