ಲಖನೌ, ಉತ್ತರಪ್ರದೇಶ: ಕೆಲ ದಿನಗಳ ಹಿಂದೆಯಷ್ಟೇ ನಾಸಾದ ಗಗನಯಾತ್ರಿಯೊಬ್ಬರು ಮಹಾಕುಂಭದ ಬೆಳಕಿನ ವ್ಯವಸ್ಥೆಯನ್ನು ಮುಕ್ತ ಮನಸಿನಿಂದ ಶ್ಲಾಘಿಸಿದ್ದರು. ಈ ಬಗ್ಗೆ ಉತ್ತರಪ್ರದೇಶದ ಇಂಧನ ಸಚಿವ ಅರವಿಂದ್ ಕುಮಾರ್ ಶರ್ಮಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಮಹಾಕುಂಭದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಕೆಲಸದಿಂದ ಅವರು ಸಂತಸಗೊಂಡಿದ್ದಾರೆ.
ಪ್ರಯಾಗರಾಜ್ ಮಹಾಕುಂಭದಲ್ಲಿ ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಪ್ರಪಂಚದಾದ್ಯಂತ ಇಲ್ಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಗಗನಯಾತ್ರಿ ಡಾನ್ ಪೆಟಿಟ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ X ನಲ್ಲಿ ಮಹಾ ಕುಂಭದ ಚಿತ್ರಗಳನ್ನು ಹಂಚಿಕೊಂಡಿದ್ದರು. ಜನವರಿ 27 ರಂದು ಈ ಚಿತ್ರಗಳನ್ನು ಪೋಸ್ಟ್ ಮಾಡಿ ಮಹಾಕುಂಭದ ಬೆಳಕಿನ ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಈ ಹಿನ್ನೆಲೆಯಲ್ಲಿ ಇಂಧನ ಸಚಿವ ಅರವಿಂದ್ ಕುಮಾರ್ ಶರ್ಮಾ ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಇಂಧನ ಇಲಾಖೆಯನ್ನು ಹೊಗಳಿದ ಯುಪಿ ಸಚಿವರು: ಇಂಧನ ಸಚಿವರು ಎಕ್ಸ್‌ನಲ್ಲಿ ಈ ಸಂಬಂಧ ಟ್ವೀಟ್ ಮಾಡಿ ವಿದ್ಯುತ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ನಾಸಾ ಮಾತ್ರವಲ್ಲದೇ, ಮಹಾಕುಂಭ ಪ್ರದೇಶದ ಮೂಲಕ ಹಾದುಹೋಗುವ ವಿಮಾನಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಕೂಡ ಮೇಳದ ದೀಪಗಳು ಮತ್ತು ಅಲಂಕಾರಗಳಿಂದ ಪ್ರಭಾವಿತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಯಾರೋ ಇದನ್ನು ಕನಸಿನ ಪ್ರಪಂಚ ಎಂದು ಕರೆದಿದ್ದಾರೆ. ಇಂತಹ ಪ್ರಸಂಶೆಗಳಿಗಾಗಿ ಹಗಲಿರುಳು ದುಡಿದ ಕೀರ್ತಿ ವಿದ್ಯುತ್ ಕಾರ್ಮಿಕರಿಗೆ ಸಲ್ಲುತ್ತದೆ. ಏನೂ ಇಲ್ಲದ ಸ್ಥಳದಲ್ಲಿ ವಿದ್ಯುತ್ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಕಲ್ಪಿಸಿರುವುದು ಇಂಧನ ಇಲಾಖೆ ಸಿಬ್ಬಂದಿಯ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ.
2025 Maha Kumbh Mela Ganges River pilgrimage from the ISS at night. The largest human gathering in the world is well lit. pic.twitter.com/l9YD6o0Llo
— Don Pettit (@astro_Pettit) January 26, 2025
ಮಹಾಕುಂಭ ಪ್ರದೇಶದಲ್ಲಿ 70 ಸಾವಿರ ಎಲ್ಇಡಿ ದೀಪಗಳು: ಮಹಾಕುಂಭ ನಡೆಯುತ್ತಿರುವ ಪ್ರದೇಶದಲ್ಲಿ 70 ಸಾವಿರಕ್ಕೂ ಹೆಚ್ಚು ಎಲ್ ಇಡಿಯ ಬೀದಿ ದೀಪಗಳನ್ನು ಅಳವಡಿಸಲಾಗಿದೆ. 52 ಸಾವಿರಕ್ಕೂ ಹೆಚ್ಚು ಹೊಸ ವಿದ್ಯುತ್ ಕಂಬಗಳನ್ನು ನಡೆಲಾಗಿದೆ. ಈ ಕಂಬಗಳು ತಮ್ಮ ಸ್ಥಳವನ್ನು ಸೂಚಿಸುವ ಮೂಲಕ ಸಂದರ್ಶಕರು ಮತ್ತು ಯಾತ್ರಾರ್ಥಿಗಳಿಗೆ ತ್ವರಿತವಾಗಿ ವಿದ್ಯುತ್ ಕಡಿತವನ್ನು ಪತ್ತೆಹಚ್ಚುವ ಉದ್ದೇಶದಿಂದ ಜಿಯೋ-ಟ್ಯಾಗ್ ಕೂಡಾ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
Maha Kumbh Mela from orbital pass today pic.twitter.com/no2R7ZVA44
— Don Pettit (@astro_Pettit) January 28, 2025
ಅದೇ ರೀತಿ ಲೋಡ್ ಹೆಚ್ಚಿದ್ದ ಕಡೆ ಹಲವು ಹೊಸ ಸಬ್ ಸ್ಟೇಷನ್ ಗಳನ್ನು ನಿರ್ಮಿಸಲಾಗಿದೆ. ಸಾವಿರಾರು ಕಿಲೋಮೀಟರ್ ಉದ್ದದ ಹೊಸ ಹೈಟೆನ್ಷನ್ ಮತ್ತು ಲೋ ಟೆನ್ಶನ್ ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿದೆ. ವಿವಿಧ ಶಿಬಿರ ಕಚೇರಿಗಳು, ಧಾರ್ಮಿಕ ಸ್ಥಳಗಳು ಮತ್ತು ಸಾಂಸ್ಥಿಕ ಸಂಸ್ಥೆಗಳಿಗೆ ಸುಮಾರು ಐದು ಲಕ್ಷ ಸಂಪರ್ಕಗಳನ್ನು ನೀಡಲಾಗಿದೆ. ಮಹಾಕುಂಭ ಪ್ರದೇಶದಲ್ಲಿ ನಡೆಯುತ್ತಿರುವ ಹೆಚ್ಚಿನ ಸೌಲಭ್ಯಗಳನ್ನು ವಿದ್ಯುತ್ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಇಂಧನ ಸಚಿವರು ವಿವರಿಸಿದ್ದಾರೆ. ಸೇತುವೆಗಳು, ರಸ್ತೆಗಳು ಅಥವಾ ಇತರ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಾಕಷ್ಟು ಅಲಂಕಾರಿಕ ಮತ್ತು ಸೃಜನಶೀಲ ದೀಪಗಳನ್ನು ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
प्रयाग महाकुंभ को अलौकिक, दिव्य और भव्य बनाने और दिखाने में उत्तर प्रदेश के बिजली विभाग की बड़ी भूमिका रही है।
— A K Sharma (@aksharmaBharat) February 3, 2025
किसी ने कहा कि महाकुंभ प्रकाश में एक स्वप्नलोक जैसा दिखता है।
कुछ दिन पहले NASA के एक अंतरिक्ष यात्री जो अभी शायद अंतरिक्ष (space) में ही हैं उन्होंने International… pic.twitter.com/oWP03f2SMZ
ಇದನ್ನು ಓದಿ: ಮಹಾ ಕುಂಭಮೇಳ ಕಾಲ್ತುಳಿತ: ಕ್ರಮಕ್ಕೆ ಆಗ್ರಹಿಸಿದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್