ಕರ್ನಾಟಕ

karnataka

ETV Bharat / entertainment

'ಚೈತ್ರಾ ಜಾಗದಲ್ಲಿ ಗಂಡ್​​ಮಕ್ಕಳಿದ್ದಿದ್ರೆ...'! ಹನುಮಂತು ಹೇಳಿಕೆ: ಮತ್ತೊಮ್ಮೆ ಕೆರಳಿದ ಬಿಗ್​ ಬಾಸ್​; ಶಿಕ್ಷೆಯೇನು? - BIGG BOSS KANNADA 11

ಟಾಸ್ಕ್​ ನಡುವೆ ನಡೆಯುವ ಗಲಾಟೆಗಳು ಜೋರಾಗಿದ್ದು, ಬಿಗ್​​ ಬಾಸ್​ ಕ್ರಮ ಕೈಗೊಂಡಿದ್ದಾರೆ.

Bigg Boss contestant Hanumantu
ಬಿಗ್​ ಬಾಸ್ ಸ್ಪರ್ಧಿ ಹನುಮಂತು (Photo: Bigg Boss Team)

By ETV Bharat Entertainment Team

Published : Dec 18, 2024, 1:51 PM IST

ಬಿಗ್​ ಬಾಸ್​ ಕನ್ನಡ ಸೀಸನ್ 11 ಫಿನಾಲೆ ಸಮೀಪಿಸುತ್ತಿದ್ದು, ಸ್ಪರ್ಧಿಗಳ ಕಿರುಚಾಟ ಹೆಚ್ಚುತ್ತಲೇ ಇದೆ. ನಾಮಿನೇಷನ್​​, ಕಳಪೆ, ಅನರ್ಹ ಪಟ್ಟಕ್ಕೆ ಹೆಸರು ಸೂಚಿಸುವ ಸಂದರ್ಭದಿಂದ ಆರಂಭವಾಗುವ ಅಸಮಧಾನಗಳು ಟಾಸ್ಕ್​ನಲ್ಲೂ ವ್ಯಕ್ತವಾಗುತ್ತಿವೆ. ನಾಮಿನೇಷನ್​​ ಅನ್ನು ಆಧಾರವಾಗಿಟ್ಟುಕೊಂಡು ಬಿಗ್​ ಬಾಸ್​ ಟಾಸ್ಕ್​ಗಳನ್ನು ನೀಡುತ್ತಿರುವ ಹಿನ್ನೆಲೆ, ಪ್ರತೀ ಸ್ಪರ್ಧಿಗಳು ಗೆಲ್ಲುವ ಪಣ ತೊಟ್ಟಿದ್ದಾರೆ. ಹಾಗಾಗಿ, ಟಾಸ್ಕ್​ ನಡುವೆ ನಡೆಯುವ ಗಲಾಟೆಗಳು ಜೋರಾಗಿವೆ.

'ನಿಲ್ಲುತ್ತಿಲ್ಲ ಮನೆಯವರ ಜೋರು ಸದ್ದು, ಮತ್ತೊಮ್ಮೆ ಈಗ ಟಾಸ್ಕ್ ರದ್ದು!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಸ್ಪರ್ಧಿಗಳ ನಡುವೆ ಗಲಾಟೆ ಆಗಿರೋದನ್ನು ಕಾಣಬಹುದು. ಹೆಚ್ಚಾಗಿ ಗಲಾಟೆ ಮಾಡದ ಹನುಮಂತು ಮತ್ತು ಧನರಾಜ್​ ಕೂಡಾ ಆಕ್ರೋಶಗೊಂಡಿದ್ದಾರೆ. ಸ್ಪರ್ಧಿಗಳ ವರ್ತನೆಗೆ ಬಿಗ್​ ಬಾಸ್​ ಕೆರಳಿದ್ದು, ಆಟವನ್ನೇ ರದ್ದುಗೊಳಿಸಿದ್ದಾರೆ. ಮುಂದಿನ ಪರಿಣಾಮ ಏನು ಎಂಬ ಭಯದಲ್ಲಿ ಸ್ಪರ್ಧಿಗಳಿದ್ದಾರೆ.

ಇದನ್ನೂ ಓದಿ:ಸಂಜೆ ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್​ಕುಮಾರ್​​: ಡಿ.24ಕ್ಕೆ ಸರ್ಜರಿ

ಟಿವಿ ಮೇಲೆ ಬರುವ ಪದವನ್ನು ನೋಡಿ, ದಿಂಬು (ಪಿಲ್ಲೋ) ಹುಡುಕಬೇಕು. ಆ ದಿಂಬನ್ನು ತರಬೇಕು ಎಂದು ಬಿಗ್​ ಬಾಸ್​ ಟಾಸ್ಕ್​ ನೀಡಿದ್ದಾರೆ. ಚೈತ್ರಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಚೈತ್ರಾ ಸ್ಪರ್ಧಿಗಳ ತಪ್ಪುಗಳನ್ನು ತಿಳಿಸುತ್ತಿದ್ದಂತೆ ಮಾತಿಗೆ ಮಾತು ಬೆಳೆದಿದೆ. ಚೈತ್ರಾ ಮತ್ತು ಹನುಮಂತು ನಡುವೆ ಗಲಾಟೆ ಆಗಿದೆ. ಚೈತ್ರಾ ಜಾಗದಲ್ಲಿ ಗಂಡುಮಕ್ಕಳಿದ್ದಿದ್ರೆ ಕಥೆಯೇ ಬೇರೆ ಆಗುತ್ತಿತ್ತು ಎಂದು ತಿಳಿಸಿದ್ದಾರೆ. ಜೊತೆಗೆ ಧನರಾಜ್​ ಅವರೊಂದಿಗೂ ದೊಡ್ಡ ಗಲಾಟೆ ಆಗಿದೆ. ಸ್ಪರ್ಧಿಗಳ ವರ್ತನೆಗೆ ಕೆರಳಿದ ಬಿಗ್​ ಬಾಸ್​​ ಟಾಸ್ಕ್​ ಅನ್ನೇ ರದ್ದುಗೊಳಿಸಿದ್ದಾರೆ. ಜೊತೆಗೆ, ಇದಕ್ಕೆ ಪರಿಣಾಮವಾಗಿ.. ಎಂದು ಬಿಗ್​ ಬಾಸ್​ ಏನೋ ಮಹತ್ವದ ನಿರ್ಧಾರ ಕೈಗೊಂಡಂತಿದೆ.

ಇದನ್ನೂ ಓದಿ:'ಶ್..ಅಂದಿನಿಂದಲೂ ನನಗೆ ಉಪೇಂದ್ರ ಅಂದ್ರೆ ವಿಶೇಷ ಪ್ರೀತಿ': ಶಿವರಾಜ್​ಕುಮಾರ್​

ಆಟ ಬದಲಾಗುತ್ತಿದ್ದು, ಆಡುಗರ ವರ್ತನೆ ಕೂಡಾ ಬದಲಾಗುತ್ತಿದೆ. ಎಲ್ಲರಿಗೂ ಗೆಲ್ಲಬೇಕೆಂಬ ಹಠ ಜೋರಾಗೇ ಇದೆ. ಇತ್ತೀಚಿನ ದಿನಗಳಲ್ಲಿ ರಜತ್​ ಅವರು ಹೆಚ್ಚಾಗಿ ತಮ್ಮ ದನಿ ಏರಿಸುತ್ತಿದ್ದಾರೆ. ಹಾಗಾಗಿ ರಜತ್​​ ಜೊತೆಗಿನ ಗಲಾಟೆ ಕೂಡಾ ಹೆಚ್ಚೇ ಎನ್ನಬಹುದು. ಕಳೆದ ದಿನ, ಅವರನ್ನು ನಾಮಿನೇಟ್​ ಮಾಡಿರುವ ತ್ರಿವಿಕ್ರಮ್ ಅವರ ತಂಡ, ರಜತ್​​ ಎಲ್ಲರಿಗೂ ಇಂಡಿವಿಶ್ಯುವಲ್ ಆಗಿ ಆಡಿ ಎಂದು ಪ್ರವೋಕ್​ ಮಾಡುತ್ತಿದ್ದಾರೆ. ಅವರನ್ನು ಸುಪೀರಿಯರ್​ ಅಂದುಕೊಂಡಿದ್ದಾರೆ ಎಂದು ಕಾರಣಗಳನ್ನು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ರಜತ್​​, ಇಂಡಿವಿಶ್ಯುವಲ್​ ಆಗಿ ಆಡೋಕೆ ತಾಕತ್ ಇಲ್ವಾ?. ನಾನ್​ ಸುಪೀರಿಯರೇ, ನಾನ್​​ ಖರಾಬೇ, ನಾನ್​ ಮಸ್ತೇ. ನಾಮಿನೇಷನ್​ ಮಾಡಿ ಬಿಟ್ರೆ ಬದಲಾಗಿ ಬಿಡ್ತೀನಾ ನಾನು. ನಾನಿರೋದೇ ಹೀಗೆ ಎಂದಿದ್ದರು. ಅಲ್ಲದೇ ಗೌತಮಿ, ಮಂಜು, ಧನರಾಜ್​ ಮತ್ತು ಚೈತ್ರಾ ಬಳಿ ಕೂಡಾ ಗಲಾಟೆ ನಡೆದಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ABOUT THE AUTHOR

...view details