ಕರ್ನಾಟಕ

karnataka

ETV Bharat / entertainment

ಸಲ್ಮಾನ್ ಖಾನ್​ಗೆ ಮತ್ತೊಮ್ಮೆ ಕೊಲೆ ಬೆದರಿಕೆ: 2 ಕೋಟಿ ಕೊಡುವಂತೆ ಒತ್ತಾಯ!

ಹೆಸರಾಂತ ನಟ ಸಲ್ಮಾನ್​ ಖಾನ್​ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಬಂದಿದೆ.

Bollywood superstar Salman Khan
ನಟ ಸಲ್ಮಾನ್ ಖಾನ್ (Photo: IANS)

By ETV Bharat Entertainment Team

Published : 7 hours ago

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್‌ ಅವರಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ. ಕರೆ ಮಾಡಿದ ಅನಾಮಧೇಯ ವ್ಯಕ್ತಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಮುಂಬೈ ಪೊಲೀಸರು ತಿಳಿಸಿದ್ದಾರೆ.

ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಕೊಲ್ಲುವುದಾಗಿ ಜನಪ್ರಿಯ ನಟನಿಗೆ ಬೆದರಿಕೆ ಹಾಕಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ತಮ್ಮ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಮುಂಬೈನ ವರ್ಲಿ ಜಿಲ್ಲೆಯ ಅಧಿಕಾರಿಗಳು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ, ಈಗಾಗಲೇ ತನಿಖೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 25 ರಂದು ನೋಯ್ಡಾದಿಂದ ಕರೆ ಮಾಡಿದವರು ಸಲ್ಮಾನ್ ಖಾನ್ ಮತ್ತು ಅಕ್ಟೋಬರ್ 12 ರಂದು ಗುಂಡಿಕ್ಕಿ ಕೊಲ್ಲಲ್ಪಟ್ಟ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಪುತ್ರ ಜೀಶನ್ ಸಿದ್ದಿಕ್ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದ ಕೆಲವೇ ದಿನಗಳ ನಂತರ ಈ ಬೆದರಿಕೆ ಬಂದಿದೆ.

ಸಲ್ಮಾನ್ ಖಾನ್​​ ಮತ್ತು ಜೀಶನ್‌ ಸಿದ್ದಿಕ್​ ಅವರಿಗೆ ಜೀವ ಬೆದರಿಕೆ ಹಾಕಿದ್ದ 20 ವರ್ಷದ ಯುವಕನನ್ನು ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಶಂಕಿತ ಕರೆಗೂ ಮುನ್ನ ಸಿದ್ದಿಕ್ ಅವರ ಸಹಾಯವಾಣಿ ಸಂಖ್ಯೆಯ ಮೂಲಕ ಬೆದರಿಕೆ ಸಂದೇಶ ನೀಡಿದ್ದನು. ಸಿದ್ದಿಕ್ ಮತ್ತು ಖಾನ್ ಇಬ್ಬರಿಗೂ ತೊಂದರೆ ಕೊಡಲಿರುವ ತನ್ನ ಉದ್ದೇಶವನ್ನು ತಿಳಿಸಿದ್ದನು.

ಪ್ರಕರಣ ದಾಖಲಿಸಿದ ನಂತರ, ನೋಯ್ಡಾದಲ್ಲಿ ಶಂಕಿತನನ್ನು ಪತ್ತೆಹಚ್ಚಲು ಪೊಲೀಸರು ಟೆಕ್ನಿಕಲ್​ ಎವಿಡೆನ್ಸ್​ ಅನ್ನು ಬಳಸಿದ್ದರು. ನಂತರ ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಮುಂಬೈಗೆ ಕರೆತರಲಾಗಿದೆ. ಬಾಂದ್ರಾ ಪೂರ್ವದಲ್ಲಿರುವ ಸಿದ್ದಿಕ್ ಅವರ ಪಬ್ಲಿಕ್​​ ರಿಲೇಶನ್ಸ್​ ಆಫೀಸ್​ಗೆ ಬೆದರಿಕೆ ಕರೆ ಮಾಡಲಾಗಿದೆ ಎಂದು ವರದಿ ಆಗಿದೆ. ಇದು ಬಾಲಿವುಡ್ ಸೂಪರ್‌ ಸ್ಟಾರ್ ಮತ್ತು ರಾಜಕಾರಣಿ ಇಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಬೈ ಕಾನೂನನ್ನು ಪ್ರೇರೇಪಿಸಿತು.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್​ಗೆ ಮಧ್ಯಂತರ ಜಾಮೀನು

ಸಲ್ಮಾನ್ ಖಾನ್ ಸೆಕ್ಯೂರಿಟಿ: ಬಾಲಿವುಡ್​​ ಸ್ಟಾರ್​ ಸಲ್ಮಾನ್ ಖಾನ್ ಅವರ ಆತ್ಮೀಯ ಸ್ನೇಹಿತ ಬಾಬಾ ಸಿದ್ದಿಕ್ ಹತ್ಯೆಯ ನಂತರ ನಟ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್​ನ ಗ್ಯಾಂಗ್ ಈ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದಾಗಿ ಸಲ್ಮಾನ್ ಖಾನ್‌ಗೆ ಇದೇ ಗ್ಯಾಂಗ್ ಬಹಳ ಸಮಯದಿಂದ ಬೆದರಿಕೆ ಹಾಕುತ್ತಾ ಬಂದಿದೆ. ಈ ಕೃಷ್ಣಮೃಗ ಪ್ರಾಣಿಯನ್ನು ಬಿಷ್ಣೋಯ್ ಸಮುದಾಯದವರು ದೇವರಾಗಿ ಕಾಣುತ್ತಾರೆ.

ಇದನ್ನೂ ಓದಿ:ಮೋಕ್ಷಿತಾ ಮದುವೆಯಾಗದ್ದು, ಮಂಜು ಹಾದಿ ತಪ್ಪಿದ್ದು, ಚೈತ್ರಾ ಮನೆಗೆಲಸ ಮಾಡಿದ್ದು; ಬಿಗ್​ ಬಾಸ್​ನಲ್ಲಿ ಕಣ್ಣೀರು

ಇನ್ನು ಬಾಬಾ ಸಿದ್ದಿಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details