ಕರ್ನಾಟಕ

karnataka

ETV Bharat / entertainment

ನಟರಾಕ್ಷಸ ಡಾಲಿ ಧನಂಜಯ್ ನಿರ್ಮಾಣದ 'JC' ಮೇಕಿಂಗ್ ವಿಡಿಯೋ ರಿಲೀಸ್ - JC MAKING VIDEO

'ಡಾಲಿ ಪಿಕ್ಚರ್ಸ್' ನಿರ್ಮಾಣದ 5ನೇ ಸಿನಿಮಾ 'ಜೆಸಿ' ತಂಡ ಮೇಕಿಂಗ್​ ವಿಡಿಯೋ ಅನಾವರಣಗೊಳಿಸಿದೆ.

daali dhananjay
ನಟರಾಕ್ಷಸ ಡಾಲಿ ಧನಂಜಯ್ (Photo source: ETV Bharat)

By ETV Bharat Entertainment Team

Published : Oct 12, 2024, 1:43 PM IST

ಸ್ಯಾಂಡಲ್​ವುಡ್​ನ ನಟರಾಕ್ಷಸ ಡಾಲಿ ಧನಂಜಯ್​​​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಅಮೋಘ ಅಭಿನಯದಿಂದ ನಟರಾಕ್ಷಸ ಎಂಬ ಹೆಸರು ಸಂಪಾದಿಸಿರುವ ಇವರು ಈಗಾಗಲೇ ಹಲವು ಚಿತ್ರಗಳನ್ನು ಘೋಷಿಸಿದ್ದಾರೆ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವ ಡಾಲಿಯ ಮುಂದಿನ ಚಿತ್ರ 'JC'.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಡಾಲಿ ಧನಂಜಯ್​ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್'. ಈ ಸಂಸ್ಥೆಯು ಹೊಸ ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ನೀಡುತ್ತಾ ಬಂದಿದೆ. ಈವರೆಗೆ ಬಂದ ಸಿನಿಮಾಗಳನ್ನು ಗಮನಿಸಿದರೆ, ಹೊಸಬರೇ ಕಾಣಿಸಿಕೊಳ್ಳೋದು. ಚಿತ್ರರಂಗದಲ್ಲಿ ದುಡಿಯಬೇಕೆಂಬ ಆಸೆ ಹೊತ್ತು ಬರುವವರಿಗೆ ಮತ್ತು ಬಣ್ಣದ ಲೋಕದಲ್ಲಿ ಬೆಳೆಯುತ್ತಿರುವವರಿಗೆ 'ಡಾಲಿ ಪಿಕ್ಚರ್ಸ್' ಅವಕಾಶ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಹೆಸರು ಹೊಂದಿದೆ.

ಈ ವರ್ಷಅರಂಭ 'ಡಾಲಿ ಪಿಕ್ಚರ್ಸ್' ನಿರ್ಮಾಣದ 5ನೇ ಸಿನಿಮಾ ಸೆಟ್ಟೇರಿತು. 'ಜೆಸಿ' ಎಂಬ ವಿಭಿನ್ನ ಶೀರ್ಷಿಕೆ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. 'ದಿ ಯೂನಿವರ್ಸಿಟಿ' ಎಂಬ ಟ್ಯಾಗ್​ಲೈನ್​ ಕೂಡಾ ಇದ್ದು, ಕಥೆ ಏನಿರಬಹುದು ಎಂಬ ಕುತೂಹಲ ಕೆರಳಿದೆ. 'ನಡುವೆ ಅಂತರವಿರಲಿ' ಸಿನಿಮಾ ಖ್ಯಾತಿಯ ಪ್ರಖ್ಯಾತ್ ಮುಖ್ಯಭೂಮಿಕೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಮುಹೂರ್ತ ಸಮಾರಂಭ ನೆರವೇರಿಸಿಕೊಂಡಿದ್ದ ಚಿತ್ರತಂಡ ಇದೀಗ ಮೇಕಿಂಗ್​ ವಿಡಿಯೋ ಅನಾವರಣಗೊಳಿಸಿದೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡ ಡಾಲಿ ಧನಂಜಯ್​, "ಜೆಸಿ ಚಿತ್ರತಂಡದ ವತಿಯಿಂದ ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಸಿನಿಮಾದ ಮೇಕಿಂಗ್​ ವಿಡಿಯೋ ಅನಾವರಣಗೊಳಿಸಿದ್ದಾರೆ.

ವಿಡಿಯೋದಲ್ಲಿ ಶೂಟಿಂಗ್​ ಸೆಟ್​, ತಂಡ, ನಟನೆ, ವಿಶೇಷವಾಗಿ ಆ್ಯಕ್ಷನ್​ ಸೀನ್​ಗಳನ್ನು ಕಾಣಬಹುದು. ಅಲ್ಲದೇ ಶೂಟಿಂಗ್​ ಸ್ಪಾಟ್​ಗೆ ನಿರ್ಮಾಪಕ ಡಾಲಿ ಧನಂಜಯ್​ ಆಗಮನಿಸಿ ಎಲ್ಲವನ್ನೂ ಗಮನಿಸುತ್ತಿರುವ ದೃಶ್ಯಗಳೂ ಸಹ ಇದರಲ್ಲಿವೆ. ವಿಡಿಯೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಜೆ.ಸಿ ಎಂದರೆ ಜುಡಿಶಿಯಲ್ ಕಸ್ಟಡಿ ಎಂದರ್ಥ. ಜೈಲಿನಿಂದ ಹೊರ ಬಂದ ಯುವಕನ ಕಥೆ ಇದು ಎಂಬ ಮಾಹಿತಿ ಇದೆ. ಚೇತನ್ ಎಂಬುವವರು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇವರಿಗೂ ಇದು ಚೊಚ್ಚಲ ಚಿತ್ರ.

ಇದನ್ನೂ ಓದಿ:2ನೇ ಮಗು ಹೊಂದುವ ಆಸೆ ವ್ಯಕ್ತಪಡಿಸಿದ ಆಲಿಯಾ ಭಟ್​: ಮಗಳು ರಾಹಾಗೆ 'ರಾಲಿಯಾ' ದಂಪತಿ ತೋರಿಸಲಿರುವ ಮೊದಲ ಸಿನಿಮಾಗಳಿವು

ಈಗಾಗಲೇ ಅನಾವರಣಗೊಂಡಿರುವ ಜೆಸಿ ಫಸ್ಟ್ ಲುಕ್​ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಿದ್ರಿ. ಸದ್ಯ ಮೇಕಿಂಗ್​ ವಿಡಿಯೋ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಬಹುನಿರೀಕ್ಷಿತ ಚಿತ್ರಕ್ಕೆ ಮಾಸ್ತಿ ಡೈಲಾಗ್ ಒದಗಿಸಿದ್ದಾರೆ. ಕಾರ್ತಿಕ್ ಕ್ಯಾಮರಾ ಕೈಚಳಕ, ರೋಹಿತ್ ಸೋವರ್ ಅವರ ಸಂಗೀತ ಈ ಸಿನಿಮಾಗಿದೆ.

ಇದನ್ನೂ ಓದಿ:ಸ್ವರ್ಗ ನರಕ ಒಂದಾಯ್ತು: ಶಿಶಿರ್​ ಬಿಗ್​ ಬಾಸ್​​ನ​ ಹೊಸ ಕ್ಯಾಪ್ಟನ್​: ಕಿಚ್ಚನ ಪಂಚಾಯ್ತಿಯಲ್ಲಿಂದು ಹೈ ಡ್ರಾಮಾ?

2018ರಲ್ಲಿ 'ನಡುವೆ ಅಂತವಿರಲಿ' ಶೀರ್ಷಿಕೆಯ ಚಿತ್ರದ ಮೂಲಕ ಪ್ರಖ್ಯಾತ್ ಚಿತ್ರರಂಗ ಪ್ರವೇಶಿಸಿದರು. ಅವರು ಬಣ್ಣ ಹಚ್ಚುತ್ತಿರುವ 2ನೇ ಚಿತ್ರವಿದು. ಸರಿ ಸುಮಾರು 5 ವರ್ಷಗಳ ಬಳಿಕ ಪ್ರಖ್ಯಾತ್ ನಟಿಸುತ್ತಿರುವ ಸಿನಿಮಾ ಹಿನ್ನೆಲೆ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details