ಕರ್ನಾಟಕ

karnataka

ETV Bharat / entertainment

ಮಲೈಕಾ ಅರೋರಾ ಮಲತಂದೆ ಅನಿಲ್ ಆತ್ಮಹತ್ಯೆ: ನಟಿಯ ಮನೆಗೆ ಬಂದ ಮಾಜಿ ಪತಿ ಅರ್ಬಾಜ್ ಖಾನ್ - Malaika Arora Father Suicide - MALAIKA ARORA FATHER SUICIDE

ಬಾಲಿವುಡ್​ ನಟಿ, ನೃತ್ಯಗಾರ್ತಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಕೊನೆಯುಸಿರೆಳೆದಿದ್ದಾರೆ. ಮುಂಬೈ ಪೊಲೀಸರ ಹೇಳಿಕೆ ಪ್ರಕಾರ, ಅನಿಲ್ ಮೆಹ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Malaika Arora's Father Anil death
ಮಲೈಕಾ ಅರೋರಾ ಅವರ ತಂದೆ ಅನಿಲ್ ಆತ್ಮಹಹತ್ಯೆ (IANS)

By ETV Bharat Karnataka Team

Published : Sep 11, 2024, 12:57 PM IST

ಹೈದರಾಬಾದ್: ಬಾಲಿವುಡ್​ ನಟಿ, ನೃತ್ಯಗಾರ್ತಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಮೆಹ್ತಾ ಕೊನೆಯುಸಿರೆಳೆದಿದ್ದಾರೆ. ಅವರು ಮುಂಬೈನಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ದುಃಖ ಮಡುಗಟ್ಟಿದೆ.

ಮಲೈಕಾ ಅರೋರಾ ಕುಟುಂಬ (IANS)

ಅನಿಲ್ ಮೆಹ್ತಾ ನಿಧನ ಹಿನ್ನೆಲೆ, ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್​​ ನಟಿಯ ಮನೆಗೆ ಭೇಟಿ ನೀಡಿದ್ದಾರೆ. ಮುಂಬೈ ಪೊಲೀಸರ ಹೇಳಿಕೆ ಪ್ರಕಾರ, ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ನಟಿಯ ಮನೆಗೆ ಬಂದ ಮಾಜಿ ಪತಿ ಅರ್ಬಾಜ್ ಖಾನ್ (ANI)

ಅನಿಲ್ ಮೆಹ್ತಾ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದಾಗ್ಯೂ, ಕೆಲವು ವರದಿಗಳು ಇದೊಂದು ಅಪಘಾತ ಎಂದು ಹೇಳಿವೆ. ಬುಧವಾರ (11-09-2024) ಬೆಳಗ್ಗೆ ಸುಮಾರು 9.00 ಗಂಟೆಗೆ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್​ನಲ್ಲಿ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಆತ್ಮಹತ್ಯೆಯೋ ಅಥವಾ ಅಪಘಾತವೋ ಎಂಬುದು ಸಂಪೂರ್ಣ ಪೊಲೀಸ್​ ತನಿಖೆ ಬಳಿಕ ತಿಳಿಯಲಿದೆ.

ಮಲೈಕಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಘಟನೆ ನಡೆದ ನಟಿಯ ಅಪಾರ್ಟ್​​ಮೆಂಟ್​​ ಹೊರಗೆ ಕಾಣಿಸಿಕೊಂಡಿದ್ದಾರೆ. ನಟಿ ಪುಣೆಯಿಂದ ಮುಂಬೈಗೆ ಹಿಂತಿರುಗುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮೃತದೇಹವನ್ನು ಬಾಬಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಸಾವಿಗೆ ಸಂಬಂಧಿಸಿದ ಇತರೆ ವಿವರಗಳು ಇನ್ನಷ್ಟೇ ಬರಬೇಕಿದ್ದು, ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಲೈಕಾ ಅರೋರಾ ಹುಟ್ಟಿದ್ದು ಮಹಾರಾಷ್ಟ್ರದ ಥಾಣೆಯಲ್ಲಿ. ಅವರು 11 ವರ್ಷದವರಿದ್ದಾಗ ಪೋಷಕರು ವಿಚ್ಛೇದನ ಪಡೆದರು. ನಂತರ ಮಲೈಕಾ ಅವರು ತಮ್ಮ ತಾಯಿ ಮತ್ತು ಸಹೋದರಿ ಅಮೃತಾ ಅರೋರಾ ಅವರೊಂದಿಗೆ ಚೆಂಬೂರ್‌ಗೆ ತೆರಳಿದರು. ನಟಿಯ ತಾಯಿ ಜಾಯ್ಸ್ ಪಾಲಿಕಾರ್ಪ್, ಮಲಯಾಳಿ ಕ್ರಿಶ್ಚಿಯನ್ ಮತ್ತು ತಂದೆ ಅನಿಲ್ ಮೆಹ್ತಾ ಅವರು ಪಂಜಾಬಿಯಾಗಿದ್ದು, ಅವರು ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿದ್ದರು.

ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ಜಾಣ್ಮೆಯ ಉತ್ತರ ಕೊಟ್ಟ ನಟ ರಮೇಶ್ ಅರವಿಂದ್: ವಿಡಿಯೋ ನೋಡಿ - Ramesh Aravind on Darshan

ಫ್ಯಾಷನ್ ಮ್ಯಾಗಜೀನ್‌ ಒಂದರ ಸಂದರ್ಶನದಲ್ಲಿ ಮಾತನಾಡಿದ್ದ ಮಲೈಕಾ, ತಮ್ಮ 11ರ ಹರೆಯದಲ್ಲಿ ಪೋಷಕರು ಬೇರೆಯಾಗಲು ನಿರ್ಧರಿಸಿದ್ದರ ಬಗ್ಗೆ ಮಾತನಾಡಿದ್ದರು. ತನ್ನ ಬಾಲ್ಯ ಜೀವನ "ಅದ್ಭುತ"ವಾಗಿದ್ದರೂ ಕೂಡಾ ಅದು ಅಷ್ಟು "ಸುಲಭವಿರಲಿಲ್ಲ" ಎಂದು ತಿಳಿಸಿದ್ದರು. ಅದೊಂದು ಪ್ರಕ್ಷುಬ್ಧ ಪರಿಸ್ಥಿತಿಯಾಗಿತ್ತು. ನನ್ನ ತಾಯಿಯನ್ನು ಸೂಕ್ಷವಾಗಿ ಗಮನಿಸಬೇಕಿತ್ತು ಎಂದು ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ:''ಲೆಕ್ಕವಿಲ್ಲದಷ್ಟು ಬಾರಿ ನನ್ನ ಮದುವೆ ಮಾಡಿಸಿಬಿಟ್ಟಿರಿ'': ಮದುವೆ ವದಂತಿ ಬಗ್ಗೆ ಅಸಮಧಾನಗೊಂಡ ನಟಿ ರಮ್ಯಾ - Ramya Reacts Wedding Rumors

1998ರಲ್ಲಿ ಮದುವೆಯಾಗಿದ್ದ ಮಲೈಕಾ ಅರೋರಾ 2017 ರಲ್ಲಿ ನಟ ಅರ್ಬಾಜ್​ ಖಾನ್​ ಅವರಿಂದ ವಿಚ್ಛೇದನ ಪಡೆದಿದ್ರು. ವಿಚ್ಛೇದಿತ ದಂಪತಿಗೆ ಆರ್ಹಾನ್​ ಖಾನ್​​ ಎಂಬ ಮಗನಿದ್ದಾನೆ. ಮಾಡೆಲ್​, ಫಿಟ್ನೆಸ್​ ಐಕಾನ್​​, ಅದ್ಭುತ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಮಲೈಕಾ ಹಿಂದಿ ಜನಪ್ರಿಯ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details