ಕರ್ನಾಟಕ

karnataka

ETV Bharat / entertainment

ವಿಡಿಯೋ: ಮೊದಲ ಬಾರಿ ಮಗುವಿನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ - DEEPIKA RANVEER

ದೀಪಿಕಾ ಪಡುಕೋಣೆ ಹಾಗೂ ರಣ್​​​ವೀರ್ ಸಿಂಗ್ ತಮ್ಮ ಮಗಳು ದುವಾ ಪಡುಕೋಣೆ ಸಿಂಗ್ ಜೊತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Ranveer Deepika Family
ರಣ್​ವೀರ್​ ದೀಪಿಕಾ ಕುಟುಂಬ (Photo: IANS)

By ETV Bharat Entertainment Team

Published : Nov 8, 2024, 5:49 PM IST

ಬಾಲಿವುಡ್ ಪವರ್ ಕಪಲ್​​ ದೀಪಿಕಾ ಪಡುಕೋಣೆ ಹಾಗೂ ರಣ್​​​ವೀರ್ ಸಿಂಗ್ ತಮ್ಮ ಎರಡು ತಿಂಗಳ ಮಗಳು ದುವಾ ಪಡುಕೋಣೆ ಸಿಂಗ್ ಜೊತೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್​ ಫ್ಯಾಮಿಲಿ ಅನ್ನೋ ಫೀಲ್​ ಕೊಟ್ಟಿದೆ. ಜನಪ್ರಿಯ ತಾರಾ ದಂಪತಿ ಮುಂಬೈನ ಖಾಸಗಿ ಕಲಿನಾ ವಿಮಾನ ನಿಲ್ದಾಣದಲ್ಲಿಂದು ಕಾಣಿಸಿಕೊಂಡರು.

ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಪುಟ್ಟ ಕಂದಮ್ಮನ್ನು ಎದೆಗಪ್ಪಿ ಹಿಡಿದಿದ್ದರು. ಎಲ್ಲಾ ತಾಯಿಯರಂತೆ ಸ್ಟಾರ್​ ನಟಿ ಮಗುವಿನ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಹಾಕಿದ್ದಾರೆ. ಮುಂಬೈನ ಗಿರ್‌ಗಾಂವ್‌ನಲ್ಲಿರುವ ಹೆಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 8ರಂದು ಮಗುವಿಗೆ ಜನ್ಮ ನೀಡಿದ ನಂತರ ದೀಪಿಕಾ ಇದೇ ಮೊದಲ ಬಾರಿಗೆ ದುವಾ ಜೊತೆ ಕಾಣಿಸಿಕೊಂಡಿದ್ದಾರೆ. ಆದ್ರೆ ಮಗುವಿನ ಮುಖ ಸ್ಪಷ್ಟವಾಗಿ ಗೋಚರಿಸಿಲ್ಲ.

ದೀಪಾವಳಿ ಸಂದರ್ಭ ದೀಪ್​​ವೀರ್​​ ಮಗಳ ಹೆಸರನ್ನು ರಿವೀಲ್​​ ಮಾಡಿದರು. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳಲ್ಲಿ ಕಂದಮ್ಮನ ಹೆಸರನ್ನು ಬಹಿರಂಗಪಡಿಸಿದರು. ಕಂದಮ್ಮನ ಪುಟ್ಟ ಪಾದಗಳ ಫೋಟೋ ಹಂಚಿಕೊಂಡ ದಂಪತಿ, "ದುವಾ ಪಡುಕೋಣೆ ಸಿಂಗ್" ಎಂಬ ಕ್ಯಾಪ್ಷನ್​ ಕೊಟ್ಟು ಗಮನ ಸೆಳೆದಿದ್ದರು. ಶೀಘ್ರವೇ ಪೋಸ್ಟ್ ವೈರಲ್ ಆಗಿ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಿನಿ ಸ್ನೇಹಿತರಿಂದ ಪ್ರೀತಿ, ಆಶೀರ್ವಾದ ಸ್ವೀಕರಿಸಿತು. ಮಗು ಸಾಂಪ್ರದಾಯಿಕ ಉಡುಗೆ ತೊಟ್ಟಿತ್ತು.

ಇದನ್ನೂ ಓದಿ:ಪ್ರಭಾಸ್ ಜೊತೆ ಹೊಂಬಾಳೆ ಫಿಲ್ಮ್ಸ್​ನ​​ 3 ಸಿನಿಮಾ ಘೋಷಣೆ: ಬಿಡುಗಡೆಗೂ ಮುಹೂರ್ತ ಫಿಕ್ಸ್​, 'ಸಲಾರ್​ 2' ಮೊದಲ ಚಿತ್ರ

ದೀಪಾವಳಿ ಸಂದರ್ಭ ಬಿಡುಗಡೆಯಾದ 'ಸಿಂಗಮ್ ಎಗೈನ್'​​​ ಚಿತ್ರದಲ್ಲಿ ದೀಪಿಕಾ ಮತ್ತು ರಣ್​ವೀರ್ ತೆರೆ ಹಂಚಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳಿದ್ದ ಈ ಚಿತ್ರದಲ್ಲಿ ರಣ್​​ವೀರ್ ತಮ್ಮ ಐಕಾನಿಕ್​ 'ಸಿಂಬಾ' ಪಾತ್ರವನ್ನು ನಿರ್ವಹಿಸಿದ್ರೆ, ದೀಪಿಕಾ ಪಡುಕೋಣೆ ಶಕ್ತಿ ಶೆಟ್ಟಿ ಎಂಬ ಹೊಸ ಪಾತ್ರದಲ್ಲಿ ಕಾಣಿಸಿಕೊಂಡರು. ಇದಕ್ಕೂ ಮುನ್ನ ದೀಪಿಕಾ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್, ಇಂಡಿಯನ್​ ಸೂಪರ್​​ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಸೌತ್ ಸೂಪರ್​ ಸ್ಟಾರ್​ ಕಮಲ್ ಹಾಸನ್ ಜೊತೆಗೆ ಮೈಥೋಲಾಜಿಕಲ್​ ಸೈನ್ಸ್ ಫಿಕ್ಷನ್​​ 'ಕಲ್ಕಿ 2898 ಎಡಿ'ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಸೂಪರ್​ ಹಿಟ್ ಆಗಿದೆ.

ಇದನ್ನೂ ಓದಿ:ಹ್ಯಾಪಿ ಬರ್ತ್​​ಡೇ ಗೊಲ್ಲು: ತಮ್ಮನೊಂದಿಗಿನ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್​; ಯಶ್​ ಸಾಥ್

ಸದ್ಯ ದೀಪಿಕಾ, ರಣ್​​ವೀರ್ ಮತ್ತು ದುವಾ ಕುಟುಂಬದ ವಿಡಿಯೋ ಅಭಿಮಾನಿಗಳ ಹೃದಯವನ್ನಾವರಿಸಿದೆ. ಮೂವರ ಸ್ಪಷ್ಟ ನೋಟಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಸ್ಟಾರ್ ಕಪಲ್​ ಫೋಟೋ ಹಂಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿ ನೆಟ್ಟಿಗರಿದ್ದಾರೆ. ಇದರ ಜೊತೆಗೆ, ತಾರಾ ದಂಪತಿಯ ಮುಂದಿನ ಸಿನಿಮಾಗಳ ಮೇಲೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ABOUT THE AUTHOR

...view details