ಹೆಚ್ಚಿನ ಸಂಖ್ಯೆಯ ಜನರು ಪ್ರೇಮಿಗಳ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸಹ ಇದರಿಂದ ಹೊರತಲ್ಲ.ತಮ್ಮ ಪ್ರೀತಿಪಾತ್ರರೊಂದಿಗಿನ ಪ್ರೀತಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾ ಸ್ಟಾರ್ ಅಲ್ಲು ಅರ್ಜುನ್ ಸಹ ಪ್ರೇಮಿಗಳ ದಿನಾಚರಣೆಯ ಒಂದು ನೋಟವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೊಂದು ಸ್ವೀಟ್ ಆ್ಯಂಡ್ ಸಿಂಪಲ್ ಸೆಲೆಬ್ರೇಶನ್. ಕಂಪ್ಲೀಟ್ ಫ್ಯಾಮಿಲಿ ಸೆಲೆಬ್ರೇಶನ್ ಎಂದೇ ಹೇಳಬಹುದು.
ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಫ್ಯಾಮಿಲಿ ಜೊತೆ ಕೇಕ್ ಕತ್ತರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ, ವೈಟ್ ಕೇಕ್. ರೆಡ್ ಹಾರ್ಟ್ ಸಿಂಬಲ್ಗಳಿವೆ. ಹ್ಯಾಪಿ ವ್ಯಾಲೆಂಟೈನ್ ಡೇ, ಐ ಲವ್ ಯೂ ಎಂದು ಬರೆಯಲಾಗಿದೆ. ಮತ್ತೊಂದು ಫೋಟೋದದಲ್ಲಿ, ಕೇಕ್ ಮೇಲೆ ಫೆಬ್ರವರಿ ತಿಂಗಳ ಕ್ಯಾಲೆಂಡರ್ ಇದ್ದು, '14' ಮೇಲೆ ಹಾರ್ಟ್ ಸಿಂಬಲ್ನಿಂದ ಮಾರ್ಕ್ ಮಾಡಲಾಗಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಕೂಡ ತಮ್ಮ ಮಕ್ಕಳನ್ನು ಒಳಗೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ಲವ್ ಸ್ಟೋರಿ 13 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅಲ್ಲು ಅರ್ಜುನ್ ವಿಷಯದಲ್ಲಿ ಇದು ಲವ್ ಅಟ್ ಫಸ್ಟ್ ಸೈಟ್. ದಶಕದ ಹಿಂದೆ ಅಮೆರಿಕದಲ್ಲಿ ಗೆಳೆಯರೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ ಸ್ನೇಹಾ ರೆಡ್ಡಿ ಅವರನ್ನು ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು. ಸದ್ಯ ಇಬ್ಬರು ಮುದ್ದಾದ ಮಕ್ಕಳ ಪೋಷಕರಿವರು.