ಕರ್ನಾಟಕ

karnataka

ETV Bharat / entertainment

'ನಾಳೆ ಇದೆಯೆಂಬುದು ನಮಗೆ ಗೊತ್ತಿರಲ್ಲ': ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ - Rashmika Mandanna Emotional Post - RASHMIKA MANDANNA EMOTIONAL POST

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಪಘಾತಕ್ಕೊಳಗಾಗಿ, ಕೆಲಸ ಮತ್ತು ಸೋಷಿಯಲ್ ಮೀಡಿಯಾದಿಂದ ವಿರಾಮ ತೆಗೆದುಕೊಂಡಿದ್ದರು. ಇದೀಗ ಚೇತರಿಸಿಕೊಂಡಿದ್ದಾರೆ. ತಮ್ಮ ಕೆಲಸ ಪುನರಾರಂಭಿಸಲು ಸಜ್ಜಾಗಿದ್ದಾರೆ.

Rashmika Mandanna
ನಟಿ ರಶ್ಮಿಕಾ ಮಂದಣ್ಣ (ETV Bharat)

By ETV Bharat Entertainment Team

Published : Sep 10, 2024, 1:25 PM IST

ಹೈದರಾಬಾದ್: ನ್ಯಾಷನಲ್​​ ಕ್ರಶ್​​ ಖ್ಯಾತಿಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾ ಪ್ರಾಜೆಕ್ಟ್‌ಗಳಿದ್ದು, ಸಖತ್​​​ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಚಿತ್ರಗಳಾದ ಪುಷ್ಪ 2, ಛಾವಾ, ದಿ ಗರ್ಲ್​ಫ್ರೆಂಡ್​​ ಮತ್ತು ಸಿಕಂದರ್ ಸೇರಿದಂತೆ ಹಲವು ಥ್ರಿಲ್ಲಿಂಗ್​ ಸಿನಿಮಾಗಳೊಂದಿಗೆ ಶೀಘ್ರದಲ್ಲೇ ಪ್ರೇಕ್ಷಕರೆದುರು ಬರಲಿದ್ದಾರೆ. ಸೋಷಿಯಲ್​​ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಇವರು ಸಿನಿಮಾ ಸಲುವಾಗಿ ಸದಾ ಪ್ರಯಾಣ ಕೈಗೊಳ್ಳುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲೂ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಇದರ ಕಾರಣವನ್ನು ಸ್ವತಃ ನಟಿಯೇ ಬಹಿರಂಗಪಡಿಸಿದ್ದಾರೆ.

ಬಿಡುವಿಲ್ಲದ ಶೂಟಿಂಗ್​​ ಶೆಡ್ಯೂಲ್​​​ ನಡುವೆಯೂ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ನೋವಿಗೊಳಗಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾ ಸೇರಿದಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವ ಬಗ್ಗೆ ಸೆಪ್ಟೆಂಬರ್ 9ರಂದು ರಶ್ಮಿಕಾ ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಾರ್ವಜನಿಕವಾಗಿ ಅಭಿಮಾನಿಗಳಿಗೆ ದರ್ಶನ ನೀಡದಿರುವುದು, ಸೋಷಿಯಲ್​ ಮೀಡಿಯಾದಲ್ಲೂ ಹೆಚ್ಚು ಸದ್ದು ಮಾಡದಿರುವುದೂ ಸೇರಿದಂತೆ ಸೆಲೆಬ್ರಿಟಿ ಪ್ರಚಾರದಿಂದ ತಾತ್ಕಾಲಿಕ ವಿರಾಮ ಪಡೆದಿರುವುದರ ಹಿಂದಿನ ನಿಖರ ಕಾರಣವನ್ನು ನಟಿ ಕಳೆದ ರಾತ್ರಿ ಬಹಿರಂಗಪಡಿಸಿದ್ದಾರೆ. ಒಂದು ಸಣ್ಣ ಅಪಘಾತ ತನ್ನನ್ನು ಎಲ್ಲದರಿಂದ ದೂರ ಮಾಡಿತು ಎಂಬುದನ್ನು 'ಶ್ರೀವಲ್ಲಿ' ಹಂಚಿಕೊಂಡಿದ್ದಾರೆ. ಈ ಪೋಸ್ಟ್​​​ನಲ್ಲಿ, ಸ್ವಯಂ-ಆರೈಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಚೆಲುವೆ, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಭರವಸೆ ನೀಡಿದರು. ಅಲ್ಲದೇ, ತಮ್ಮ ಬಿಡುವಿಲ್ಲದ ಶೂಟಿಂಗ್​​​ ಶೆಡ್ಯೂಲ್‌ಗೆ ಮರಳಲು ರೆಡಿ ಎಂಬುದನ್ನೂ ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವುದಲ್ಲದೇ, ಫ್ಯಾನ್ಸ್​​​ ಪ್ರೀತಿಗೆ ಪಾತ್ರರಾಗಿರುವ ಕೆಲ ನಾಯಕಿಯರಲ್ಲಿ ಒಬ್ಬರಾಗಿದ್ದರೂ ಕೂಡಾ ರಶ್ಮಿಕಾ ಮಂದಣ್ಣ ಕಳೆದ ಕೆಲ ವಾರಗಳಲ್ಲಿ ಸೋಷಿಯಲ್​ ಮೀಡಿಯಾ ಮತ್ತು ಸಾರ್ವಜನಿಕವಾಗಿ ದೂರವಿದ್ದರು. ವಿಮಾನ ನಿಲ್ದಾಣಗಳಿಂದಲೂ ಪಾಪರಾಜಿಗಳ ಫೋಟೋ, ವಿಡಿಯೋ ಶೇರ್​ ಆಗಲಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಸಿನಿಮಾ ಈವೆಂಟ್​​​ಗಳಿಗೆ ಹಾಜರಾಗಲಿಲ್ಲ. ಅನಿಮಲ್ ಸ್ಟಾರ್ ಈಗ ನೇರವಾಗಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಇದನ್ನೂ ಓದಿ:'ರೇಣುಕಾಸ್ವಾಮಿ ಬಿಡಬೇಡಿ' ಎಂದಿದ್ದ ಪವಿತ್ರಾಗೌಡ!; ಇದು ಚಾರ್ಜ್​​​​ಶೀಟ್​​ನಲ್ಲಿರುವ ಸ್ಫೋಟಕ ಅಂಶ! - PAVITRA GOWDA STATEMENTS

ಸೆಪ್ಟೆಂಬರ್ 9ರ ಸಂಜೆ ಶೇರ್ ಮಾಡಲಾಗಿರುವ ಪೋಸ್ಟ್​​ನಲ್ಲಿ, "ಹೇ ಗಾಯ್ಸ್, ಹೇಗಿದ್ದೀರಿ?. ನಾನಿಲ್ಲಿಗೆ ಬಂದು ಅಥವಾ ಸಾರ್ವಜನಿಕವಾಗಿ ಕಾಣಿಸಿಕೊಂಡು ಸ್ವಲ್ಪ ಸಮಯವಾಗಿದೆ ಎಂಬುದು ನನಗೆ ತಿಳಿದಿದೆ. ಕಾರಣ, ಕಳೆದ ಕೆಲ ದಿನಗಳಲ್ಲಿ ನಾನು ಹೆಚ್ಚು ಸಕ್ರಿಯವಾಗಿರಲಿಲ್ಲ. ಏಕೆಂದರೆ ನನಗೆ ಅಪಘಾತವಾಗಿತ್ತು (ಸಣ್ಣ ಅಪಘಾತ). ಕಳೆದ ಕೆಲ ದಿನಗಳಲ್ಲಿ, ನಾನು ಚೇತರಿಸಿಕೊಳ್ಳುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ನಾನು ಮನೆಯಲ್ಲೇ ಇದ್ದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್ ಶೀಟ್​​ನಲ್ಲಿ ದರ್ಶನ್ ಸ್ವಇಚ್ಚಾ ಹೇಳಿಕೆ ರಿವೀಲ್: ಏನದು ಸತ್ಯ? - Darshan Statements

ಮುಂದುವರೆದು ನಟಿ, ಆರೋಗ್ಯ ಸುಧಾರಿಸಿದೆ, ಸದ್ಯ ಸಕ್ರಿಯವಾಗಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ, ತಮ್ಮ ಅಭಿಮಾನಿಗಳಿಗೆ ಸ್ವಯಂ ಕಾಳಜಿ ಮತ್ತು ಸಂತೋಷಕ್ಕೆ ಆದ್ಯತೆ ನೀಡುವಂತೆ ಒತ್ತಿ ಹೇಳಿದ್ದಾರೆ. "ನಾನೀಗ ಬೆಟರ್​​. ಸೂಪರ್​ ಆ್ಯಕ್ಟೀವ್​​​. ಹಾಗಾಗಿ ನನ್ನ ಕೆಲಸಗಳು ಉತ್ತಮವಾಗಿ ಸಾಗಿವೆ. ನಿಮ್ಮ ಕಾಳಜಿಗೆ ಸದಾ ಮೊದಲ ಆದ್ಯತೆ ನೀಡಿ. ಏಕೆಂದರೆ ಜೀವನ ಬಹಳ ದುರ್ಬಲ ಮತ್ತು ಚಿಕ್ಕದು. ನಮಗೆ ನಾಳೆ ಇದೆ ಎಂಬುದೇ ನಮಗೆ ಗೊತ್ತಿರಲ್ಲ. ಹಾಗಾಗಿ ಪ್ರತಿದಿನ ಸಂತೋಷವನ್ನು ಆರಿಸಿಕೊಳ್ಳಿ'' ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details