ಕರ್ನಾಟಕ

karnataka

ETV Bharat / entertainment

ದೊಡ್ಮನೆ ಕುಡಿ ವಿನಯ್ ರಾಜ್​​ಕುಮಾರ್​ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಭೀಮ' ದುನಿಯಾ ವಿಜಯ್ - Duniya Vijay Vinay Rajkumar movie - DUNIYA VIJAY VINAY RAJKUMAR MOVIE

''ಸಿಟಿ ಲೈಟ್ಸ್'' ಶೀರ್ಷಿಕೆಯ ಹೊಸ ಸಿನಿಮಾದ ಪೋಸ್ಟರ್ ಅನಾವರಣಗೊಂಡಿದೆ. ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ ಚಿತ್ರತಂಡ ಪ್ರವೇಶಿಸಿದ್ದಾರೆ.

City lights poster release
ದುನಿಯಾ ವಿಜಯ್ ನಿರ್ದೇಶನದ ಸಿನಿಮಾಗೆ ವಿನಯ್ ರಾಜ್​​ಕುಮಾರ್ ಎಂಟ್ರಿ (ETV Bharat, Film Poster)

By ETV Bharat Entertainment Team

Published : Sep 26, 2024, 8:14 PM IST

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ದುನಿಯಾ ವಿಜಯ್ ಸಲಗ ಹಾಗೂ ಭೀಮ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಈ ಎರಡು ಚಿತ್ರಗಳ ಸಕ್ಸಸ್ ದುನಿಯಾ ವಿಜಯ್ ಕುಮಾರ್ ಅವರ ಸ್ಟಾರ್​ಡಮ್ ಮತ್ತಷ್ಟು ಹೆಚ್ಚಿದೆ‌. ಭೀಮ ಚಿತ್ರದ ಬಳಿಕ ವಿಜಯ್ ''ಸಿಟಿ ಲೈಟ್ಸ್'' ಶೀರ್ಷಿಕೆಯ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು.

ವಿಜಯ್ ಕುಮಾರ್ ಪುತ್ರಿ ಮೋನಿಷಾ ವಿಜಯ್‌ ಕುಮಾರ್‌ ನಟಿಸುತ್ತಿರುವ ಚೊಚ್ಚಲ ಚಿತ್ರವಿದು. ಕೆಲ ದಿನಗಳ ಹಿಂದೆ ಸಿಟಿ ಲೈಟ್ಸ್ ಅನೌನ್ಸ್ ಆಗಿದ್ದು, ದುನಿಯಾ ವಿಜಯ್​ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೌದು, ವಿಜಯ್ ತಮ್ಮ ಮಗಳ ಸಿನಿಮಾ ನಿರ್ದೇಶನದ ಜೊತೆಗೆ ಒಂದು ಹೊಸ ಗುಡ್ ನ್ಯೂಸ್ ಕೊಟ್ಟಿದ್ದಾರೆ. ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ ಚಿತ್ರತಂಡ ಪ್ರವೇಶಿಸಿದ್ದಾರೆ. ಇದು ದೊಡ್ಮನೆ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಈ ಹಿಂದೆ ಸಲಗ ಹಾಗೂ ಭೀಮ ಅಂಥಹ ಮಾಸ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ವಿಜಯ್, ವಿನಯ್ ರಾಜ್ ಕುಮಾರ್ ಜೊತೆಗೆ ಮಗಳು ಮೋನಿಷಾಳನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ಸಿದ್ದತೆ ನಡೆಸಿದ್ದಾರೆ.

ಇದನ್ನೂ ಓದಿ:ಹಿಂದಿನ ಸಿನಿಮಾಗಳಂತೆ 'ಒನ್ ಅಂಡ್ ಅ ಹಾಫ್' ಗೆಲ್ಲಿಸಿ: ಮಾನ್ವಿತಾ ಹರೀಶ್ ಕಾಮತ್ - One and A Half movie

ಭೀಮ ಬಿಡುಗಡೆ ಸಂದರ್ಭ ದುನಿಯಾ ವಿಜಯ್ ಅವರು ವಿನಯ್ ರಾಜ್​ಕುಮಾರ್ ಅವರನ್ನು ಸಕಲೇಶಪುರದ ಕಾಡಿಗೆ ಕರೆದುಕೊಂಡು ಹೋಗಿ ಪೆಪೆ ಸಿನಿಮಾದ ಬಗ್ಗೆ ಸಂದರ್ಶನ ಮಾಡಿದ್ದರು. ಇದೀಗ ದುನಿಯಾ ವಿಜಯ್ ಮಗಳ ಸಿನಿಮಾಗೆ ವಿನಯ್ ಹೀರೋ ಆಗಿದ್ದಾರೆ. ವಿಜಯ್ ಆಪ್ತರು ಹೇಳುವ ಹಾಗೇ ಈ ಬಾರಿ ಮಾಸ್ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಲವ್ ಸ್ಟೋರಿ ಕಥೆ ಹೇಳಲಿದ್ದಾರೆ. ಈ ಹಿಂದೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದ ಸಲಗ ಹಾಗೂ ಭೀಮ ಸಿನಿಮಾಗಳು ನಮ್ಮ ನಡುವೆ ನಡೆಯುವ ಕಥೆ ಹೇಳಿತ್ತು. ಇದೀಗ ಸಿಟಿ ಲೈಟ್ಸ್ ಚಿತ್ರದ ಮ‌ೂಲಕ ನೈಜ ಘಟನೆಯನ್ನು ಸಿಲ್ವರ್ ಸ್ಕ್ರೀನ್ ಮೇಲೆ ತರಲು ವಿಜಯ್ ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ:ರೀ ರಿಲೀಸ್​ನಲ್ಲೂ ಒಳ್ಳೆ ಗಳಿಕೆ ಮಾಡಿದ ಉಪೇಂದ್ರ, ಜಾಕಿ, ರಾಬರ್ಟ್, ಕರಿಯ, ಎ ಸಿನಿಮಾಗಳು - Re Released Movies collection

ಮತ್ತೊಂದು ಕಡೆ ವಿನಯ್ ರಾಜ್ ಕುಮಾರ್ ಕೂಡ ದುನಿಯಾ ವಿಜಯ್ ನಿರ್ದೇಶನದಲ್ಲಿ ಕೆಲಸ ಮಾಡಲು ಎಕ್ಸೈಟ್ ಆಗಿದ್ದಾರೆ ಎಂದು ವಿನಯ್ ಗೆಳೆಯರೊಬ್ಬರು ಹೇಳಿದರು‌. ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಮಾಡೋದ್ರಲ್ಲಿ ದುನಿಯಾ ವಿಜಯ್ ಅಂಡ್ ಟೀಮ್ ಬ್ಯುಸಿಯಾಗಿದೆ. ಈ ಚಿತ್ರ ಮುಗಿದ ಮೇಲೆ ನಿರ್ದೇಶಕ ಜಡೇಶ್‌ ಕೆ.ಹಂಪಿ ನಿರ್ದೇಶನದ ವಿಜಯ್‌ ನಟನೆಯ 29ನೇ ಸಿನಿಮಾ ಶುರುವಾಗಲಿದೆ.

ABOUT THE AUTHOR

...view details