ETV Bharat / state

ಎರಡು ವರ್ಷದಲ್ಲಿ 311 ಬಾರಿ ಸಂಚಾರ ನಿಯಮ ಉಲ್ಲಂಘನೆ: 1.61 ಲಕ್ಷ ರೂ ದಂಡ! - TRAFFIC RULE VIOLATION

ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ಸವಾರ ಕೊನೆಗೂ ಸಿಕ್ಕಿಬಿದ್ದು, ಆತನ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಜಪ್ತಿ
311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಜಪ್ತಿ (ಬೆಂಗಳೂರು ಸಂಚಾರ ಪೊಲೀಸರು)
author img

By ETV Bharat Karnataka Team

Published : Feb 4, 2025, 7:20 AM IST

Updated : Feb 4, 2025, 10:17 AM IST

ಬೆಂಗಳೂರು: ಈ ದ್ವಿಚಕ್ರ ವಾಹನದ ಮೇಲಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಕೇಳಿದರೆ ದಂಗಾಗುತ್ತೀರಿ. ಏಕೆಂದರೆ ಈ ವಾಹನದ ಮೇಲೆ ಎರಡು ವರ್ಷಗಳಲ್ಲಿ ಬರೋಬ್ಬರಿ 311 ಪ್ರಕರಣಗಳು‌ ದಾಖಲಾಗಿವೆ. ಇದಕ್ಕೆ ದಂಡದ ಪ್ರಮಾಣ 1.61 ಲಕ್ಷ..!

ಹೌದು... ಪೊಲೀಸರು ಸಂಚಾರ ನಿಯಮಗಳನ್ನು ಪಾಲಿಸುವಂತೆ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಕೆಲ ಸವಾರರು ಕ್ಯಾರೇ ಎನ್ನದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಅಂತಹವರ ವಿರುದ್ಧ ಸಂಚಾರ ಪೊಲೀಸರು, ಸಿಗ್ನಲ್ ಬಳಿ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿಯೇ ದಂಡ ವಿಧಿಸುತ್ತಿದ್ದಾರೆ. ಆದರೆ, ನಗರದಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. 2023ರ ಮಾರ್ಚ್‌ನಿಂದ ಈವರೆಗೂ 311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.

ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆೆಯ ದ್ವಿಚಕ್ರ ವಾಹನ ಸವಾರ ಪೊಲೀಸರ ದಂಡಾಸ್ತ್ರಕ್ಕೂ ಜಗ್ಗದೇ ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ. ಹೆಲ್ಮೆೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿ ಹಲವು ಸಂಚಾರ ನಿಯಮಗಳನ್ನು ಇವರು ಪಾಲಿಸಿಲ್ಲ. ಹೀಗೆ ಈವರೆಗೆ 311 ಬಾರಿ ನಿಯಮ ಉಲ್ಲಂಘಿಸಿದ್ದು, 1.61 ಲಕ್ಷ ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಕಳೆದ ವರ್ಷ 1,05,500 ರೂ. ಇದ್ದ ದಂಡದ ಮೊತ್ತ, ಈ ವರ್ಷ 1,61,500 ರೂ.ಗೆ ಏರಿಕೆಯಾಗಿದೆ. ಈ ಬಗ್ಗೆೆ ಸವಾರನಿಗೆ ಹಲವು ಬಾರಿ ನೋಟಿಸ್ ಕೊಡ ನೀಡಲಾಗಿದೆ. ಆದರೂ ಕ್ಯಾರೆ ಅಂದಿಲ್ಲ ಎಂದು ತಿಳಿದುಬಂದಿದೆ.

ವಾಹನದ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಿದೆ: ಈ ದಂಡದ ಮೊತ್ತವು ಸವಾರನ ದ್ವಿಚಕ್ರ ವಾಹನದ ಮೌಲ್ಯಕ್ಕಿಂತಲೂ ಹೆಚ್ಚಿದೆ. ಸಂಚಾರ ಪೊಲೀಸರು ಸವಾರನ ವಿರುದ್ಧ ಇನ್ನೂ ಯಾಕೆ ಕಠಿಣ ಕ್ರಮ ಕೈಗೊಂಡಿಲ್ಲ. ಆರ್‌ಟಿಓ ಅಧಿಕಾರಿಗಳು ಏಕೆ ವಾಹನ ಜಪ್ತಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆತನ ವಾಹನ ಸಂಖ್ಯೆೆ ಸಮೇತ ಪ್ರಕಟಿಸಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ದ್ವಿಚಕ್ರವಾಹನ ಸಮೇತ ನೂರಾರು ಬಾರಿ ನಿಯಮ ಉಲ್ಲಂಘಿಸಿದ ಸವಾರನ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರ ಗಮನ ಸೆಳೆಯಲಾಗಿತ್ತು. ಇದನ್ನು ಆಧರಿಸಿ ಸಿಟಿ ಮಾರ್ಕೆಟ್ ಸಂಚಾರ ಪೊಲೀಸರು, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 800 ಚಾಲಕರ ವಿರುದ್ಧ ಡ್ರಿಂಕ್ & ಡ್ರೈವ್, ಅತಿವೇಗದ ಚಾಲನೆಗೆ 2.30 ಲಕ್ಷ ರೂ. ದಂಡ

ಇದನ್ನೂ ಓದಿ: ಮಾಡಲ್​ಗಳ ಮೂಲಕ ಅಪಘಾತದ ಭೀಕರತೆ, ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಿದ ಶಿವಮೊಗ್ಗ ಪೊಲೀಸ್

Last Updated : Feb 4, 2025, 10:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.