ETV Bharat / entertainment

23 ವರ್ಷಗಳ ಹಿಂದಿನ ಬ್ಲಾಕ್​ಬಸ್ಟರ್ 'ಕಭಿ ಖುಷಿ ಕಭಿ ಘಮ್' ತೆರೆಮರೆಯ ಫೋಟೋ ವೈರಲ್​ - KABHI KHUSHI KABHI GHAM

2001ರ ಡಿಸೆಂಬರ್ 19ರಂದು ತೆರೆಕಂಡು ಸೂಪರ್​ ಹಿಟ್​ ಆಗಿದ್ದ 'ಕಭಿ ಖುಷಿ ಕಭಿ ಘಮ್' ಸಿನಿಮಾದ ತೆರೆಮರೆಯ ಫೋಟೋಗಳು ವೈರಲ್​ ಆಗಿವೆ.

Kabhi Khushi Kabhi Gham
ಕಭಿ ಖುಷಿ ಕಭಿ ಘಮ್ (Photo: Film Poster/ETV Bharat)
author img

By ETV Bharat Entertainment Team

Published : Feb 4, 2025, 5:48 PM IST

ಬಾಲಿವುಡ್​ನ ಜನಪ್ರಿಯ ನಿರ್ದೇಶಕ ಕರಣ್ ಜೋಹರ್ ನಿರ್ದೇಶನದ ಫ್ಯಾಮಿಲಿ ಡ್ರಾಮಾ 'ಕಭಿ ಖುಷಿ ಕಭಿ ಘಮ್' ಈಗಾಗಲೇ 23 ವರ್ಷಗಳನ್ನು ಪೂರೈಸಿದೆ. ಕಂಪ್ಲೀಟ್​ ಫ್ಯಾಮಿಲಿ ಎಂಟರ್​ಟೈನ್ಮೆಂಟ್​ ಸಿನಿಮಾದಲ್ಲಿ ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಅಮಿತಾಭ್​​​ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಷನ್, ಜಯಾ ಬಚ್ಚನ್, ರಾಣಿ ಮುಖರ್ಜಿ, ಕಾಜೋಲ್ ಮತ್ತು ಕರೀನಾ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿ ಸಿನಿಪ್ರಿಯರ ಮನ ಗೆದ್ದರು. ಹೆಚ್ಚಿನ ಸಂಖ್ಯೆಯ ಇಂಡಿಯನ್​ ಸೂಪರ್​ ಸ್ಟಾರ್ಸ್ ಸರಿಸಮನಾಗಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದೇ ಈ ಪ್ರಾಜೆಕ್ಟ್​ನ ಹೈಲೆಟ್​​ ಎನ್ನಬಹುದು.

ಹೌದು, ಕಭಿ ಖುಷಿ ಕಭಿ ಘಮ್‌ನ ಪ್ರತೀ ತಾರೆಗೂ ಉತ್ತಮ ಸ್ಕ್ರೀನ್​ ಟೈಮ್​ ಸಿಕ್ಕಿದೆ. ಕಾಸ್ಟಿಂಗ್​ ಜೊತೆಗೆ, ಸಿನಿಮಾದ ಲೊಕೇಶನ್​​, ಸೆಲೆಬ್ರಿಟಿಗಳ ಔಟ್​​ಫಿಟ್ಸ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪವರ್​​ಫುಲ್​ ಕಥಾಹಂದರದ ಜೊತೆಗೆ, ಇಡೀ ತಾರಾಬಳಗ ಮಾರ್ಡನ್​​ ಲುಕ್​​ನಲ್ಲಿ ಕಾಣಿಸಿಕೊಂಡಿತು. 2001ರಲ್ಲಿ ಬಿಡುಗಡೆಯಾದ ಈ ಚಿತ್ರದ ಬಿಟಿಎಸ್ ಚಿತ್ರಗಳೀಗ ವಿವಿಧ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ವೈರಲ್ ಆಗುತ್ತಿವೆ.

ಯಶ್​ ಜೋಹರ್​​ ನಿರ್ಮಾಣದ 'ಕಭಿ ಖುಷಿ ಕಭಿ ಘಮ್' ಸಿನಿಮಾದ ಫೋಟೋಗಳು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಳೆದಿದೆ. ಶೂಟಿಂಗ್​ ಸೆಟ್​ನ ಫೋಟೋಗಳಾಗಿದ್ದು, ವೈರಲ್ ಫೋಟೋಗಳಲ್ಲಿ ಚಿತ್ರದ ಸಂಪೂರ್ಣ ತಾರಾಬಳಗ ಕಾಣಿಸಿಕೊಂಡಿದೆ. ಅದರಲ್ಲಿ ಸಿನಿಮಾ ಕ್ಷಣಗಳನ್ನು ಕಾಣಬಹುದು. ಈ 9 ಬಿಟಿಎಸ್ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಅಮಿತಾಭ್​ ಬಚ್ಚನ್, ಶಾರುಖ್ ಖಾನ್​​ ಮತ್ತು ಹೃತಿಕ್ ರೋಷನ್ ಅವರ ಭಾವನಾತ್ಮಕ ದೃಶ್ಯಗಳೂ ಸೇರಿವೆ. ಕಾಜೋಲ್ ಅವರ ತುಂಟತನವನ್ನೂ ಕಾಣಬಹುದು. ಬಿಗ್ ಬಿ ಪತ್ನಿಯೊಂದಿಗೆ ಮೋಜು ಮಾಡಿರುವ ಚಿತ್ರವೂ ಇದೆ. ಸಿನಿಮಾದ ಸಂಪೂರ್ಣ ಕಾಸ್ಟ್​ ಮಾತ್ರವಲ್ಲದೇ ನಿರ್ದೇಶಕ ಕರಣ್ ಜೋಹರ್ ಮತ್ತು ನೃತ್ಯ ಸಂಯೋಜಕಿ ಫರಾ ಖಾನ್ ಕೂಡಾ ಈ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವ ಕ್ಯಾನ್ಸರ್ ದಿನ 2025: ಶಿವಣ್ಣ To ಸಂಜಯ್​ ದತ್​​ - ಕ್ಯಾನ್ಸರ್​ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು

'ಕಭಿ ಖುಷಿ ಕಭಿ ಘಮ್' 2001ರ ಡಿಸೆಂಬರ್ 19ರಂದು ಬಿಡುಗಡೆಯಾಯಿತು. ಸನ್ನಿ ಡಿಯೋಲ್ ಹಾಗೂ ಅಮೀಷಾ ಪಟೇಲ್ ಅಭಿನಯದ ಗದರ್ ಏಕ್ ಪ್ರೇಮ್ ಕಥಾ ಚಿತ್ರದ ನಂತರ ಕಭಿ ಖುಷಿ ಕಭಿ ಘಮ್​​ 2001ರ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿತು. ವಿಶ್ವಾದ್ಯಂತ 119.29 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ. ಆದರೆ ಗದರ್ ಏಕ್ ಪ್ರೇಮ್ ಕಥಾ 132 ಕೋಟಿ ರೂಪಾಯಿ ಗಳಿಸಿತ್ತು.

ಇದನ್ನೂ ಓದಿ: 777 ಚಾರ್ಲಿ To ಹಾಥಿ ಮೇರೆ ಸಾಥಿ : ಪ್ರಾಣಿಗಳು ಪ್ರಮುಖ ಪಾತ್ರ ವಹಿಸಿದ ಸಿನಿಮಾಗಳು

ಈ ಚಿತ್ರದ ಕಥೆಯು ಒಂದು ಶ್ರೀಮಂತ ಕುಟುಂಬದ ಸುತ್ತ ಸುತ್ತುತ್ತದೆ. ಶಾರುಖ್ ಖಾನ್ ಕೆಳವರ್ಗದ ಹುಡುಗಿ ಕಾಜೋಲ್ ಅವರನ್ನು ಮದುವೆಯಾಗುತ್ತಾರೆ. ಇದಾದ ನಂತರ ಶಾರುಖ್​​ ಮನೆ ಬಿಡಬೇಕಾಗುತ್ತದೆ. ಹೃತಿಕ್-ಕರೀನಾ ಸೇರಿ ಅಮಿತಾಭ್-ಶಾರುಖ್ ಅವರನ್ನು ಒಂದುಗೂಡಿಸುತ್ತಾರೆ. ಜಯಾ ಬಚ್ಚನ್​​ ಅವರ ಮಾತೃಹೃದಯ, ಕಾಜೋಲ್​ ಪತ್ನಿ ಪ್ರೇಮ ಕೂಡಾ ಪ್ರೇಕ್ಷಕರನ್ನು ಅಪಾರವಾಗಿ ಸೆಳೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.