ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್'ನಲ್ಲೀಗ ನಾಮಿನೇಷನ್ ಭರಾಟೆ ಜೋರಾಗಿದೆ. ಎದುರಾಳಿಯ ಕತ್ತಿಗಿಂತ ತಮ್ಮವರ ಮಾತುಗಳೇ ಇರಿದಂತೆ ಕಾಣುತ್ತಿದೆ. ಶಿಶಿರ್ 'ಹೆಣ್ಣುಮಕ್ಕಳ ಹಿಂದೆ ಬಿದ್ದಿರೋ ಜೊಲ್ಲ' ಎಂದು ಚೈತ್ರಾ ಹೇಳಿರುವುದಾಗಿ ತ್ರಿವಿಕ್ರಮ್ ತಿಳಿಸಿದ್ದಾರೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದ್ರೆ ತಮ್ಮ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ತ್ರಿವಿಕ್ರಮ್, ಚೈತ್ರಾ ವಿರುದ್ಧ ಶಿಶಿರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಕೊಂಚ ವಿಭಿನ್ನವಾಗಿ ನಡೆದಿದೆ. ಸ್ಪರ್ಧಿಗಳ ಬೆನ್ನಿಗೆ ಒಂದು ಬೆಂಡಿನ ಚೆಂಡಿನಾಕಾರದ ತುಂಡನ್ನು ಕಟ್ಟಲಾಗಿದೆ. ಅವರ ಈ ಬೆಂಡಿನ ಬೆನ್ನಿಗೆ ಚೂರಿ ಹಾಕಿ ನಾಮಿನೇಷನ್ ಮಾಡಬೇಕಿದೆ. ನಂತರ ತಮ್ಮ ನಾಮಿನೇಷನ್ಗೆ ಸೂಕ್ತ ಕಾರಣಗಳನ್ನೂ ಒದಗಿಸಬೇಕಿದೆ. ಕ್ಯಾಪ್ಟನ್ ಧನರಾಜ್ ಆಚಾರ್ ಅವರನ್ನು ಹೊರತುಪಡಿಸಿ ಉಳಿದವರು ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ನಾಮಿನೇಷನ್ ಭರಾಟೆ ಜೋರಾಗಿದ್ದು, ತ್ರಿವಿಕ್ರಮ್ ಮತ್ತು ಚೈತ್ರಾ ನಡುವೆ ಮಾತಿಗೆ ಮಾತು ಬೆಳೆದಿದೆ. ವಾಗ್ವಾದದ ಭರದಲ್ಲಿ ಮನೆಮಂದಿ ಬಗ್ಗೆ ಹಿಂದೆ ಮಾತನಾಡಿದ್ದನ್ನು ಇಬ್ಬರೂ ಎಲ್ಲರ ಸಮ್ಮುಖದಲ್ಲಿ ಹೇಳಿಬಿಟ್ಟಿದ್ದಾರೆ. ಹಾಗಾಗಿ, ಮನೆಯ ಮನಸ್ತಾಪವನ್ನು ಹೆಚ್ಚಿಸುವ ಎಲ್ಲಾ ಲಕ್ಷಣಗಳಿವೆ. ಇದರ ಸುಳಿವು, ''ಇರಿಯುತ್ತಿರೋದು ಎದುರಾಳಿಯ ಖತ್ತಿಯೋ? ತಮ್ಮವರ ಮಾತುಗಳೋ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಅನಾವರಣಗೊಂಡಿರುವ ಪ್ರೋಮೋದಲ್ಲಿ ಸಿಕ್ಕಿದೆ.
ಇದನ್ನೂ ಓದಿ:'ಪುಷ್ಪ 2' ಪ್ರಚಾರ: ಡಿ.8ರಂದು ಅಲ್ಲು ಅರ್ಜುನ್ ಬೆಂಗಳೂರಿಗೆ