ಕರ್ನಾಟಕ

karnataka

ETV Bharat / entertainment

ದೀಪಿಕಾ ಪಡುಕೋಣೆ ಬೋಲ್ಡ್​​ ಬೇಬಿಬಂಪ್​ ಫೋಟೋಶೂಟ್​: ಹುಬ್ಬೇರಿಸಿದ ನೆಟ್ಟಿಗರು - Deepika Padukone Baby Bump - DEEPIKA PADUKONE BABY BUMP

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ತುಂಬು ಗರ್ಭಿಣಿಯಾಗಿದ್ದು, ಬೋಲ್ಡ್​​ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದಾರೆ. ಪತಿ ರಣ್​​ವೀರ್​ ಸಿಂಗ್​​ ಜೊತೆಗಿನ ಸ್ಟನ್ನಿಂಗ್​​ ಫೋಟೋಗಳು ನೆಟ್ಟಿಗರ ಹುಬ್ಬೇರಿಸಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Deepika Padukone baby bump
ದೀಪಿಕಾ ಪಡುಕೋಣೆ​​ ಬೇಬಿಬಂಪ್​ ಫೋಟೋಶೂಟ್​ (Deepika Padukone Instagram)

By ETV Bharat Karnataka Team

Published : Sep 2, 2024, 7:15 PM IST

ಹೈದರಾಬಾದ್: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಗರ್ಭಾವಸ್ಥೆಯ ಅಂತಿಮ ದಿನಗಳನ್ನು ನಂಬರ್​ ಒನ್​ ನಟಿ ಖ್ಯಾತಿಯ ದೀಪಿಕಾ ಸಖತ್​​ ಎಂಜಾಯ್​​ ಮಾಡುತ್ತಿದ್ದಾರೆ. ಇದೀಗ ಬೋಲ್ಡ್​​ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ರಣ್​​​ವೀರ್​​ ಸಿಂಗ್ ಬಾಲಿವುಡ್​ನ ಪವರ್​​ಫುಲ್​ ಕಪಲ್​​. ಪ್ರೇಮಪಕ್ಷಿಗಳೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಶೀಘ್ರದಲ್ಲೇ ಮಗುವಿಗೆ ಜನ್ಮ ಕೊಡಲಿದ್ದಾರೆ. ನಿರೀಕ್ಷೆಯಂತೆ ಇದೀಗ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿದ್ದಾರೆ.

ಸರಣಿ ಫೋಟೋಗಳು ಶೇರ್:ಅಭಿಮಾನಿಗಳಿಗಾಗಿ ನಟಿ ತಮ್ಮ ಗರ್ಭಧಾರಣೆಯ ಫೋಟೋಶೂಟ್‌ ಅನ್ನು ಹಂಚಿಕೊಂಡಿದ್ದಾರೆ. ಪ್ರೀತಿ, ಖುಷಿ, ನಿರೀಕ್ಷೆ ಮತ್ತು ಹೊಸ ಆರಂಭದ ಉತ್ಸಾಹದ ಅಂಶಗಳನ್ನು ಈ ಫೋಟೋಗಳು ಒಳಗೊಂಡಿದೆ. ತಮ್ಮ ಪ್ರೀತಿ, ವಿಶ್ವಾಸ, ವಾತ್ಸಲ್ಯಕ್ಕೆ ಹೆಸರುವಾಸಿಯಾಗಿರುವ ದೀಪ್​ವೀರ್​ ಸರಣಿ ಚಿತ್ರಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಶೇರ್ ಮಾಡಿರುವ 14 ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಖುಷಿಯ ಕ್ಷಣಗಳನ್ನು ಹಂಚಿಕೊಂಡ ತಾರಾ ದಂಪತಿ, ಕ್ಯಾಪ್ಷನ್​​​ನಲ್ಲಿ ಎವಿಲ್​ ಐ, ಹಾರ್ಟ್ ಮತ್ತು ಫಾರೆವರ್​​ ಎಮೋಜಿಯನ್ನು ಹಾಕಿದ್ದಾರೆ. ಶೀಘ್ರದಲ್ಲೇ ಪೋಷಕರಾಗಲಿರುವ ದಂಪತಿ ಮೊಗದಲ್ಲಿ ಹೆಮ್ಮೆ ಮತ್ತು ಸಂತೋಷ ಎದ್ದು ಕಾಣುತ್ತಿದೆ. ದಂಪತಿಯ ಭಾಂದವ್ಯ, ಮೊದಲ ಮಗುವಿನ ಪೋಷಕರಾಗಲಿರುವ ಅಪಾರ ಖುಷಿ ಈ ಫೋಟೋಗಳಲ್ಲಿ ಸೆರೆಯಾಗಿದೆ. ಫೋಟೋಗಳು ಭಾವನಾತ್ಮಕ ಮತ್ತು ಸಖತ್​ ಬೋಲ್ಡ್​ ಆಗಿವೆ.

ತುಂಬು ಗರ್ಭಿಣಿಯಾಗಿರುವ ನಟಿ ಈವರೆಗೆ ಹೆಚ್ಚಿನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರಲಿಲ್ಲ. ಬೋಲ್ಡ್​​ ಲುಕ್​ಗೆ ಹೆಸರುವಾಸಿಯಾಗಿರುವ ದೀಪಿಕಾ ತಮ್ಮ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸುತ್ತಾರಾ ಅಥವಾ ಇಲ್ಲವೋ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದರು. ಹೆರಿಗೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವ ಹೊತ್ತಲ್ಲಿ ಬೋಲ್ಡ್​​ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿ​ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿರುವ ಫೋಟೋಗಳಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಈ ತಿಂಗಳಾಂತ್ಯ ಹೆರಿಗೆಯಾಗಲಿದೆ.

ಇದನ್ನೂ ಓದಿ:ಕಿಚ್ಚ ಸುದೀಪ್​​ ಗ್ರ್ಯಾಂಡ್​​ ಬರ್ತ್​​​ಡೇ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ? 'ಕಿಚ್ಚೋತ್ಸವ' ಫೋಟೋಗಳಿಲ್ಲಿವೆ ನೋಡಿ​ - Sudeep Birthday Pictures

ಆರು ವರ್ಷಗಳ ಕಾಲ ಡೇಟಿಂಗ್​​ ನಡೆಸಿದ್ದ ರಣ್​​ವೀರ್​​ ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018ರಲ್ಲಿ ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಹಸೆಮಣೆ ಏರಿದ್ದರು. 2013ರಲ್ಲಿ ಬಂದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಿನಿಮಾ ಸೆಟ್‌ನಲ್ಲಿ ಪ್ರೇಮಾಂಕುರವಾಗಿತ್ತು. ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಸಿನಿಮಾದಲ್ಲಿ ಪ್ರೇಮಪಕ್ಷಿಗಳ ಬಾಂಧವ್ಯ ಮತ್ತಷ್ಟು ಗಟ್ಟಿಯಾಯಿತು. ಈ ಜೋಡಿಯೀಗ ಮತ್ತೊಮ್ಮೆ ರೋಹಿತ್ ಶೆಟ್ಟಿ ಅಭಿನಯದ ಸಿಂಗಂ ಎಗೇನ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ ಮೊರೆಹೋದ ನಟ ಸಿದ್ದಿಕ್ - Actor Siddique Case

ABOUT THE AUTHOR

...view details