ಕರ್ನಾಟಕ

karnataka

ETV Bharat / entertainment

ದೀಪಾವಳಿಗೆ 'ಬಘೀರ'ನ ಅಬ್ಬರ ಶುರು: 'ಕೆಜಿಎಫ್​' ಪ್ರಶಾಂತ್‌ ನೀಲ್‌ ಕಥೆಯ ಸಿನಿಮಾವಿದು; ನಾಳೆ ಫಸ್ಟ್ ಸಾಂಗ್​ ರಿಲೀಸ್​ - BAGHEERA

ಬಹುನಿರೀಕ್ಷಿತ ''ಬಘೀರ'' ಚಿತ್ರದ ಮೊದಲ ಹಾಡು 'ರುಧೀರ ಧಾರಾ' ಅಕ್ಟೋಬರ್‌ 17ರಂದು ಅಂದರೆ ನಾಳೆ ಬೆಳಗ್ಗೆ 10:35ಕ್ಕೆ ಅನಾವರಣಗೊಳ್ಳಲಿದೆ.

Sri Murali in 'Bagheera'
ನಾಳೆ ಶ್ರೀಮುರುಳಿ 'ಬಘೀರ'ನ ಫಸ್ಟ್ ಸಾಂಗ್​ ರಿಲೀಸ್​ (Photo Source: ETV Bharat)

By ETV Bharat Entertainment Team

Published : Oct 16, 2024, 7:48 AM IST

ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ ಅಂದ್ರೆ ಅದು ''ಹೊಂಬಾಳೆ ಫಿಲ್ಮ್ಸ್''. ಭಾರತೀಯ ಮನರಂಜನಾ ಕ್ಷೇತ್ರಕ್ಕೆ ಬಿಗ್​​ ಬಜೆಟ್‌ ಸಿನಿಮಾಗಳನ್ನು ನೀಡಿದ ಕೀರ್ತಿ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್‌ ಕಿರಗಂದೂರು ಅವರದ್ದು. ಕೆಜಿಎಫ್‌, ಕೆಜಿಎಫ್‌ 2, ಕಾಂತಾರ, ಸಲಾರ್​ನಂತಹ ಬ್ಲಾಕ್​​ಬಸ್ಟರ್‌ ಹಿಟ್‌ ನೀಡಿದ್ದೇ ಈ ಸಂಸ್ಥೆ. ಇದೇ ಹೊಂಬಾಳೆ ಫಿಲ್ಮ್ಸ್ ಬತ್ತಳಿಕೆಯಿಂದ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ''ಬಘೀರ''.

ಈ ಸಿನಿಮಾ ಬಿಡುಗಡೆಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ ಅಂತ್ಯಕ್ಕೆ ತೆರೆಗಪ್ಪಳಿಸಲಿರುವ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದು, ಚಿತ್ರತಂಡ ಪ್ರಚಾರ ಶುರು ಹಚ್ಚಿಕೊಂಡಿದೆ. ಹೌದು, ಚಿತ್ರದ ಮೊದಲ ಹಾಡು ಅನಾವರಣಕ್ಕೆ ದಿನ ಮತ್ತು ಸಮಯ ನಿಗದಿಪಡಿಸಲಾಗಿದೆ.

'ಬಘೀರ', ರೋರಿಂಗ್‌ ಸ್ಟಾರ್‌ ಶ್ರೀಮುರಳಿ 'ಮದಗಜ' ಚಿತ್ರದ ಬಳಿಕ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ. ಸಣ್ಣ ಟೀಸರ್ ಹಾಗೂ ಪೋಸ್ಟರ್​ನಿಂದಲೇ ಈಗಾಗಲೇ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿರುವ ಈ ಚಿತ್ರಕ್ಕೆ ಸೂಪರ್​ ಡೂಪರ್​​ ಹಿಟ್ ಕೆಜಿಎಫ್‌ ಮತ್ತು ಸಲಾರ್‌ ಸಿನಿಮಾ ನಿರ್ದೇಶಕ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದಾರೆ ಎಂಬುದೇ ಹೈಲೆಟ್​​. ಆ್ಯಕ್ಷನ್‌ ಟೀಸರ್‌ ಮೂಲಕವೇ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಮೊದಲ ಹಾಡು 'ರುಧೀರ ಧಾರಾ' ಅಕ್ಟೋಬರ್‌ 17ರಂದು ಬಿಡುಗಡೆ ಆಗಲಿದೆ. ಈ ಮೂಲಕ ನಾಳೆಯಿಂದ ಸಿನಿಮಾದ ಪ್ರಚಾರ ಜೋರಾಗಲಿದೆ.

ನಾಳೆ 'ಬಘೀರ'ನ ಫಸ್ಟ್ ಸಾಂಗ್​ ರಿಲೀಸ್​ (Photo Source: ETV Bharat)

ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ತನ್ನ ವಿವಿಧ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​​ಗಳಲ್ಲಿ ಹಂಚಿಕೊಂಡಿದೆ. ಪೋಸ್ಟರ್ ಒಂದನ್ನು ಶೇರ್ ಮಾಡಿರುವ ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ, 'ಬಘೀರ ಸಿನಿಮಾದ ಮೊದಲ ಹಾಡು ರುಧೀರ ಧಾರಾ ಅಕ್ಟೋಬರ್‌ 17ರ ಬೆಳಗ್ಗೆ 10:35ಕ್ಕೆ ಅನಾವರಣಗೊಳ್ಳಲಿದೆ' ಎಂದು ಬರೆದುಕೊಂಡಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಾಂಗ್​ ರಿಲೀಸ್​ ಆಗಲಿದೆ. ಈ ಪೋಸ್ಟ್​​ಗೆ ದಿ ಆ್ಯಂಥಮ್​ ಆಫ್​​ ಜಸ್ಟೀಸ್​​ ಎಂಬ ಕ್ಯಾಪ್ಷನ್​ ಕೊಡಲಾಗಿದೆ.

ಖಾಕಿ ಖದರ್​ನಲ್ಲಿ ಅಬ್ಬರಿಸಲಿರುವ ಶ್ರೀಮುರಳಿ (Photo Source: ETV Bharat)

ಇದನ್ನೂ ಓದಿ:ಬಿಗ್​ ಬಾಸ್​​ ಶೋನಲ್ಲಿ ಜಗದೀಶ್ ಅಶ್ಲೀಲ ಪದ ಬಳಕೆ: 'ಎಲ್ಲವೂ ಗಮನದಲ್ಲಿದೆ' - ಈ ವಾರವಾದ್ರೂ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಕಿಚ್ಚ

ಡಾಕ್ಟರ್‌ ಸೂರಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವ 'ಬಘೀರ' ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟ ಶ್ರೀಮುರಳಿ ಪೊಲೀಸ್‌ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಅವರಿಗೆ ಜೋಡಿಯಾಗಿ ಚಂದನವನದ ಬಹುಬೇಡಿಕೆ ನಟಿ ರುಕ್ಮಿಣಿ ವಸಂತ್‌ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಪ್ರಕಾಶ್‌ ರಾಜ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ತಾಂತ್ರಿಕ ಬಳಗವನ್ನು ಗಮನಿಸೋದಾದರೆ, ಎ.ಜೆ ಶೆಟ್ಟಿಅವರ ಕ್ಯಾಮರಾ ಕೈಚಳಕ ಮತ್ತು ಅಜನೀಶ್‌ ಲೋಕನಾಥ್‌ ಅವರ ಸುಮಧುರ ಸಂಗೀತಗಳಿರಲಿವೆ. ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನ ನಿರ್ವಹಿಸಿದ್ರೆ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆ್ಯಕ್ಷನ್‌ ಸಿನಿಮಾಗೆ ಚೇತನ್‌ ಡಿಸೋಜ್‌ ಸಾಹಸ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:ಮಾರ್ಟಿನ್​​ ಬಗ್ಗೆ ಅಪಪ್ರಚಾರ: 'ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ' ಎಂದ ಧ್ರುವ ಸರ್ಜಾ

ಅಕ್ಟೋಬರ್‌ 31ರಂದು ದೀಪಾವಳಿ ಹಬ್ಬದ ಪ್ರಯುಕ್ತ ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ 'ಬಘೀರ' ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಮೊದಲ ಹಾಡಿನ ಮೂಲಕ ಆಗಮಿಸುತ್ತಿರುವ ಬಘೀರ, ಮುಂದಿನ ಎರಡು ವಾರಗಳ ಕಾಲ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿಯಾಗಲಿದೆ. ಸಾಲು ಸಾಲು ಸರ್ಪ್ರೈಸ್‌ಗಳು ಸಿನಿಪ್ರಿಯರಿಗೆ ನೀಡಲು ಚಿತ್ರತಂಡ ಸಜ್ಜಾಗಿದೆ.

ABOUT THE AUTHOR

...view details