ಕನ್ನಡದ ಜನಪ್ರಿಯ ಕಾರ್ಯಕ್ರಮವಾಗಿರುವ 'ಬಿಗ್ ಬಾಸ್' ಆಟ ದಿನ ಕಳೆದಂತೆ ಮತ್ತಷ್ಟು ಕುತುಹಲಕಾರಿಯಾಗಿ ಮೂಡಿಬರುತ್ತಿದೆ. ಪ್ರೀತಿ, ಸ್ನೇಹ, ಕಾಳಜಿ ಜೊತೆ ಜೊತೆಗೆ ಕೋಪ, ಕಿರುಚಾಟ, ವಾದ, ವಿವಾದಗಳೂ ಮುಂದುವರಿದಿವೆ. ಈ ಬಾರಿ ಕಿರುಚಾಟ ಕೊಂಚ ಹೆಚ್ಚೇ ಇದೆ ಅನ್ನಬಹುದು. ಅದರಂತೆ ಇಂದಿನ ಸಂಚಿಕೆಯಲ್ಲೂ ವಾದ ವಿವಾದ ದೊಡ್ಡ ಮಟ್ಟದಲ್ಲೇ ನಡೆಯಲಿದೆ ಎಂಬ ಸುಳಿವನ್ನು ವಾಹಿನಿ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ.
ಕಲರ್ಸ್ ಕನ್ನಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ''ಟಾಸ್ಕ್ ಗೆದ್ದಾಗಿದೆ; ಈಗ ನಾಮಿನೇಷನ್‍ನಿಂದ ಸೇಫ್ ಆಗೋರು ಯಾರು?. ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30'' ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ದೃಶ್ಯದಲ್ಲಿ ಟಾಸ್ಕ್ ಆದ ಬಳಿಕ ಕ್ಯಾಪ್ಟನ್ ಕೊಟ್ಟ ತೀರ್ಪಿಗೆ ಸೋತ ಸ್ಪರ್ಧಿಗಳು ಅಸಮಾಧಾನ ಹೊರಹಾಕಿರುವುದನ್ನು ಕಾಣಬಹುದು.
ಅತಿ ಕಡಿಮೆ ಸಮಯದಲ್ಲಿ ಇಬ್ಬರನ್ನು ಗೆದ್ದ ತಂಡದ ಪೈಕಿ ಇಬ್ಬರನ್ನು ನಾಮಿನೇಶನ್ನಿಂದ ಪಾರು ಮಾಡಬಹುದು ಎಂದು ಎಂದು ಟಾಸ್ಕ್ ಒಂದನ್ನು ಬಿಗ್ ಬಾಸ್ ಕೊಟ್ಟಿದ್ದಾರೆ. ಈ ಟಾಸ್ಕ್ ಅನ್ನು ನರಕನಿವಾಸಿಗಳು ಗೆದ್ದಿದ್ದಾರೆ ಎಂದು ಕ್ಯಾಪ್ಟನ್ ಹಂಸ ಘೋಷಿಸಿದ್ದಾರೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ. 30 ಸೆಕೆಂಡ್ನಲ್ಲಿ ಸ್ವರ್ಗ ನಿವಾಸಿಗಳು ಆಟ ಮುಗಿಸಿದ್ದರೆ, 3 ನಿಮಿಷದಲ್ಲಿ ನರಕ ನಿವಾಸಿಗಳು ಆಟ ಪೂರ್ಣಗೊಳಿಸಿದ್ದಾರೆ. ಆದ್ರೆ ಸಂಪೂರ್ಣ ಆಟ ಗಮನಿಸಿ ಕ್ಯಾಪ್ಟನ್ ಹಂಸ ವಿಜೇತರನ್ನು ಘೋಷಿಸಿದ್ದಾರೆ. ಇದು ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಂಪೂರ್ಣ ಸಂಚಿಕೆ ಇಂದು ರಾತ್ರಿ 9:30ಕ್ಕೆ ಪ್ರಸಾರ ಆಗಲಿದೆ.