ETV Bharat / entertainment

'ಆರ್​ಆರ್​ಆರ್​' ಸ್ಟಾರ್​ ರಾಮ್​​​ಚರಣ್ 'ಗೇಮ್ ಚೇಂಜರ್' ಭರ್ಜರಿ ಟ್ರೇಲರ್​ ರಿಲೀಸ್​ - GAME CHANGER TRAILER

'ಆರ್​ಆರ್​ಆರ್​' ಬಳಿಕ ಬರುತ್ತಿರುವ ರಾಮ್​ ಚರಣ್​ ನಟನೆಯ 'ಗೇಮ್ ಚೇಂಜರ್' ಚಿತ್ರದ ಭರ್ಜರಿ ಟ್ರೇಲರ್​ ಅನಾವರಣಗೊಂಡಿದೆ.

Game Changer Trailer out
ಗೇಮ್ ಚೇಂಜರ್ ಟ್ರೇಲರ್​ ರಿಲೀಸ್​ (Photo: Film poster)
author img

By ETV Bharat Entertainment Team

Published : Jan 2, 2025, 6:22 PM IST

ಕಾಯುವಿಕೆ ಕೊನೆಗೊಂಡಿದೆ. ಬ್ಲಾಕ್​​​ಬಸ್ಟರ್ 'ಆರ್​ಆರ್​ಅರ್' ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ ಚಿರಂಜೀವಿ ಪುತ್ರ​ ರಾಮ್ ಚರಣ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ 'ಗೇಮ್ ಚೇಂಜರ್' ಚಿತ್ರದ ಟ್ರೇಲರ್​ ಅನಾವರಣಗೊಂಡಿದೆ. ಬಿಡುಗಡೆ ಹೊಸ್ತಿಲಲ್ಲಿರುವ ಸಿನಿಮಾ ಪ್ರಚಾರ ಶುರು ಮಾಡಿದ್ದು, ಟ್ರೇಲರ್​​ ಸಿನಿಪ್ರಿಯರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದೆ. ಆಸ್ಕರ್​ ವೇದಿಕೆ ಹತ್ತಿದ್ದ 'ಆರ್​ಆರ್​ಆರ್​' ಬಳಿಕ ಬರುತ್ತಿರುವ ರಾಮ್​ ಚರಣ್​ ನಟನೆಯ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಅಮೆರಿಕದ ಡಲ್ಲಾಸ್‌ನಲ್ಲಿರುವ ಕರ್ಟಿಸ್ ಕಲ್ವೆಲ್ ಸೆಂಟರ್‌ನಲ್ಲಿ ನಡೆದ ಪ್ರೀ ರಿಲೀಸ್​​ ಈವೆಂಟ್​​​ ನಂತರ, ಚಿತ್ರ ತಯಾರಕರು ಟ್ರೇಲರ್​ನೊಂದಿಗೆ ಅಭಿಮಾನಿಗಳೆದುರು ಬಂದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳ ಮೂರು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ರಾಮ್ ಚರಣ್ ಬೆಳ್ಳಿತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಸಾಗರೋತ್ತರ ಪ್ರದೇಶದಲ್ಲಿ ಈಗಾಗಲೇ ಅಡ್ವಾನ್ಸ್​ ಬುಕಿಂಗ್​ ಶುರುವಾಗಿದೆ.

ಬಹುನಿರೀಕ್ಷಿತ ಚಿತ್ರ ಇದೇ ಜನವರಿ 10ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ. ದಕ್ಷಿಣ ಚಿತ್ರರಂಗದ ಹೆಸರಾಂತ ಎಸ್ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್‌'ನಲ್ಲಿ ರಾಮ್​​ ಚರಣ್​​ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ತೆರೆಹಂಚಿಕೊಂಡಿದ್ದಾರೆ. ಎಸ್‌ಜೆ ಸೂರ್ಯ, ನಾಸರ್, ಸುನಿಲ್, ಪ್ರಕಾಶ್ ರಾಜ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಂಗ್ಸ್​, ಪೋಸ್ಟರ್ಸ್​ ಅಲ್ಲದೇ ನಾಯಕ ನಟ ರಾಮ್ ಚರಣ್ ಅವರನ್ನೊಳಗೊಂಡ ಒಳಗೊಂಡ ವಿವಿಧ ಪ್ರೀ-ರಿಲೀಸ್ ಈವೆಂಟ್​ಗಳೊಂದಿಗೆ ಚಿತ್ರದ ಪ್ರಚಾರ ಉತ್ತಮವಾಗಿ ಸಾಗಿದೆ.

ಇದನ್ನೂ ಓದಿ: ಬಿಗ್​​ ಬಾಸ್​ಗೆ ಎಂಟ್ರಿ ಕೊಟ್ಟ ಧನರಾಜ್​ ಕೂಡುಕುಟುಂಬದ 30 ಮಂದಿ; ಕರಾವಳಿಯ ಪಿಲಿನಲಿಕೆ ಜೋರು

ಇದಕ್ಕೂ ಮೊದಲು ಲಕ್ನೋದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಗೇಮ್ ಚೇಂಜರ್‌ನ ಟೀಸರ್ ಅನಾವರಣಗೊಳಿಸಲಾಗಿತ್ತು. ನಾಯಕ ನಟಿ ಕಿಯಾರಾ ಅಡ್ವಾಣಿ, ನಿರ್ದೇಶಕ ಎಸ್ ಶಂಕರ್ ಸೇರಿದಂತೆ ಚಿತ್ರತಂಡ ಭಾಗವಹಿಸಿದ್ದ ಈವೆಂಟ್​ನಲ್ಲಿ ನಾಯಕ ನಟ ರಾಮ್ ಚರಣ್ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದರು. ಸಾಂಪ್ರದಾಯಿಕ ಉಡುಪಾದ ಕಪ್ಪು ಕುರ್ತಾ, ಪೈಜಾಮಾ ಮತ್ತು ಸ್ಟೋಲ್ ಧರಿಸಿದ್ದರು.

ಇದನ್ನೂ ಓದಿ: ಬೇಬಿಬಂಪ್​ ಫೋಟೋಶೂಟ್​​ ಹಂಚಿಕೊಂಡ ಹರಿಪ್ರಿಯಾ ವಸಿಷ್ಠ ಸಿಂಹ

ಈ ಚಿತ್ರ ರಾಜಕೀಯ ಹಿನ್ನೆಲೆಯಲ್ಲಿ, ನ್ಯಾಯಯುತ ಚುನಾವಣೆಗಾಗಿ ಐಎಎಸ್ ಅಧಿಕಾರಿ ನಡೆಸುವ ಹೋರಾಟದ ಕಥೆಯನ್ನೊಳಗೊಂಡಿದೆ. ಆರಂಭದಲ್ಲಿ 'ಗೇಮ್ ಚೇಂಜರ್' ಸೂಪರ್ ಸ್ಟಾರ್ ಅಜಿತ್ ಕುಮಾರ್ ಅವರ ತಮಿಳು ಚಿತ್ರ ವಿದಾಮುಯಾರ್ಚಿಯೊಂದಿಗೆ ಬಿಡುಗಡೆಯಾಗಲು ಸಜ್ಜಾಗಿತ್ತು. ಅದಾಗ್ಯೂ, ವಿದಾಮುಯಾರ್ಚಿ ಚಿತ್ರ ತಯಾರಕರು ಅದರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಸದ್ಯ 'ಗೇಮ್ ಚೇಂಜರ್' ಟ್ರೇಲರ್​ ಬಿಡುಗಡೆ ಆಗಿದ್ದು, ಸಿನಿಮಾ ಜನವರಿ 10ರಂದು ತೆರೆಗಪ್ಪಳಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.