ಕರ್ನಾಟಕ

karnataka

ETV Bharat / entertainment

ಸೂಪರ್​ಸ್ಟಾರ್​ ಧನುಷ್​ ವಿರುದ್ಧ ಲೇಡಿ ಸೂಪರ್​ಸ್ಟಾರ್ ನಯನತಾರಾ ಬಹಿರಂಗ ವಾಗ್ದಾಳಿ - NAYANTHARA SLAMS DHANUSH

ನಯನತಾರಾ ಧನುಷ್‌ ವಿರುದ್ಧ ಬಹಿರಂಗ ಪತ್ರದ ಮೂಲಕ ಛೀಮಾರಿ ಹಾಕಿದ್ದಾರೆ.

Nayanthara Slams Dhanush
ಧನುಷ್​ ವಿರುದ್ಧ ನಯನತಾರಾ ಆಕ್ರೋಶ (Photo: ANI)

By ETV Bharat Entertainment Team

Published : Nov 16, 2024, 2:46 PM IST

ಧನುಷ್​ ಹಾಗೂ ನಯನತಾರಾ ದಕ್ಷಿಣ ಚಿತ್ರರಂಗದ ಖ್ಯಾತ ಕಲಾವಿದರು. ತಮ್ಮದೇ ಆದ ಸ್ಟಾರ್​ಡಮ್​​, ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ್ರೀಗ ಸೌತ್ ಸೂಪರ್ ಸ್ಟಾರ್ ಧನುಷ್ ವಿರುದ್ಧ ಸೌತ್​ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಬಹಿರಂಗ ಪತ್ರದ ಮೂಲಕ ವಾಗ್ದಾಳಿ ನಡೆಸಿ, ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಹೌದು, ನಯನತಾರಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಹಿರಂಗ ಪತ್ರದ ಮೂಲಕ ಧನುಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಪೂರ್ಣ ವಿಷಯವು ನಯನತಾರಾ ಜೀವನವನ್ನಾಧರಿಸಿದ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದೆ. ಡಾಕ್ಯುಮೆಂಟ್ರಿಯ 3 ಸೆಕೆಂಡುಗಳ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಧನುಷ್ ಅವರು ನಯನತಾರಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಬಹಿರಂಗ ಪತ್ರದಲ್ಲಿ ಧನುಷ್ ವಿರುದ್ಧ ನಯನತಾರಾ ಆಕ್ರೋಶ (Photo: ETV Bharat)

ನಟ ನಯನತಾರಾ ಅವರು ತಮ್ಮ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಸಾಕ್ಷ್ಯಚಿತ್ರಕ್ಕಾಗಿ ಅವರೇ ಅಭಿನಯಿಸಿರುವ 'ನಾನೂಂ ರೌಡಿ ಧಾನ್' ಚಿತ್ರದ ಕೆಲ ದೃಶ್ಯ ಬಳಸಿಕೊಳ್ಳಲು ಧನುಷ್ ಅವರ ಅನುಮತಿ ಕೋರಿದ್ದರು. 2015ರಲ್ಲಿ ಬಂದ ಈ ಸಿನಿಮಾವನ್ನು ನಟ ಧನುಷ್​ ನಿರ್ಮಾಣ ಮಾಡಿದ್ದರು. ನಯನತಾರಾ ನಾಯಕಿಯಾಗಿದ್ದರೆ, ಪತಿ ವಿಘ್ನೇಶ್​ ಶಿವನ್​​ ನಿರ್ದೇಶಕರಾಗಿ ಚಿತ್ರತಂಡದ ಭಾಗವಾಗಿದ್ದರು. ನಿರ್ಮಾಪಕ ಧನುಷ್​ ಬಳಿ ಸೀನ್​ಗಳ ಬಳಕೆಗೆ ನಟಿ ಅನುಮತಿ ಕೋರಿದ್ದರು. ಆದ್ರೆ ಧನುಷ್ ನಿರಾಕರಿಸಿದ್ದರು.

ಇದನ್ನೂ ಓದಿ:'ಪುಷ್ಪ 2'ಕ್ಕೆ ಅಲ್ಲು ಅರ್ಜುನ್ ಪಡೆದಿದ್ದು 300 ಕೋಟಿ: ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ

ಆದ್ರೆ ಇತ್ತೀಚೆಗೆ ಬಿಡುಗಡೆಯಾದ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಚಿತ್ರದ ಟ್ರೇಲರ್​​ ವೀಕ್ಷಿಸಿ, ಕೇವಲ 3 ಸೆಕೆಂಡುಗಳ ದೃಶ್ಯವನ್ನು ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಹಾನಿಗೆ 10 ಕೋಟಿ ರೂ. ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ. ನಾನುಂ ರೌಡಿ ಧಾನ್ ಚಿತ್ರದಲ್ಲಿ ನಯನತಾರಾ ಅವರೇ ನಾಯಕಿಯಾಗಿದ್ದರಿಂದ ಅವರು ಈ ಚಿತ್ರದ ಹಾಡುಗಳು ಮತ್ತು ಕೆಲ ದೃಶ್ಯಗಳಿಗೆ ಬೇಡಿಕೆಯಿಟ್ಟಿದ್ದರು. ಆದರೆ ಧನುಷ್ ನಿರಾಕರಿಸಿದ ನಂತರ, ನಯನತಾರಾ ಮುಂದೆ ಬಂದು ನಟನ ವಿರುದ್ಧ ದನಿಯೆತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ.

ಇದನ್ನೂ ಓದಿ:ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ನೀವು ನಿಮ್ಮ ತಂದೆ ಮತ್ತು ಸಹೋದರನಿಂದಾಗಿ ಯಶಸ್ವಿ ಕಲಾವಿದರಾಗಿದ್ದೀರಿ. ಆದರೆ, ನನಗೆ ಚಿತ್ರರಂಗದಲ್ಲಿ ಗಾಡ್‌ಫಾದರ್ ಇರಲಿಲ್ಲ. ನಾನು ನನ್ನ ಪರಿಶ್ರಮದಿಂದ ಇಂದು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದೇನೆ. ಅಭಿಮಾನಿಗಳಿಗೆ ನನ್ನ ಕೆಲಸ ತಿಳಿದಿದೆ. ಅವರು ನನ್ನ ಸಾಕ್ಷ್ಯಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ನಿಮ್ಮ ವರ್ತನೆ ನಮ್ಮ ಕೆಲಸದ ಮೇಲೆ ದೊಡ್ಡ ಪ್ರಭಾವ ಬೀರಿದೆ. ಪರಿಣಾಮಗಳನ್ನು ಎದುರಿಸಲಿದ್ದೀರಿ. ಎನ್​ಓಸಿ ಹಾಕಿದ್ದೀರಿ. ನನ್ನ ಸಾಕ್ಷ್ಯಚಿತ್ರವನ್ನು ಮತ್ತೆ ಎಡಿಟ್ ಮಾಡುತ್ತೇವೆ. 3 ಸೆಕೆಂಡ್ ದೃಶ್ಯಕ್ಕಾಗಿ ನೀವು 10 ಕೋಟಿ ರೂ.ನ ಲೀಗಲ್ ನೋಟಿಸ್ ಕಳುಹಿಸಿದ್ದೀರಿ. ನ್ಯಾಯಾಲಯದಲ್ಲಿ ತೀರ್ಮಾನವಾಗಲಿದೆ. ಕಾನೂನಿನ ಮೂಲಕ ಉತ್ತರ ಕೊಡಲಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details