ಫೆಬ್ರವರಿ 23, ಭಾನುವಾರದಂದು ದುಬೈನಲ್ಲಿ ನಡೆದ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದ ವೇಳೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ, ಸೋನಮ್ ಕಪೂರ್, ಸೌತ್ ಸೂಪರ್ ಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟೀಮ್ ಇಂಡಿಯಾವನ್ನು ಹುರಿದುಂಬಿಸಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮ್ಮ ಅದ್ಭುತ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಊರ್ವಶಿ ರೌಟೇಲಾ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಅವು ನೆಟ್ಟಿಗರನ್ನು ಬಹುವಾಗಿ ಸೆಳೆದಿದೆ.
ದುಬೈನಲ್ಲಿ ನಡೆದ ಹೈವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ಮ್ಯಾಚ್ನಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಕ್ರೀಡಾಂಗಣದಲ್ಲಿದ್ದ ಚೆಲುವೆ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಫೆಬ್ರವರಿ 25ರಂದು ನಟಿ 31ನೇ ವಸಂತಕ್ಕೆ ಕಾಲಿಡಲಿರುವ ನಟಿ ಎರಡು ದಿನಗಳ ಮುಂಚಿತವಾಗಿ, ಭಾನುವಾರದಂದು ಮ್ಯಾಚ್ ಸಂದರ್ಭ ತಮ್ಮ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ಅವರು ಸಿಬ್ಬಂದಿಯೊಂದಿಗೆ ಕೇಕ್ ಹಿಡಿದು ಕ್ಯಾಮರಾಗೆ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ಇದು ಅವರ ಅಭಿಮಾನಿ ಅಥವಾ ಸಿಬ್ಬಂದಿಯಿಂದ ಸಿಕ್ಕಿರುವ ಸರ್ಪೈಸ್ ಆಗಿದೆ.
ಕೇಕ್ ಹಿಡಿದು ಫೋಟೋ ವಿಡಿಯೋಗಳಿಗೆ ಪೋಸ್ ಕೊಟ್ಟಿರುವ ದೃಶ್ಯವನ್ನು ಹಂಚಿಕೊಂಡಿರುವ ಊರ್ವಶಿ ರೌಟೇಲಾ, ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟಿದ್ದಕ್ಕೆ ಧನ್ಯವಾದಗಳು (ರೆಡ್ ಹಾರ್ಟ್ ಎಮೋಜಿಯೊಂದಿಗೆ) ಎಂದು ಬರೆದುಕೊಂಡಿದ್ದಾರೆ.
ಬ್ಲಾಕ್ಬಸ್ಟರ್ ಹಿಟ್ ಪುಷ್ಪ ಡೈರೆಕ್ಟರ್ ಸುಕುಮಾರ್ ಅವರ ಜೊತೆಗಿರುವ ಸುಂದರ ಕ್ಷಣವನ್ನು ಹಂಚಿಕೊಂಡಿರುವ ನಟಿ, "ನಿಮ್ಮ ಎಲ್ಲ ಅದ್ಭುತ ಸಾಧನೆಗಳಿಗೆ ಅಭಿನಂದನೆಗಳು ಸುಕುಮಾರ್ ಗಾರು! ನಿಮ್ಮ ಪ್ರತಿಭೆ ಹಾಗೂ ಸಿನಿಮಾ ಮೇಲಿನ ಸಮರ್ಪಣೆ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ, ಅಪಾರ ಮೆಚ್ಚುಗೆ" ಎಂದು ಬರೆದುಕೊಂಡಿದ್ದಾರೆ.