ETV Bharat / state

ಅಂಗವೈಕಲ್ಯ ಎಂದು ಕೈಕಟ್ಟಿ ಕೂರದ ಮಹಿಳೆ; ಸ್ವಾವಲಂಬಿ ಜೀವನಕ್ಕೆ ಸ್ಫೂರ್ತಿ ಕೊಪ್ಪಳದ ಜಯಶ್ರೀ - LIFE STORY OF JAYASHREE

ಅನಿರೀಕ್ಷಿತವಾಗಿ ಎದುರಾದ ಸಂಕಷ್ಟಗಳನ್ನು ಧೈರ್ಯವಾಗಿ ಎದುರಿಸಿ, ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದಾರೆ ವಿಶೇಷಚೇತನ ಮಹಿಳೆ ಕೊಪ್ಪಳದ ಜಯಶ್ರೀ ಗುಳಗಣ್ಣವರ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ಜಗದೀಶ್ ಚೆಟ್ಟಿ ಅವರು ಮಾಡಿರುವ ವಿಶೇಷ ವರದಿ ಇಲ್ಲಿದೆ..

PHYSICALLY CHALLENGED JAYASHREE
ವಿಶೇಷಚೇತನೆ ಜಯಶ್ರೀ ಗುಳಗಣ್ಣವರ (ETV Bharat)
author img

By ETV Bharat Karnataka Team

Published : 11 hours ago

ಕೊಪ್ಪಳ: ಮನುಷ್ಯನ ಬದುಕೇ ಹಲವು ತಿರುವುಗಳು, ಏರುಪೇರುಗಳ ಪ್ರಯಾಣ. ಕೆಲವೊಮ್ಮೆ ಆ ಏರುಪೇರುಗಳು, ತಿರುವುಗಳು ಜೀವನವನ್ನೇ ಬದಲಾಯಿಸಬಹುದು. ಹೀಗೆ ಜೀವನದಲ್ಲಿ ಎದುರಾದ ತಿರುವುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಬದುಕು ಕಟ್ಟಿಕೊಂಡವರು, ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ, ಸ್ಫೂರ್ತಿಯಾಗುತ್ತಾರೆ ಅನ್ನೋದಕ್ಕೆ ಈ ದಿಟ್ಟ ಮಹಿಳೆ ಸಾಕ್ಷಿ ಆಗುತ್ತಾರೆ.

ಹೌದು, ಜೀವನದಲ್ಲಿ ಎದುರಾದ ಸಂಕಷ್ಟಗಳಿಗೆ ಕುಗ್ಗದೆ ಧೈರ್ಯದಿಂದ ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಸಾಹಸಿ ಮಹಿಳೆಯ ಕಥೆ ಇದು. ಈ ನೈಜ ಕಥೆಯ ನಾಯಕಿಯ ಹೆಸರು ಜಯಶ್ರೀ ಗುಳಗಣ್ಣವರ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿ ಗ್ರಾಮದ ಜಯಶ್ರೀ ಗುಳಗಣ್ಣವರ ಅವರ ಗತಕಾಲದ ಬದುಕಿನ ಘಟನೆಗಳನ್ನು ಕೇಳಿದರೆ ಕಣ್ಣಾಲೆಗಳು ತುಂಬುತ್ತವೆ. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ಈಗ ತನ್ನ ಬದುಕನ್ನು ಕಟ್ಟಿಕೊಂಡಿರುವುದರ ಜೊತೆಗೆ ಮತ್ತಿಬ್ಬರು ಮಹಿಳೆಯರ ದುಡಿಮೆ ನೀಡಿ ದಾರಿ ದೀಪವಾಗಿದ್ದಾರೆ ಇವರು.

ಸ್ವಾವಲಂಬಿ ಜೀವನಕ್ಕೆ ಸ್ಫೂರ್ತಿ ಕೊಪ್ಪಳದ ಜಯಶ್ರೀ ಗುಳಗಣ್ಣವರ (ETV Bharat)

ಹೀಗಾಗಿತ್ತು ಜಯಶ್ರೀ ಬದುಕು: ಜಯಶ್ರೀ ಗುಳಗಣ್ಣವರ ಅವರು ಎಂಎಸ್‌ಡಬ್ಲ್ಯೂ ಪದವೀಧರೆ. ಎಲ್ಲ ಮಹಿಳೆಯರಂತೆ ಜಯಶ್ರೀ ಗುಳಗಣ್ಣವರ ಕೂಡ ಬದುಕಿನ ಬಗ್ಗೆ ಬಣ್ಣಬಣ್ಣದ ಕನಸು ಹೊತ್ತುಕೊಂಡು ಮದುವೆಯಾಗಿದ್ದರು. ಮದುವೆಯ ಬಳಿಕ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಜಯಶ್ರೀ ಬದುಕಿನಲ್ಲಿ ಸಂಕಷ್ಟ ಎದುರಾಯಿತು. ಅನಸ್ತೇಷಿಯಾ ಅವರ ದೇಹದ ಮೇಲೆ ಅಡ್ಡ ಪರಿಣಾಮ ಬೀರಿತ್ತು. ಮೊದಲು ದೈಹಿಕವಾಗಿ ಚೆನ್ನಾಗಿದ್ದ ಜಯಶ್ರೀ ಅನಸ್ತೇಷಿಯಾ ಪರಿಣಾಮದಿಂದ ದೈಹಿಕವಾಗಿ ಊನಗೊಂಡರು.

Jayashree Gulagannavara engaged in making roti
ರೊಟ್ಟಿ ತಯಾರಿಕೆಯಲ್ಲಿ ತೊಡಗಿರುವ ಜಯಶ್ರೀ ಗುಳಗಣ್ಣವರ (ETV Bharat)

ವಿಶೇಷಚೇತನರಾಗಿ ಮತ್ತೊಬ್ಬರ ಆಸರೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅತ್ತ ಪತಿಯೂ ವಿಚ್ಛೇದನ ನೀಡಿ, ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಾನೆ. ಇತ್ತ ತಂದೆ ತಾಯಿಯೂ ಇಲ್ಲದೆ ಜಯಶ್ರೀ ಜೀವನ ಒಬ್ಬಂಟಿ ಬದುಕಾಯಿತು. ತನಗೆ ಎದುರಾದ ಈ ಸಂಕಷ್ಟಗಳನ್ನು ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆ ಅವರಿಗೆ ಎದುರಾಯ್ತು.

PHYSICALLY CHALLENGED JAYASHREE
ವಿಶೇಷಚೇತನೆ ಜಯಶ್ರೀ ಗುಳಗಣ್ಣವರ (ETV Bharat)

ಬದುಕು ಜಯಿಸಿದ ಜಯಶ್ರೀ: ಆರಂಭದಲ್ಲಿ ಒಬ್ಬಂಟಿ ಜೀವನ ಕಷ್ಟವಾಗಿತ್ತು. ಆದರೆ ಬದುಕಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ, ಮೊದಲು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ನಿರ್ಧರಿಸಿ ಮತ್ತೆ ವಾಪಸ್ ತವರು ಮನೆ ಇಟಗಿಗೆ ಬಂದರು. ಸ್ಯಾಲ್ಕೋ ಸಂಸ್ಥೆಯವರ ನೆರವನ್ನು ಪಡೆದುಕೊಂಡು ದುಡಿಯಲು ಆರಂಭಿಸಿದರು. ಸ್ಯಾಲ್ಕೋ ಸಂಸ್ಥೆಯವರು ನೀಡಿದ ರೊಟ್ಟಿ ಮಾಡುವ ಮಶಿನ್​ನಿಂದ ರೊಟ್ಟಿ ತಯಾರಿಸುವುದನ್ನು ಕಲಿತರು.

ಸ್ವಉದ್ಯೋಗ ಆರಂಭಿಸಿರುವ ಜಯಶ್ರೀ ಈಗ ಇಬ್ಬರು ಮಹಿಳೆಯರಿಗೆ ಕೆಲಸ ನೀಡಿದ್ದಾರೆ. ಪ್ರತಿ ದಿನವೂ ಸುಮಾರು 500 ರೊಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಐದು ರೂಪಾಯಿಗೆ ಒಂದು ರೊಟ್ಟಿಯಂತೆ ಮಾರಾಟ ಮಾಡುತ್ತಾರೆ. 500 ರೊಟ್ಟಿಗೆ 2500 ರುಪಾಯಿ ಆಗುತ್ತದೆ. ಅದರಲ್ಲಿ 500 ರೊಟ್ಟಿ ಮಾಡಲು ಬೇಕಾದ ಪದಾರ್ಥಗಳ ಖರ್ಚು ಹಾಗೂ ಮಹಿಳೆಯರ ಕೂಲಿ ತೆಗೆದು ಉಳಿದದ್ದನ್ನು ತಮ್ಮ ಆದಾಯವನ್ನಾಗಿಸಿಕೊಂಡು ಜಯಶ್ರೀ ಬದುಕು ಕಟ್ಟಿಕೊಂಡಿದ್ದಾರೆ.

ಇತರರಿಗೆ ಸ್ಫೂರ್ತಿಯಾದ ಜಯಶ್ರೀ: ಬದುಕಿನಲ್ಲಿ ಎದುರಾಗುವ ಏರುಪೇರುಗಳಿಂದ ಅಧೈರ್ಯಕ್ಕೆ ಒಳಗಾಗುವ ಅನೇಕರಿಗೆ ಜಯಶ್ರೀ ಗುಳಗಣ್ಣವರ ಸ್ಫೂರ್ತಿಯಾಗಿದ್ದಾರೆ. ಬದುಕಿನಲ್ಲಿ ಏರುಪೇರುಗಳು ಸಹಜ. ಅವುಗಳನ್ನು ಮೆಟ್ಟಿನಿಲ್ಲುವ ಮೂಲಕ ಮತ್ತೆ ಬದುಕಿನಲ್ಲಿ ಸಂತಸ ಕಾಣಬಹುದು ಎಂಬುದಕ್ಕೆ ಜಯಶ್ರೀ ಗುಳಗಣ್ಣವರ ಅವರು ಬದುಕೇ ಉದಾಹರಣೆ. ಆದರೆ ಅದಕ್ಕೆ ಧೈರ್ಯಗೆಡದೆ ಸಂಕಷ್ಟ, ಸವಾಲುಗಳನ್ನು ಎದುರಿಸುವ ಗಟ್ಟಿ ಮನಸು ಮಾಡಬೇಕು ಎನ್ನುತ್ತಾರೆ ಜಯಶ್ರೀ.

ಇದನ್ನೂ ಓದಿ: ಅಂಗವೈಕಲ್ಯಕ್ಕೇ ಸವಾಲು ಹಾಕಿದ; ಎರಡೂ ಕಾಲಿಲ್ಲದಿದ್ದರೂ ಆಟೋ ಓಡಿಸಿ ಬದುಕು ಕಟ್ಟಿಕೊಂಡ ದೀರ! - Inspiring story

ETV Bharat Logo

Copyright © 2024 Ushodaya Enterprises Pvt. Ltd., All Rights Reserved.