ಹೈದರಾಬಾದ್: ಮುಂದಿನ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕಗಳನ್ನು ಬ್ರಿಟಿಷ್ ಫಿಲ್ಮ್ ಅಂಡ್ ಟೆಲಿವಿಷನ್ ಅಸೋಸಿಯೇಷನ್ ಪ್ರಕಟಿಸಿದೆ. ವಿದೇಶಿ ದಿನಪತ್ರಿಕೆಯ ಪ್ರಕಾರ, ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2025ರ ಫೆಬ್ರವರಿ 16 ರಂದು ಭಾನುವಾರ ನಡೆಯಲಿದೆ. ಮತ್ತೊಂದೆಡೆ, ಕೇನ್ಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯ ಅಧಿಕೃತ ಪೋಸ್ಟರ್ ಅನ್ನು ಸಹ ಬಹಿರಂಗಪಡಿಸಲಾಗಿದೆ.
BAFTA ಕುರಿತು ತಿಳಿಯುವುದಾದರೆ, ಇದು 2025ರಲ್ಲಿ ಮಾರ್ಚ್ 2ರಂದು ನಡೆಯಲಿರುವ ಆಸ್ಕರ್ ಸಮಾರಂಭಕ್ಕೆ ನಿಖರವಾಗಿ ಎರಡು ವಾರಗಳ ಮೊದಲು ಜರುಗುತ್ತದೆ. ಬ್ರಿಟಿಷ್ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ಫೆಬ್ರವರಿ 13 ರಿಂದ ಫೆಬ್ರವರಿ 23 ರವರೆಗೆ ನಡೆಯುವ ಬರ್ಲಿನ್ ಚಲನಚಿತ್ರೋತ್ಸವದ ಮಧ್ಯದಲ್ಲಿ ನಡೆಯಲಿದೆ.
ಈ ವರ್ಷದ ಸಮಾರಂಭವು ಆಸ್ಕರ್‌ಗೆ ಮೂರು ವಾರಗಳ ಮುಂಚಿತವಾಗಿ ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ನಡೆಯಿತು. ಓಪನ್‌ಹೈಮರ್ ಚಿತ್ರವು ಆಸ್ಕರ್ ಪ್ರಶಸ್ತಿ ಗಳಿಸುವುದರ ಜೊತೆಗೆ 77ನೇ BAFTA ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
BAFTA ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲು ಮೂರು ಆಯ್ಕೆ ಪ್ರಕ್ರಿಯೆ ನಡೆಲಿದೆ. ಬ್ರಿಟಿಷ್ ಫಿಲ್ಮ್ ಮತ್ತು ಟೆಲಿವಿಷನ್ ಅಸೋಸಿಯೇಷನ್‌ನ ಸುಮಾರು 7,800 ವೃತ್ತಿಪರ ಸದಸ್ಯರು ಚಲನಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ನಂತರ ನಾಮನಿರ್ದೇಶನಗೊಂಡ ಚಿತ್ರಗಳ ಲಿಸ್ಟ್ ಅನ್ನು ಘೋಷಿಸುತ್ತಾರೆ. ನಂತರ ವಿಜೇತ ಚಿತ್ರಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಮುಂಬರುವ ವಾರಗಳಲ್ಲಿ BAFTA ತನ್ನ ಸಂಪೂರ್ಣ ವೇಳಾಪಟ್ಟಿ ಮತ್ತು 78ನೇ BAFTA ಪ್ರಶಸ್ತಿಗಳಿಗೆ ಅರ್ಹತೆಯ ನಿಯಮಗಳನ್ನು ಬಹಿರಂಗಪಡಿಸಲಿದೆ ಎಂದು ಹಾಲಿವುಡ್ ಟ್ಯಾಬ್ಲಾಯ್ಡ್ ಹೇಳಿದೆ.
ಏತನ್ಮಧ್ಯೆ, ಕೇನ್ಸ್ ಚಲನಚಿತ್ರೋತ್ಸವದ 77ನೇ ಆವೃತ್ತಿಯ ಅಧಿಕೃತ ಪೋಸ್ಟರ್ ಅನ್ನು ಇತ್ತೀಚೆಗೆ ಬಹಿರಂಗಪಡಿಸಲಾಯಿತು. ಪೋಸ್ಟರ್ 1991ರ ಕ್ಯಾನೆಸ್ ಔಟ್-ಆಫ್- ಕಾಂಪಿಟೇಷನ್, ಚಲನಚಿತ್ರ ರಾಪ್ಸೋಡಿ ಆಗಸ್ಟ್‌ನಲ್ಲಿನ ಒಂದು ಕ್ಷಣವನ್ನು ಬಿಚ್ಚಿಡುತ್ತದೆ. ಇದು ದಿವಂಗತ ಅಕಿರಾ ಕುರೊಸಾವಾ ನಿರ್ದೇಶಿಸಿದ ಜಪಾನಿನ ಚಿತ್ರವಾಗಿದೆ. ಈ ವರ್ಷದ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಳೆಯುತ್ತಿರುವ ಜಪಾನೀಸ್ ಥೀಮ್‌ಗೆ ಪೋಸ್ಟರ್ ಉತ್ತಮವಾಗಿ ಹೊಂದಿಕೊಳ್ಳುತ್ತದೆ.
ಈ ವಾರ, ಕೇನ್ಸ್ ಜಪಾನೀಸ್ ಅನಿಮೇಷನ್ ಸ್ಟುಡಿಯೋ ಸ್ಟುಡಿಯೋ ಘಿಬ್ಲಿ (ದಿ ಬಾಯ್ ಅಂಡ್ ದಿ ಹೆರಾನ್, ಸ್ಪಿರಿಟೆಡ್ ಅವೇ) ಹಾನನರಿ ಪಾಮ್ ಡಿ'ಓರ್ ಅನ್ನು ನೀಡುವುದಾಗಿ ಘೋಷಿಸಿತು. ಫ್ರೆಂಚ್ ಉತ್ಸವವು ವೈಯಕ್ತಿಕ ಕಲಾವಿದರಿಗಿಂತ ಕಂಪನಿಗೆ ತನ್ನ ಶ್ರೇಷ್ಠ ಗೌರವವನ್ನು ನೀಡಿರುವುದು ಇದೇ ಮೊದಲು.
ಇದನ್ನೂ ಓದಿ:KGF 2, ಬಾಹುಬಲಿ 2, RRR, ದಂಗಲ್ ಯಾವುದೂ ಅಲ್ಲವೇ ಅಲ್ಲ: ಹಾಗಾದರೆ 25 ಕೋಟಿ ಟಿಕೆಟ್ ಮಾರಾಟವಾದ ಚಿತ್ರ ಯಾವುದು ಗೊತ್ತಾ? - Most Tickets Sold Movie In India