ಕರ್ನಾಟಕ

karnataka

ETV Bharat / entertainment

ಕನ್ನಡಕ್ಕೂ ಬಂದ 'ಲವ್ ರೆಡ್ಡಿ': ಹೊಸಬರ ಚಿತ್ರಕ್ಕೆ ಬೆನ್ನೆಲುಬಾದ ಸ್ಯಾಂಡಲ್​​ವುಡ್ 'ಭೀಮ' - LOVE REDDY

ತೆಲುಗು ಸಿನಿಮಾ 'ಲವ್ ರೆಡ್ಡಿ' ಕನ್ನಡದಲ್ಲೂ ಡಬ್ ಆಗಿದ್ದು, ಇದೇ ತಿಂಗಳು 22ರಂದು ಬಿಡುಗಡೆಯಾಗಲಿದೆ.

ETV Bharat
ಲವ್ ರೆಡ್ಡಿ ಚಿತ್ರತಂಡಕ್ಕೆ ನಟ ವಿಜಯ್ ಸಾಥ್ (ETV Bharat)

By ETV Bharat Karnataka Team

Published : Nov 10, 2024, 9:49 AM IST

ಹೊಸಬರೇ ಸೇರಿ ಮಾಡಿರುವ ನೈಜ ಘಟನೆ ಆಧರಿತ 'ಲವ್ ರೆಡ್ಡಿ' ಸಿನಿಮಾ ಟಾಲಿವುಡ್​ನಲ್ಲಿ ಸಖತ್ ಸೌಂಡ್ ಮಾಡುವುದರ ಮೂಲಕ ಬಾಕ್ಸಾಫೀಸ್​​ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದೆ. ಈ ಚಿತ್ರ ಕನ್ನಡದಲ್ಲೂ ಡಬ್ ಆಗಿದ್ದು, ಟ್ರೈಲರ್​ ಅನ್ನು ಸ್ಯಾಂಡಲ್​​ವುಡ್ ಭೀಮ ನಟ ವಿಜಯ್ ರಿಲೀಸ್ ಮಾಡಿದರು. ಮೂಲತಃ ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ‌ ಇದಾಗಿದೆ.

ಲವ್ ರೆಡ್ಡಿ ಸಿನಿಮಾಗೆ ಹೈದರಾಬಾದ್​ನ ಸ್ಮರಣ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾಗೆ ನಟ ಅಂಜನ್ ಕುಟುಂಬದವರೇ ಬಂಡವಾಳ ಹೂಡಿದ್ದಾರೆ. ನಟಿಯಾಗಿ ಶ್ರಾವಣಿ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ ನಟ ವಿಜಯ್ ಅವರು ಈ ಸಿನಿಮಾ ನೋಡಿ, ಕಂಟೆಂಟ್ ಇಷ್ಟವಾಗಿದ್ದರಿಂದ ಕನ್ನಡದಲ್ಲಿ ಅವರೇ ಪ್ರಸ್ತುತಪಡಿಸುತ್ತಿದ್ದಾರೆ. ಜೊತೆಗೆ ಹೊಂಬಾಳೆ ಸಂಸ್ಥೆ ಕನ್ನಡದ ವಿತರಣೆ ಜವಾಬ್ದಾರಿ ಹೊತ್ತಿದೆ.

ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿ ನಟ ವಿಜಯ್ ಮಾತನಾಡಿ, "ಲವ್ ರೆಡ್ಡಿ ಸಿನಿಮಾ ನೋಡಿ ನಾಲ್ಕು ದಿನ ಆಯ್ತು. ಪ್ರತಿ ಪಾತ್ರಗಳು ಈಗಲೂ ನನಗೆ ಕಾಡ್ತಿದೆ. ಅಷ್ಟರ ಮಟ್ಟಿಗೆ ಲವ್ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಸ್ವಲ್ಪ ಕೆಲಸಗಳಿಗೆ ದುಬೈಗೆ ಹೋಗ್ತಾ ಇದ್ದೀನಿ, ಸಾಧ್ಯ ಆದಷ್ಟು ಅಲ್ಲಿನವರನ್ನು ಭೇಟಿಯಾಗಿ ದುಬೈನಲ್ಲಿ ಲವ್ ರೆಡ್ಡಿ ರಿಲೀಸ್ ಮಾಡುವ ಯೋಚನೆ ಮಾಡ್ತೀನಿ" ಎಂದು ಚಿತ್ರ ತಂಡಕ್ಕೆ ಭರವಸೆ ನೀಡಿದರು.

ಕನ್ನಡದಲ್ಲಿ ಕುರುತೆರೆ ಮೂಲಕ ಜನಪ್ರಿಯರಾಗಿರುವ ಕನ್ನಡದ ನಟ ಎನ್.ಟಿ.ರಾಮಸ್ವಾಮಿ ಮಾತನಾಡಿ, "ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಹೊಸಬರಿಗೆ ಈ ರೀತಿ ರೆಸ್ಪಾನ್ಸ್ ಸಿಕ್ತಿರೋದು ಖುಷಿಯ ವಿಚಾರ. ನಾನೆಲ್ಲೂ ಪ್ರಮೋಷನ್​ಗೆ ಹೋಗಿರಲಿಲ್ಲ, ಚಿತ್ರತಂಡ ನನ್ನ ಪಾತ್ರಕ್ಕೆ ಹೆಚ್ಚು ಪ್ರಶಂಸೆ ಸಿಕ್ತಿದೆ. ಜನರಿಗೆ ಕನೆಕ್ಟ್ ಆಗ್ತಿದೆ. ಹೈದರಾಬಾದ್​​ನಲ್ಲಿ ಒಂದು ಥಿಯೇಟರ್​ಗೆ ಭೇಟಿ ನೀಡಿದಾಗ ಏಕಾಏಕಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಬಾರಿಸೋಕೆ ಶುರು ಮಾಡಿದ್ರು, ಬಹುಶಃ ಅವರ ಜೀವನದಲ್ಲಿ ಏನಾಗಿತ್ತೋ, ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದು ನನ್ನ ಮೇಲೆ ಕೈ ಮಾಡಿದ್ರು. ಇದು ಒಂದು ರೀತಿಯಲ್ಲಿ ವರ ಹೌದು. ಕಾರಣ ಜನರಿಗೆ ನನ್ನ ಪಾತ್ರ ಮುಟ್ಟಿದೆ. ನನ್ನ ಸಿನಿಮಾವನ್ನು ವಿಜಯ್ ಪ್ರೆಸೆಂಟ್ ಮಾಡ್ತಿರೋದು ಖುಷಿಯ ವಿಚಾರ. ಎಲ್ಲ ಹೊಸಬರಿಗೂ ವಿಜಯ್ ಹೀಗೆ ಸಪೋರ್ಟ್ ಮಾಡ್ತಾರೆ. ಅವರಿಗೂ ಇಂಡಸ್ಟ್ರೀಯಲ್ಲಿ ಯಾವುದೇ ಸಪೋರ್ಟ್ ಇಲ್ಲದೆ, ಆ ಕಷ್ಟನ ಅನುಭವಿಸಿದ್ದಾರೆ. ಹಾಗಾಗಿ ಸದಾ ಹೊಸಬರಿಗೆ ಅವಕಾಶ ಕೊಡ್ತಾರೆ. ಸಲಗ ವಿಜಯ್ ಬರೀ ನಟನಲ್ಲ, ದೈತ್ಯ ಕನ್ನಡದ ಪ್ರತಿಭೆ" ಎಂದು ಹೊಗಳಿದರು.

ಲವ್ ರೆಡ್ಡಿ ಚಿತ್ರತಂಡಕ್ಕೆ ನಟ ವಿಜಯ್ ಸಾಥ್ (ETV Bharat)

ನಿರ್ದೇಶಕ ಸ್ಮರಣ್ ರೆಡ್ಡಿ ಮಾತನಾಡಿ, "ತೆಲುಗಿನಲ್ಲಿ ಸೆನ್ಸೇಷನಲ್ ಹಿಟ್ ಆಗಿದೆ. ನಮ್ಮ ಲವ್ ರೆಡ್ಡಿ ಈಗ ಇದೇ ತಿಂಗಳು 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ. ಈಗಾಗಲೇ ತೆಲುಗಿನ ಸ್ಟಾರ್ ನಟ ಪ್ರಭಾಸ್ ಹಾಗೂ ಸ್ಟಾರ್ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ" ಎಂದರು.

ನಟಿ ಶ್ರಾವಣಿ ಮತ್ತು ನಟ ಅಂಜನ್ ರಾಮಚಂದ್ರ ಮಾತನಾಡಿ, "ನಾವು ಕನ್ನಡದವರೇ, ದಯವಿಟ್ಟು ಸಿನಿಮಾನ ನೋಡಿ. ಲವ್ ರೆಡ್ಡಿಗೆ ನಿಮ್ಮ ಬೆಂಬಲವಿರಲಿ. ಯುವ ಪೀಳಿಗೆಗೆ
ಸಲಗ ವಿಜಯ್ ಉದಾಹರಣೆ. ವಿಜಯ್ ನಂಬಿದವರ ಕೈ ಯಾವತ್ತೂ ಬಿಡಲ್ಲ. ಅವರು ಬರೀ ಸಿನಿಮಾದಲ್ಲಷ್ಟೇ ಅಲ್ಲ ನಿಜ ಜೀವನದಲ್ಲೂ ಹೀರೋ" ಎಂದು ಕೊಂಡಾಡಿದ್ರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕರು, "ನಮಗೆ ಯಾವ ಸಿನಿಮಾದ ಬ್ಯಾಗ್ರೌಂಡ್ ಇಲ್ಲ. ಈ ಸಿನಿಮಾದ ನಟ ಅಂಜನ್ ರಾಮಚಂದ್ರ ನಮ್ಮ ಕುಟುಂಬದವರು, ಹೊಸಬರು ಸಿನಿಮಾ ಮಾಡ್ತಾರೆ ಅಂದ್ರೆ ಯಾರು ಬಂಡವಾಳ ಹಾಕಲು ಮುಂದೆ ಬರಲ್ಲ. ಹಾಗಾಗಿ ನಾವೆಲ್ಲರೂ ಸೇರಿ ಬಂಡವಾಳ ಹಾಕಿ ಈ ಸಿನಿಮಾ ಮಾಡಿದ್ದೇವೆ. ಒಳ್ಳೆ ಕಂಟೆಂಟ್​​ಗೆ ಸೋಲಿಲ್ಲ, ತೆಲುಗಿನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈಗ ಕನ್ನಡದಲ್ಲೂ ಬರ್ತಿದ್ದೀವಿ" ಎಂದರು.

ಇದನ್ನೂ ಓದಿ:'ಹನುಮಂತು ಮುಗ್ಧ ಅಲ್ಲ': ಕಿಚ್ಚನ ಬಿಗ್​​ಬಾಸ್​​​ನಲ್ಲಿ ಚರ್ಚೆ ಜೋರು; ನೀವೇನಂತೀರಾ

ABOUT THE AUTHOR

...view details