ಯಲಹಂಕ(ಬೆಂಗಳೂರು): ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಪುರದಲ್ಲಿ ಭಾನುವಾರ ಸಂಜೆ ನಡೆದಿದೆ. ಆಂಧ್ರ ಪ್ರದೇಶದ ಸುಬ್ರಮಣಿ (23) ಕೊಲೆಯಾದವರು. ಯಲಹಂಕ ಉಪನಗರ ಪೊಲೀಸರು ಮುರಳೀಧರ್ ಸಿಂಗ್, ಗಣೇಶ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಬ್ರಮಣಿ ಕೆಲಸಕ್ಕೆಂದು ಆಂಧ್ರದಿಂದ ಯಲಹಂಕಕ್ಕೆ ಬಂದಿದ್ದರು. ನಿನ್ನೆ ಭಾನುವಾರವಾದ ಹಿನ್ನೆಲೆಯಲ್ಲಿ ಸ್ನೇಹಿತರೆಲ್ಲ ಒಂದೆಡೆ ಸೇರಿದ್ದರು. ಈ ವೇಳೆ ಗಲಾಟೆ ನಡೆದು ಸುಬ್ರಮಣಿ ಹತ್ಯೆಯಾಗಿದೆ.
ಆರೋಪಿಯೊಬ್ಬನ ಸಂಬಂಧಿ ಭವಾನಿ ಮಾತನಾಡಿ, "ತಮ್ಮ ಮಕ್ಕಳ ಮೇಲೆ ವಿನಾಃಕಾರಣ ಆರೋಪ ಹೊರಿಸಲಾಗಿದೆ. ಅವರು ಯಾವತ್ತೂ ಗಲಾಟೆಗೆ ಹೋದವರಲ್ಲ" ಎಂದು ಹೇಳಿದರು.
ಡ್ರಗ್ ಮಾರಾಟಕ್ಕೆ ಬಂದ ವಿದೇಶಿ ಪ್ರಜೆ ಹತ್ಯೆ, ಓರ್ವನ ಬಂಧನ(ಬೆಂಗಳೂರು): ಗ್ರಾಹಕರಿಗೆ ಮಾರಾಟ ಮಾಡುವ ಸಲುವಾಗಿ ಎಂಡಿಎಂಎ ಡ್ರಗ್ ಇಟ್ಟು, ಲೊಕೇಶನ್ ಕಳುಹಿಸಲು ಸ್ನೇಹಿತನೊಂದಿಗೆ ಕಾರಿನಲ್ಲಿ ಬಂದಿದ್ದ ವಿದೇಶಿ ಪ್ರಜೆಯನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದರು.
ನೈಜೀರಿಯಾ ಮೂಲದ ಅಡಿಯಾಕೋ ಮುಸಾಲಿಯೋ (40) ಹತ್ಯೆಯಾದ ವಿದೇಶಿ ಪ್ರಜೆ. ಯಾಸೀನ್ ಖಾನ್ ಬಂಧಿತ ಆರೋಪಿ. ಫೆಬ್ರವರಿ 19ರಂದು ಬಾಗಲೂರಿನ ಬೆಳ್ಳಳ್ಳಿ ಬಳಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮೃತನ ಬಳಿಯಿದ್ದ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಹತ್ಯೆ ಸಂಬಂಧ ನೈಜೀರಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಪ್ರಿಯಕರನ ಹತ್ಯೆಗೈದು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ; ಪತಿ ಸೇರಿ ಮೂವರು ಸೆರೆ
ಇದನ್ನೂ ಓದಿ: ಶಿರಸಿ: ಬಸ್ನಲ್ಲೇ ಚಾಕು ಇರಿದು ಯುವಕನ ಹತ್ಯೆಗೈದ ಪಾಗಲ್ ಪ್ರೇಮಿ