'ಭೈರತಿ ರಣಗಲ್', ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. 'ಘೋಸ್ಟ್' ಸಕ್ಸಸ್ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟಿಸುತ್ತಿರುವ ಹೈವೋಲ್ಟೇಜ್ ಚಿತ್ರ. ಪೋಸ್ಟರ್ನಿಂದಲೇ ಸ್ಯಾಂಡಲ್ವುಡ್ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಈ ಚಿತ್ರದಲ್ಲಿ ಶಿವಣ್ಣನ ಲುಕ್, ನಟನೆ ಹೇಗಿರಲಿದೆ ಎಂದು ಅಭಿಮಾನಿ ಬಳಗದಲ್ಲಿ ಕುತೂಹಲ ಹುಟ್ಟಿಕೊಂಡಿದೆ. ಇದರ ಬೆನ್ನಲೇ ಚಿತ್ರತಂಡ ಕಲರ್ಫುಲ್ ಮೇಕಿಂಗ್ ವಿಡಿಯೋವನ್ನು ಅನಾವರಣಗೊಳಿಸಿದೆ.
'ಮಫ್ತಿ' ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಭೈರತಿ ರಣಗಲ್ ಚಿತ್ರದ ಯಾವೊಂದು ವಿಷುವಲ್ ಅನ್ನು ಈವರೆಗೆ ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಇದೀಗ ಗೀತಾ ಶಿವರಾಜ್ಕುಮಾರ್ ಜನ್ಮದಿನದ ಹಿನ್ನೆಲೆ, ಚಿತ್ರತಂಡ ಭೈರತಿ ರಣಗಲ್ ಚಿತ್ರದ ಅದ್ಧೂರಿ ಮೇಕಿಂಗ್ನ ಆಕರ್ಷಕ ವಿಡಿಯೋ ಅನಾವರಣಗೊಳಿಸಿದೆ. ಈ ಮೇಕಿಂಗ್ನಲ್ಲಿ ಸಾವಿರಾರು ಸಹ ಕಲಾವಿದರು, ಹತ್ತಾರು ಶೂಟಿಂಗ್ ಲೊಕೇಶನ್ಗಳು, ಶಿವರಾಜ್ಕುಮಾರ್ ಅವರ ಎರಡು ಶೇಡ್ಸ್, ಜೊತೆಗೆ ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್ ಅವರನ್ನು ಕಾಣಬಹುದು. ಗೀತಾ ಅವರು ತಮ್ಮ ಗೀತಾ ಪಿಕ್ಚರ್ಸ್ ಅಡಿ ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಈ ಮೇಕಿಂಗೇ ಹೀಗಿದೆ. ಇನ್ನೂ, ಸಿನಿಮಾ ಹೆಂಗಿರಬಹುದು ಎಂದು ಕರುನಾಡ ಚಕ್ರವರ್ತಿಯ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ.