ಬೆಂಗಳೂರು :ನಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನಿತಾ ಭಟ್ ಜೊತೆ ಗಲಾಟೆ ಮಾಡಿ ಅನುಚಿತ ವರ್ತನೆ ತೋರಿದ ಆರೋಪದಡಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ ಜಕ್ಕೂರು ಬಳಿ ಗೆಳತಿಯೊಂದಿಗೆ ಅನಿತಾ ಅವರು ಕಾರಿನಲ್ಲಿದ್ದಾಗ ಈ ವೇಳೆ ಅಪರಿಚಿತರನ್ನ ಕಂಡು ನಾಯಿ ಬೊಗಳಿದೆ. ಇದಕ್ಕೆ ಅಸಮಾಧಾನಗೊಂಡು ಕ್ಯಾತೆ ತೆಗೆದಿದ್ದಾರೆ. ಈತನೊಂದಿಗೆ ಇತರ ಮೂರು - ನಾಲ್ಕು ಮಂದಿ ಜಗಳ ತೆಗೆದಿದ್ದಾರೆ. ಅಲ್ಲದೇ ಕಾರಿಗೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಅನಿತಾ ಅವರು ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಯಿ ವಿಚಾರಕ್ಕೆ ಗಲಾಟೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಅನಿತಾ ಭಟ್ - Actress Anita Bhat
ನಾಯಿ ವಿಚಾರಕ್ಕೆ ಗಲಾಟೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ನಟಿ ಅನಿತಾ ಭಟ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Published : Mar 20, 2024, 10:14 PM IST
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಅನಿತಾ, ನನಗೂ ಈ ಜಗಳಕ್ಕೂ ಸಂಬಂಧವಿಲ್ಲ. ನನ್ನ ಸ್ನೇಹಿತೆಗೂ ಅಲ್ಲಿದ್ದ ಕೆಲ ಯುವಕರಿಗೆ ಕಿರಿಕ್ ಆಗಿತ್ತು. ತುಂಬಾ ಹೊತ್ತು ಅವರು ಜಗಳ ಮಾಡುತ್ತಿದ್ದರು. ಹೀಗಾಗಿ ನಾನು ನೋಡುವಷ್ಟು ನೋಡಿದೆ. ಆ ನಂತರ ನಾನು ನನ್ನ ಸ್ನೇಹಿತನನ್ನು ಬನ್ನಿ ಹೋಗೋಣ ಯಾಕೆ ಜಗಳ ಅಂತ ಹೇಳಿದೆ. ಆಗ ಅಲ್ಲಿದ್ದ ಯುವಕರು ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವುದಕ್ಕೆ ಮುಂದಾದರು. ನನಗೂ ನಾಯಿ ವಿಚಾರಕ್ಕೂ ಸಂಬಂಧವಿಲ್ಲ. ಸುಖಾಸುಮ್ಮನೆ ನನ್ನ ಮೇಲೆ ಅಲ್ಲಿದ್ದ ಯುವಕರು ನಿಂದಿಸಿದ್ದಾರೆ. ನಂತರ ನಾನು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ. ಕಾನೂನು ರೀತಿಯಲ್ಲಿ ನಾನು ಹೋರಾಟ ಮಾಡ್ತೀನಿ ಎಂದಿದ್ದಾರೆ.
ಇದನ್ನೂ ಓದಿ :ಸಾಕು ನಾಯಿ ಬೊಗಳಿದ್ದಕ್ಕೆ ಕುಟುಂಬಸ್ಥರ ಮೇಲೆ ಹಲ್ಲೆ ಆರೋಪ: ಆರೋಪಿ ಬಂಧನ