ಕರ್ನಾಟಕ

karnataka

ETV Bharat / entertainment

ದರ್ಶನ್​​ ಫ್ಯಾನ್ಸ್​ಗೆ ಗುಡ್​ ನ್ಯೂಸ್: ರೀ ರಿಲೀಸ್​ ಆಗಲಿದೆ ಸೂಪರ್ ಹಿಟ್ 'ನವಗ್ರಹ' ಸಿನಿಮಾ​ - NAVAGRAHA RE RELEASING

ದರ್ಶನ್​​ ಸೇರಿದಂತೆ ಬಹುತಾರಾಗಣದ 2008ರ 'ನವಗ್ರಹ' ಸಿನಿಮಾ ಮರು ಬಿಡುಗಡೆ ಆಗಲು ಸಜ್ಜಾಗಿದೆ.

Actor Darshan
ನಟ ದರ್ಶನ್ (Photo source: ETV Bharat)

By ETV Bharat Entertainment Team

Published : Oct 11, 2024, 2:09 PM IST

'ನವಗ್ರಹ' ಕನ್ನಡ ಚಿತ್ರರಂಗದ ಸೂಪರ್ ಹಿಟ್​ ಸಿನಿಮಾ. 2008ರಲ್ಲಿ ತೆರೆಕಂಡ ನಟ ದರ್ಶನ್​​ ಮುಖ್ಯಭೂಮಿಕೆಯ ಈ ಚಿತ್ರ ಸೂಪರ್ ಹಿಟ್​ ಆಗಿತ್ತು. ಬಹುತಾರಾಗಣದ ಈ ಚಿತ್ರ 'ಅಂಬಾರಿ' ಕಳ್ಳತನಕ್ಕೆ ಪ್ರಯತ್ನಿಸುವ ಕಥೆಯನ್ನು ಒಳಗೊಂಡಿತ್ತು. ಮೈಸೂರು ದಸರಾ, ಅಂಬಾರಿ, ಸಾಂಸ್ಕೃತಿಕ ಅಂಶಗಳನ್ನೊಳಗೊಂಡ ಈ ಚಿತ್ರ ಮರು ಬಿಡುಗಡೆ ಆಗುತ್ತಿದೆ. ದಸರಾ ಹೊತ್ತಿನಲ್ಲೇ ನಿರ್ದೇಶಕರು ಶುಭ ಸುದ್ದಿ ಹಂಚಿಕೊಂಡಿದ್ದಾರೆ.

ಹೌದು, ದಿನಕರ್​ ತೂಗುದೀಪ ಆ್ಯಕ್ಷನ್​ ಕಟ್​​ ಹೇಳಿದ್ದ ಸಿನಿಮಾ ಶೀಘ್ರದಲ್ಲೇ ಮರು ಬಿಡುಗಡೆ ಆಗುತ್ತಿದೆ. ಈ ವಿಷಯವನ್ನು ದಿನಕರ್​ ತೂಗುದೀಪ ಅವರೇ ಸೋಷಿಯಲ್​ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ವಿಷಯ ತಿಳಿದ ಡಿ ಬಾಸ್​ ಫ್ಯಾನ್ಸ್ ಸಂತಸಗೊಂಡಿದ್ದಾರೆ.

ದಿನಕರ್​ ತೂಗುದೀಪ ಪೋಸ್ಟ್: ''ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ನಮ್ಮ ನಲ್ಮೆಯ ಸೆಲೆಬ್ರಿಟಿಗಳಿಂದ ಪ್ರೀತಿಯ ಕೋರಿಕೆಯ ಮೇರೆಗೆ ಸೆಲೆಬ್ರಿಟಿಗಳಿಗಾಗಿ ಸೆಲೆಬ್ರಿಟಿಗಳಿಗೋಸ್ಕರ , ನೀವು ನೋಡಿ ಮೆಚ್ಚಿ ಹಾರೈಸಿದ 'ನವಗ್ರಹ' ಮತ್ತೆ ಮರುಬಿಡುಗಡೆಗೆ ಸಿದ್ಧವಾಗಿದೆ. ನಿಮ್ಮ ಪ್ರೀತಿ-ಬೆಂಬಲ ಸದಾ ಕನ್ನಡ ಚಿತ್ರರಂಗದ ಮೇಲಿರಲಿ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಬಿಗ್​ ಬಾಸ್​ ಮನೆ ಧ್ವಂಸ: ಸ್ಪರ್ಧಿಗಳ ತಪ್ಪೇನು? ಈ ನಿರ್ಧಾರಕ್ಕೆ ಕಾರಣವಾದ್ರೂ ಏನು?

ದಿನಕರ್​ ತೂಗುದೀಪ ನಿರ್ದೇಶನಸ ಚಿತ್ರವನ್ನು ಎವಿ ಚಿಂತನ್​ ಬರೆದಿದ್ದರು. ಡೈಲಾಗ್ಸ್ ಅನ್ನೂ ಒದಗಿಸಿದ್ದರು. ಕಥೆ ದಿನಕರ್​ ತೂಗುದೀಪ ಮತ್ತು ಚಿಂತನ್​ ಸೇರಿ ರಚಿಸಿದ್ದರು. ಕಥೆ ರಚಿಸಿ, ಆ್ಯಕ್ಷನ್​ ಕಟ್​​ ಹೇಳಿದ್ದ ದಿನಕರ್ ಅವರೇ ಚಿತ್ರಕಥೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದರು. ದಿನಕರ್​ ಮತ್ತು ದರ್ಶನ್​ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್​ ನಿರ್ಮಾಣದ ಈ ಚಿತ್ರದಲ್ಲಿ ದರ್ಶನ್​​, ಶರ್ಮಿಳಾ ಮಾಂಡ್ರೆ, ತರುಣ್​ ಸುಧೀರ್​​, ಧರ್ಮ ಕೀರ್ತಿರಾಜ್​​, ಸೃಜನ್​ ಲೋಕೇಶ್​​ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದರು.

ಎ.ವಿ ಕೃಷ್ಣಕುಮಾರ್​ ಕ್ಯಾಮರಾ ಕೈಳಚಕವಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಒದಗಿಸಿದ್ದರು. ಟಿ ಶಶಿಕುಮಾರ್​ ಸಂಕಲನದ ಹೊಣೆ ಹೊತ್ತಿದ್ದರು. ತೂಗುದೀಪ ಪ್ರೊಡಕ್ಷನ್ಸ್ ಅಡಿ ನಿರ್ಮಾಣಗೊಂಡ ಈ ಚಿತ್ರ 2008ರ ನವೆಂಬರ್​​ 7ರಂದು ಚಿತ್ರಮಂದಿರ ಪ್ರವೇಶಿಸಿ ಯಶಸ್ವಿಯಾಗಿತ್ತು.

ಇದನ್ನೂ ಓದಿ:'ನೀವು ನನ್ನ ಹೃದಯದಲ್ಲಿದ್ದೀರಿ': ಅಭಿಮಾನಿಗಳಿಗೆ ಸಿಗ್ನಲ್​ ಕೊಟ್ಟ ದರ್ಶನ್​​: ನಟನನ್ನು​​ ಭೇಟಿಯಾದ ಹರಿಕೃಷ್ಣ, ಶೈಲಜಾನಾಗ್

ಇನ್ನೂ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ದರ್ಶನ್ ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿದ್ದು, ಸೋಮವಾರ ಬೇಲ್ ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿನ್ನೆ ಪೂರ್ಣಗೊಂಡಿದ್ದು, ಅಂತಿಮ ಆದೇಶ ಅಕ್ಟೋಬರ್​ 14ರಂದು ಹೊರಬೀಳಲಿದೆ. ಕಳೆದ ದಿನ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್​ ನಟನನ್ನು ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದರು. ಹೈ ಸೆಕ್ಯೂರಿಟಿ ಸೆಲ್​ನಿಂದ ವಿಸಿಟರ್​ ಕೊಠಡಿಗೆ ತೆರಳುವ ವೇಳೆ ನಟನನ್ನು ಕಂಡ ಅಭಿಮಾನಿಗಳು ''ಡಿ ಬಾಸ್'' ಎಂದು ಘೋಷಣೆ ಕೂಗಿದರು. ಜೈಲಿನ ಹೊರಗೆ ಅಭಿಮಾನಿಗಳನ್ನು ಕಂಡ ನಟ, ಎದೆ ಮುಟ್ಟಿ, ಸ್ಮೈಲ್ ​ಕೊಟ್ಟರು. ನೀವು ನನ್ನ ಹೃದಯದಲ್ಲಿದ್ದೀರಿ ಎಂಬಂತೆ ಸಿಗ್ನಲ್​ ಕೊಟ್ಟರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿದ್ದು, ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ABOUT THE AUTHOR

...view details