ಬಾಲಿವುಡ್ ಪವರ್ ಕಪಲ್ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್ ಇದ್ದು ಗರ್ಭಾವಸ್ಥೆಯ ಅಂತಿಮ ದಿನಗಳನ್ನು ಆನಂದಿಸುತ್ತಿದ್ದಾರೆ.
ಹೆರಿಗೆ ದಿನಾಂಕ ಸಮೀಪಿಸುತ್ತಿದ್ದು, ಇಂದು ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ದಂಪತಿ ಭೇಟಿ ಕೊಟ್ಟಿದ್ದಾರೆ. ಕುಟುಂಬಸ್ಥರು ಕೂಡಾ ಜೊತೆಗಿದ್ದರು. ಮೊದಲ ಮಗುವಿನ ಆಗಮನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದಿದ್ದಾರೆ.
ಇದನ್ನೂ ಓದಿ:ಅಬ್ಬಬ್ಬಾ, ಮೊದಲ ದಿನವೇ 126 ಕೋಟಿ ರೂ. ಕಲೆಕ್ಷನ್ ಮಾಡಿದ ದಳಪತಿ ವಿಜಯ್ ಅಭಿನಯದ 'ಗೋಟ್' - Greatest of All Time Collection
ಶನಿವಾರದಂದು ಭಾರತ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಿದೆ. ಅದಕ್ಕೂ ಮುನ್ನ ಶೀಘ್ರದಲ್ಲೇ ಪೋಷಕರಾಗಲಿರುವ ಇವರು ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ದಂಪತಿ ಸಾಂಪ್ರದಾಯಿಕ ನೋಟದಲ್ಲಿ ಕಂಗೊಳಿಸಿದ್ದು, ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಇದನ್ನೂ ಓದಿ:ಕೇರಳದ ಹೇಮಾ ಸಮಿತಿಯಂತೆ ಕನ್ನಡದಲ್ಲೂ ಕಮಿಟಿ ರಚನೆಗೆ ಮನವಿ: ನಟ ರಕ್ಷಿತ್ ಶೆಟ್ಟಿಗೆ ವಿಷಯ ಗೊತ್ತಿಲ್ವೇ? - Rakshit Shetty
ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಗೋಲ್ಡನ್ ಥ್ರೆಡ್ ವರ್ಕ್‌ನಿಂದ ಅಲಂಕರಿಸಲ್ಪಟ್ಟ ಹಸಿರು ರೇಷ್ಮೆ ಸೀರೆ ಧರಿಸಿದ್ದರು. ಸರಳ ಕಿವಿಯೋಲೆಗಳನ್ನು ತೊಟ್ಟಿದ್ದರು. ತಮ್ಮ ಸೀರೆಯ ಪಲ್ಲುವಿನಿಂದ ಬೇಬಿ ಬಂಪ್ ಮರೆ ಮಾಡಿದ್ದರು. ಸಂಪೂರ್ಣ ನೋಟ ಬಹಳ ಸೊಗಸಾಗಿತ್ತು. ಮತ್ತೊಂದೆಡೆ, ಪತಿ - ನಟ ರಣ್ವೀರ್ ಸಿಂಗ್ ಆಫ್-ವೈಟ್ ಕುರ್ತಾದಲ್ಲಿ ಟ್ರೆಡಿಶನಲ್ ಲುಕ್ ಕೊಟ್ರು. ದೇವಸ್ಥಾನ ಭೇಟಿಯ ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.