ಕರ್ನಾಟಕ

karnataka

ETV Bharat / entertainment

ಕಾರ್ತಿಕ್ ಆರ್ಯನ್ ಭೇಟಿಗೆ ಸೈಕಲ್​ನಲ್ಲೇ ಸಾವಿರ ಕಿ.ಮೀ ಸಾಗಿ ಬಂದ ಅಭಿಮಾನಿ - ಸೈಕಲ್​​​

ಅಭಿಮಾನಿಯೋರ್ವರು ಉತ್ತರ ಪ್ರದೇಶದ ಝಾನ್ಸಿಯಿಂದ ಮುಂಬೈಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಬಂದು ನಟ ಕಾರ್ತಿಕ್​ ಆರ್ಯನ್ ಅವರನ್ನು ಭೇಟಿಯಾಗಿದ್ದಾರೆ.

Fan came by Cycles to meet Kartik Aaryan
ಕಾರ್ತಿಕ್ ಆರ್ಯನ್ ಭೇಟಿಯಾದ ಅಭಿಮಾನಿ

By ETV Bharat Karnataka Team

Published : Feb 11, 2024, 11:43 AM IST

ಕಾರ್ತಿಕ್ ಆರ್ಯನ್, ಬಾಲಿವುಡ್​ನ ಯಂಗ್​​ ಸೂಪರ್​ ಸ್ಟಾರ್. ಅಪಾರ ಸಂಖ್ಯೆಯ ಅಭಿಮಾನಿಗಳೊಂದಿಗೆ ಉತ್ತಮ ಸ್ನೇಹಬಾಂಧವ್ಯ ಹೊಂದಿದ್ದಾರೆ. ಯಾವುದೇ ಈವೆಂಟ್​ ಇರಲಿ ಅಥವಾ ಸಿನಿಮಾ ಪ್ರಮೋಶನ್​ ವೇಳೆ ಪಾಪರಾಜಿಗಳು ಮತ್ತು ಅಭಿಮಾನಿಗಳಿಗೆ ಸಮಯ ಮೀಸಲಿಡುತ್ತಾರೆ. ನಟನ ವಿನಮ್ರ ನಡತೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅದರಂತೆ ಶನಿವಾರದಂದು ಅಭಿಮಾನಿಯೊಬ್ಬರು ಉತ್ತರ ಪ್ರದೇಶದ ಝಾನ್ಸಿಯಿಂದ ಮುಂಬೈಗೆ ಸೈಕಲ್‌ನಲ್ಲಿ ಪ್ರಯಾಣಿಸಿ ಬಂದು ಕಾರ್ತಿಕ್​ ಆರ್ಯನ್ ಅವರನ್ನು ಭೇಟಿಯಾಗಿದ್ದಾರೆ.

ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿರೋ ವಿಡಿಯೋಗಳಲ್ಲಿ, ಯುವಕನೋರ್ವ ಬಾಲಿವುಡ್​ ನಟ ಕಾರ್ತಿಕ್ ಆರ್ಯನ್​​ ಅವರ ಮುಂಬೈ ನಿವಾಸದ ಬಳಿ ಸೈಕಲ್‌ನಲ್ಲಿ ಬಂದಿರೋದನ್ನು ಕಾಣಬಹುದು. ಅಭಿಮಾನಿಯನ್ನು ಭೇಟಿಯಾದ ಕಾರ್ತಿಕ್, ಪಾಪರಾಜಿಗಳ ಕ್ಯಾಮರಾಗೆ ಒಟ್ಟಿಗೆ ಪೋಸ್ ನೀಡಿದರು. ಅಭಿಮಾನಿ ಬಳಿ ನಟ ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಯುವಕ, ಕಾರ್ತಿಕ್ ಅವರ ಮನೆ (ಮೂಲ ಮನೆ, ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ) ಇರುವ ಗ್ವಾಲಿಯರ್‌ಗೆ ಬಹಳ ಹತ್ತಿರದ ಪ್ರದೇಶ ಝಾನ್ಸಿಯಿಂದ ಬಂದಿರುವುದಾಗಿ ಉತ್ತರಿಸಿದರು.

ಕಾರ್ತಿಕ್ ತಮ್ಮ ಕಟ್ಟಾ ಅಭಿಮಾನಿಯೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಆ ಯುವಕ ಮುಂಬೈ ತಲುಪಲು ಮತ್ತು ತಮ್ಮ ಮೆಚ್ಚಿನ ನಟನನ್ನು ಭೇಟಿ ಮಾಡಲು 9 ದಿನಗಳ ಕಾಲ ಸೈಕ್ಲಿಂಗ್ ಮಾಡಿದ್ದಾನೆ. ಮುಂಬೈ ಮತ್ತು ಝಾನ್ಸಿ ನಡುವಿನ ಅಂತರ 1,059 ಕಿಲೋಮೀಟರ್. ಆದರೆ ವ್ಯಕ್ತಿಯ ಗ್ರಾಮದಿಂದ 1,100 ಕಿಲೋಮೀಟರ್ ಇದ್ದು, ಸೈಕಲ್​ ಮೂಲಕವೇ ಆಗಮಿಸಿದ್ದಾರೆ.

ಕಾರ್ತಿಕ್ ಆಗಾಗ್ಗೆ ಇಂತಹ ಸನ್ನಿವೇಶಗಳನ್ನು ಎದುರಿಸುತ್ತಾರೆ. ಈ ಹಿಂದೆ, ಯುವತಿಯರ ಗುಂಪು ತಮ್ಮ ಮುಂಬೈ ಪ್ರವಾಸದ ಸಂದರ್ಭ ನಟನನ್ನು ಭೇಟಿಯಾಗಲು ಬಹಳ ಪ್ರಯತ್ನಿಸಿದ್ದರು. ಅವರು ಗಂಟೆಗಟ್ಟಲೆ ನಟನ ಕಟ್ಟಡದ ಕೆಳಗೆ ನಿಂತು ಕಾದಿದ್ದರು. ಈ ವಿಚಾರ ನಟನಿಗೆ ತಲುಪಿದ ಕೂಡಲೇ, ಮನೆಯಿಂದ ಕೆಳಗಿಳಿದು ಬಂದು ಅಭಿಮಾನಿಗಳೊಂದಿಗೆ ಕೆಲವು ಕ್ಷಣಗಳನ್ನು ಕಳೆದಿದ್ದರು.

ಇದನ್ನೂ ಓದಿ:ಅಪಾಯಕಾರಿ ಸ್ಟಂಟ್‌: ಬಾಲಿವುಡ್​ ನಟ ವಿದ್ಯುತ್​ ಜಮ್ವಾಲ್​ ರೈಲ್ವೆ ಪೊಲೀಸ್​ ವಶಕ್ಕೆ

ಕಾರ್ತಿಕ್ ಆರ್ಯನ್​ ಸಿನಿಮಾ: ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ''ಚಂದು ಚಾಂಪಿಯನ್‌''ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗೆ, ನಟನ ಹುಟ್ಟುಹಬ್ಬದ ಸಂದರ್ಭ ಕರಣ್ ಜೋಹರ್ ಜೊತೆಗಿನ ಹೊಸ ಪ್ರಾಜೆಕ್ಟ್​ ಘೋಷಿಸಿದ್ದಾರೆ. ಹೆಸರಿಡದ ಈ ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಸಂದೀಪ್ ಮೋದಿ ನಿರ್ದೇಶನವಿರಲಿದೆ. ಮುಂದಿನ ವರ್ಷ ಆಗಸ್ಟ್ 15ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೇ, ನಿರ್ದೇಶಕ ಹನ್ಸಲ್ ಮೆಹ್ತಾ ಅವರ 'ಕ್ಯಾಪ್ಟನ್ ಇಂಡಿಯಾ', ನಿರ್ದೇಶಕ ಅನುರಾಗ್ ಬಸು ಅವರ 'ಆಶಿಕಿ 3' ಮತ್ತು ಹಾರರ್-ಕಾಮಿಡಿ ಚಿತ್ರ ಭೂಲ್ ಭುಲೈಯ್ಯಾ 3ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಸೈಕಲ್‌ನಲ್ಲೇ​ ಏಷ್ಯಾ ಯಾತ್ರೆ ಕೈಗೊಂಡ ಅಪ್ಪು ಅಭಿಮಾನಿ: 1,111 ದಿನಗಳ ಪ್ರಯಾಣ

ABOUT THE AUTHOR

...view details