ಬಿಗ್ ಬಾಸ್ ಮನೆಯೀಗ ಬಿಗ್ ಬಾಸ್ ರೆಸಾರ್ಟ್ ಆಗಿ ಪರಿವರ್ತನೆಯಾಗಿದೆ. ಒಂದು ತಂಡ ರೆಸಾರ್ಟ್ನ ಸಿಬ್ಬಂದಿಯಾಗಿ ಕೆಲಸ ಮಾಡಬೇಕಿದ್ದು, ಮತ್ತೊಂದು ತಂಡ ಅತಿಥಿಗಳಾಗಿ ಸೇವೆ ಮಾಡಬೇಕಿದೆ. ಈ ಆಟದಲ್ಲಿ ವೈಯಕ್ತಿಕ ಮನಸ್ತಾಪ, ಮುಯ್ಯಿಗೆ ಮುಯ್ಯಿ ವಿಚಾರಗಳು ಎದ್ದು ಕಾಣುತ್ತಿವೆ. ಸ್ಪರ್ಧಿಗಳ ಅಸಲಿ ವ್ಯಕ್ತಿತ್ವ ಅನಾವರಣಗೊಳ್ಳುತ್ತಿದೆ. ಇಂದಿನ ಸಂಚಿಕೆಯಲ್ಲಿ ಟಾಸ್ಕ್ನಲ್ಲಿ ಮಹತ್ವದ ತಿರುವು ಎದುರಾಗಲಿದ್ದು, ಸೇರಿಗೆ ಸವ್ವಾಸೇರು ಕೊಡಲು ರಜತ್ ಅವರ ತಂಡ ಸಜ್ಜಾಗಿದೆ.
''ಈಗ ಆಟ ಬದಲಾಗಿದೆ!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಪ್ರೋಮೋ ರಿಲೀಸ್ ಆಗಿದೆ. ಈವರೆಗೆ ರೆಸಾರ್ಟ್ ಸಿಬ್ಬಂದಿ ಆದವರಿಂದು ಅತಿಥಿಗಳಾಗಿ ಬದಲಾಗಲಿದ್ದಾರೆ. ಕಳೆದ ಸಂಚಿಕೆಯಲ್ಲಿ ತಾವು ಸಿಬ್ಬಂದಿಯಾಗಿದ್ದ ಸಂದರ್ಭದಲ್ಲಿ ತಡೆದುಕೊಂಡಿದ್ದ ಆಕ್ರೋಶವನ್ನು ಇಂದಿನ ಸಂಚಿಕೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊರಹಾಕಲಿದ್ದಾರೆ. ರಜತ್ ಅವರ ಅಬ್ಬರ ಕೊಂಚ ಹೆಚ್ಚೇ ಎನ್ನಬಹುದು. ಇದರ ಒಂದು ಸುಳಿವನ್ನು ಪ್ರೋಮೋದಲ್ಲಿ ನೋಡಬಹುದು.
ಕ್ಯಾಪ್ಟನ್ ಭವ್ಯಾ ಅವರ ತಂಡದಲ್ಲಿ ತ್ರಿವಿಕ್ರಮ್, ಧನರಾಜ್ ಆಚಾರ್, ರಜತ್ ಕಿಶನ್ ಹಾಗೂ ಮೋಕ್ಷಿತಾ ಅವರಿದ್ದಾರೆ. ಮತ್ತೊಂದು ತಂಡದ ನಾಯಕತ್ವವನ್ನು ಚೈತ್ರಾ ಕುಂದಾಪುರ ವಹಿಸಿದ್ದು, ಉಗ್ರಂ ಮಂಜು, ಗೌತಮಿ ಜಾಧವ್, ಹನುಮಂತು ಮತ್ತು ಐಶ್ವರ್ಯಾ ಅವರಿದ್ದಾರೆ. ಕಳೆದ ಸಂಚಿಕೆಯಲ್ಲಿ ಭವ್ಯಾ ಅವರ ತಂಡ ರೆಸಾರ್ಟ್ ಸಿಬ್ಬಂದಿಯಾಗಿ ಸೇವೆ ಒದಗಿಸಿದ್ದರೆ, ಅತಿಥಿಗಳಾಗಿ ಚೈತ್ರಾ ಕುಂದಾಪುರ ಟೀಮ್ ಮಸ್ತ್ ಮಜಾ ಮಾಡಿತ್ತು. ಟಾಸ್ಕ್ ಹೆಸರಲ್ಲಿ ಚೈತ್ರಾ ಕುಂದಾಪುರ ಅವರು ರಜತ್ ಅವರ ಬೆಂಡೆತ್ತಿದ್ದರು. ಇದೀಗ ರಜತ್ ಅವರ ಸರದಿ. ಯಾಕಂದ್ರೆ ಚೈತ್ರಾ ಕುಂದಾಪುರ ಅವರ ತಂಡವೀಗ ರೆಸಾರ್ಟ್ ಸಿಬ್ಬಂದಿಯಾಗಿ ಬದಲಾಗಲಿದ್ದಾರೆ.
ಪ್ರೋಮೋದಲ್ಲಿ, ಭವ್ಯಾ ಅವರ ತಂಡ ಅತಿಥಿಗಳಾಗಿ, ಚೈತ್ರಾ ಅವರ ತಂಡ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಬಿಗ್ ಬಾಸ್ ಸೂಚಿಸಿದ್ದಾರೆ. ಅದರಂತೆ ಆಟ ಶುರುಮಾಡಿಕೊಂಡಿದ್ದಾರೆ. ರಜತ್ ಹೈಲೆಟ್ ಆಗಿದ್ದು ಎಲ್ಲರನ್ನೂ ಬೆಂಡೆತ್ತಿದ್ದಾರೆ. ತಮ್ಮದೇ ತಂಡದ ಮೋಕ್ಷಿತಾ ಅವರ ತೊಡೆ ಮೇಲೆ ಕುಳಿತಿದ್ದು, ಮೋಕ್ಷಿತಾ ಅಸಮಾಧಾನ ಹೊರಹಾಕಿದ್ದಾರೆ. ನಂತರ ಸಖತ್ತಾಗಿದಿಯಾ ಎಂದು ಹೇಳಿದ್ದಾರೆ. ಇದು ರೆಸಾರ್ಟ್ ಸಿಬ್ಬಂದಿಯ ಕೆಲಸ ಹೆಚ್ಚಿಸುವ ಕಾರಣದಿಂದ ಸ್ಟ್ರಾಟಜಿ ಮಾಡಿರಬಹುದು. ಧನರಾಜ್ ಬೆಡ್ ರೂಮ್ ಏರಿಯಾವನ್ನು ಅವ್ಯವಸ್ಥಿತ ಮಾಡಿಬಿಟ್ಟಿದ್ದಾರೆ. ಬೆಡ್ಶೀಟ್ನಿಂದ ಹಿಡಿದು ವಸ್ತುಗಳನ್ನು ಎತ್ತೆಸೆದಿದ್ದಾರೆ. ನಂತರ ಉಗ್ರಂ ಮಂಜು ಅವರ ಕಾಲೆಳೆದಿದ್ದಾರೆ ರಜತ್. ಇನ್ಮೇಲೆ ಪಾಸಿಟೀವೇ ಇರಬಾರದು ನಿಮ್ ಜೀವನದಲ್ಲಿ, ಓನ್ಲಿ ನೆಗೆಟೀವ್ ಇರಬೇಕು ಅಂತಾ ಗೌತಮಿ ಅವರಿಗೆ ರಜತ್ ತಿಳಿಸಿದ್ದಾರೆ. ನಂತರ, ರಜತ್ ಬಾತ್ರೂಮ್ ಏರಿಯಾವನ್ನು ಗಲೀಜ್ ಮಾಡಿ, ಚೈತ್ರಾ ಕುಂದಾಪುರ ಅವರ ಬಳಿ ಕೆಲಸ ಮಾಡಿಸಿದ್ದಾರೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್