ಕರ್ನಾಟಕ

karnataka

ETV Bharat / entertainment

ಅಡಿವಿ ಶೇಷ್ 'ಗೂಢಾಚಾರಿ-2' ಚಿತ್ರತಂಡಕ್ಕೆ ಇಮ್ರಾನ್ ಹಶ್ಮಿ ಎಂಟ್ರಿ - Emraan Hashmi

ಬಹುನಿರೀಕ್ಷಿತ 'ಗೂಢಾಚಾರಿ 2' ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಳ್ಳಲಿದ್ದಾರೆ.

Emraan Hashmi in Goodachari  2
'ಗೂಢಾಚಾರಿ-2' ಸಿನಿಮಾದಲ್ಲಿ ಇಮ್ರಾನ್ ಹಶ್ಮಿ

By ETV Bharat Karnataka Team

Published : Feb 17, 2024, 7:05 PM IST

ತೆಲುಗು ಚಿತ್ರರಂಗದಲ್ಲಿ ಸಖತ್​ ಸದ್ದು ಮಾಡಿದ 'ಗೂಢಾಚಾರಿ' ಸಿನಿಮಾ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ನಟ ಅಡಿವಿ ಶೇಷ್ ಅವರ ಅಮೋಘ ಅಭಿನಯದಲ್ಲಿ ಮೂಡಿ ಬಂದ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಪ್ರೇಕ್ಷಕರು, ವಿಮರ್ಷಕರಿಂದ ಮೆಚ್ಚುಗೆಯನ್ನೂ ಗಳಿಸಿತ್ತು. ಸಿನಿಮಾದ ಸೀಕ್ವೆಲ್ ನಿರ್ಮಾಣ ಆಗುತ್ತಿರೋದು ನಿಮಗೆ ಗೊತ್ತೇ ಇದೆ. 'ಗೂಢಾಚಾರಿ 2' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಅನಾವರಣಗೊಂಡು ಸಖತ್ ಸದ್ದು ಮಾಡಿದೆ. ಇದೀಗ ಚಿತ್ರತಂಡಕ್ಕೆ ಬಾಲಿಚುಡ್​ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.

ಯೆಸ್, ಗೂಢಾಚಾರಿ 2 ಸಿನಿಮಾದಲ್ಲಿ ಬಾಲಿವುಡ್​ನ ಖ್ಯಾತ ನಟ ಇಮ್ರಾನ್ ಹಶ್ಮಿ ಅಭಿನಯಿಸುತ್ತಿದ್ದಾರೆ‌. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿರುವ ಇಮ್ರಾನ್ ಅವರೀಗ ಟಾಲಿವುಡ್​ನತ್ತ ಹೆಜ್ಜೆ ಇಟ್ಟಿದ್ದಾರೆ. 'ಗೂಢಾಚಾರಿ' ಬಳಗ ಇಮ್ರಾನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡೋ ಮುಖೇನ ಚಿತ್ರತಂಡಕ್ಕೆ ಅವರನ್ನು ಸ್ವಾಗತಿಸಿದೆ. ಆದ್ರೆ ಯಾವ ಪಾತ್ರದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ ಎಂಬ ಕುತೂಹಲವನ್ನು ಚಿತ್ರತಂಡ ಹಾಗೇ ಉಳಿಸಿಕೊಂಡಿದೆ.

'ಗೂಢಾಚಾರಿ-2' ಸಿನಿಮಾದಲ್ಲಿ ಇಮ್ರಾನ್ ಹಶ್ಮಿ

ಇಮ್ರಾನ್ ಹಶ್ಮಿ ಎಂಟ್ರಿಗೆ ಇಡೀ ಚಿತ್ರತಂಡ ಖುಷಿಯಾಗಿದೆ. ಇದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ಅಭಿನಯಿಸಿದ್ದ 'ಮೇಜರ್' ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್ ಕುಮಾರ್ ಸಿರಿಗಿನೀದಿ ಅವರು ಗೂಢಾಚಾರಿ ಸೀಕ್ವೆಲ್​​ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಬನಿತಾ ಸಂಧು ಅಡಿವಿ ಶೇಷ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಗೂಢಾಚಾರಿ 2 ಚಿತ್ರಕ್ಕೆ ಅಡಿವಿ ಶೇಷ್ ಅವರೇ ಕಥೆ ಬರೆದಿದ್ದಾರೆ. ಕಾರ್ತಿಕೇಯ 2, ಮೇಜರ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಗೂಢಾಚಾರಿ ಸೀಕ್ವೆಲ್​ಗೆ ಬಂಡವಾಳ ಹೂಡುತ್ತಿವೆ. ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಹಾಗೂ ಎ.ಕೆ ಎಂಟರ್​ಟೈನ್ಮೆಂಟ್​ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಮೂಲಕ ಟಿ.ಜಿ ವಿಶ್ವಪ್ರಸಾದ್ ಹಾಗೂ ಅಭಿಷೇಕ್ ಅಗರ್ವಾಲ್ ಅವರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ಅಮೀರ್​ ಖಾನ್​ 'ದಂಗಲ್' ಸಹನಟಿ ಸುಹಾನಿ ಭಟ್ನಾಗರ್ ಇನ್ನಿಲ್ಲ! 19ನೇ ವಯಸ್ಸಿಗೆ ವಿಧಿವಶ

ಬಾಲಿವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ಇಮ್ರಾನ್​ ಹಶ್ಮಿ ಅವರು ಕೊನೆಯದಾಗಿ ಟೈಗರ್​ 3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಯಶ್​ ರಾಜ್​ ಫಿಲ್ಮ್ಸ್​​ ನಿರ್ಮಾಣದ ಸ್ಪೈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್​ ಮತ್ತು ಬಹುಬೇಡಿಕೆ ನಟಿ ಕತ್ರಿನಾ ಕೈಫ್​​ ಮುಖ್ಯಭೂಮಿಕೆಯಲ್ಲಿದ್ದರೆ, ಇಮ್ರಾನ್​ ಹಶ್ಮಿ ಖಳನಾಯಕನಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನವೆಂಬರ್​ 12ರಂದು ತೆರೆಕಂಡ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಯಶ ಕಂಡಿದೆ.

ಇದನ್ನೂ ಓದಿ:ಲಕ್ಕಿ ಫ್ಯಾನ್​: ರಶ್ಮಿಕಾಗೆ ಕೆಂಗುಲಾಬಿ​ ಕೊಟ್ಟು ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿ - ವಿಡಿಯೋ ವೈರಲ್

ABOUT THE AUTHOR

...view details