ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್ ಅವರ ಕೊನೆಯ ಚಿತ್ರ 'ವಿಕಾಂತ್ ರೋಣ' 2022ರ ಜುಲೈ 28ರಂದು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಎರಡೂವರೆ ವರ್ಷದಿಂದ ಅಭಿಮಾನಿಗಳು ನಟನ ಮುಂದಿನ ಚಿತ್ರಕ್ಕಾಗಿ ಕಾತರರಾಗಿದ್ದರು. ಕೊನೆಗೂ ಇಂದು ಕಿಚ್ಚ ಚಿತ್ರಮಂದಿರಗಳನ್ನು ಪ್ರವೇಶಿಸಿ ಅಭಿಮಾನಿಗಳ ಸಂತಸ ಹೆಚ್ಚಿಸಿದ್ದಾರೆ. ಮಾಸ್ ಅವತಾರದಲ್ಲಿ ಸುದೀಪ್ ಅಬ್ಬರಿಸಿದ್ದು, 'ಮ್ಯಾಕ್ಸ್' ಬಹುತೇಕ ಮೆಚ್ಚುಗೆ ಸ್ವೀಕರಿಸಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮ್ಯಾಕ್ಸ್ನದ್ದೇ ಹವಾ. ಮಿಶ್ರ ಪ್ರತಿಕ್ರಿಯೆಗಳ ಪೈಕಿ ಮ್ಯಾಕ್ಸಿಮಮ್ ಪಾಸಿಟಿವ್ ರೆಸ್ಪಾನ್ಸ್ ಬಂದಿದ್ದು, ಸಿನಿಮಾ ತನ್ನ ಮೊದಲ ದಿನ ಭಾರತದಲ್ಲಿ 2.67 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಗಳಿಕೆಯ ಅಂತಿಮ ಅಂಕಿಅಂಶ ನಾಳೆ ಬೆಳಗ್ಗೆ ಹೊರಬೀಳಲಿದ್ದು, ಸಿನಿಮಾ ಗಳಿಕೆ ಹೇಗಿರಲಿದೆ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ ಮ್ಯಾಕ್ಸ್ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಅಲ್ಲಿ ಎರಡೂವರೆ ವರ್ಷ ಕಾಯಿಸಿದ್ದಕ್ಕೆ ಕ್ಷಮಿಸಿ, ಇನ್ಮುಂದೆ ಹೀಗಾಗಲ್ಲ, ಹೆಚ್ಚಿನ ಸಿನಿಮಾಗಳನ್ನು ನೀಡುವುದಾಗಿ ಕಿಚ್ಚ ಭರವಸೆ ನೀಡಿದ್ರು. ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ್ದ ನಾಯಕ ನಟ, "ನಾನು ಬಂದೇ ಬರುತ್ತೇನೆಂದು ಚಿತ್ರದುರ್ಗದ ಜನತೆಗೆ ಮಾತು ಕೊಟ್ಟಿದ್ದೆ. ಹಾಗಾಗಿ ಒಬ್ಬನೇ ಬಂದಿಲ್ಲ. ಜೊತೆಗೆ, ನನ್ನ ಕುಟುಂಬವನ್ನೂ ಕರೆದುಕೊಂಡು ಬಂದಿದ್ದೇನೆ. ಈ ಕುಟುಂಬಕ್ಕೆ ಪರಿಚಯಿಸೋಣ ಅಂತಾ" ಎಂದು ತಿಳಿಸಿದರು.
ಇದನ್ನೂ ಓದಿ: ಸುದೀಪ್ 'ಮ್ಯಾಕ್ಸ್'ಗೆ ಮಿಶ್ರ ಪ್ರತಿಕ್ರಿಯೆ: ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಗೊತ್ತಾ?
ಇಲ್ಲಿಗೆ ಬರಲು ಪ್ರತೀ ಬಾರಿಯೂ ತುಂಬಾನೇ ಖುಷಿಯಾಗುತ್ತದೆ. 'ಹುಚ್ಚ'ನಂತಹ ಅದ್ಭುತ ಸಿನಿಮಾ ಕೊಟ್ಟ ಕೋಟೆನಾಡಿದು. ನಿಮ್ಮನ್ನು ಎರಡೂವರೆ ವರ್ಷ ಕಾಯಿಸಿದ್ದಕ್ಕೆ ದಯವಿಟ್ಟು ಕ್ಷಮಿಸಿಬಿಡಿ. ಇನ್ಮುಂದೆ ಹೀಗಾಗಲ್ಲ. ಮ್ಯಾಕ್ಸ್ ಸಿನಿಮಾವನ್ನು ನಿಮಗೆ ಕೊಡಲು ಖುಷಿಯಾಗುತ್ತಿದೆ. ನಿರ್ಮಾಪಕರಿಗೆ, ಕಾರ್ತಿಕ್ ಗೌಡರಿಗೆ, ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಮುಖ್ಯವಾಗಿ ರಾಕ್ಲೈನ್ ವೆಂಕಟೇಶ್ ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಅವರಿಲ್ಲದಿದ್ದರೆ ಸಿನಿಮಾ ಈ ಹಂತಕ್ಕೆ ಬರುತ್ತಿರಲಿಲ್ಲ. ಉಪೇಂದ್ರ ಅವರ ಯುಐ ಫಾಲೋಅಪ್ನಲ್ಲಿ ಮ್ಯಾಕ್ಸ್ ಬರುತ್ತದೆ. ಇದರಲ್ಲಿ ಬಹಳಷ್ಟು ಹೊಸಬರಿದ್ದಾರೆ. ಅವರೆಲ್ಲರಿಗೂ ಒಳ್ಳೇದಾಗಲಿ. ಸಿನಿಮಾ ತುಂಬಾ ಚೆನ್ನಾಗಿದೆ. ಮೂರು ತಿಂಗಳು ಪ್ರತೀ ರಾತ್ರಿ ಮಾಡುತ್ತಿದ್ದ ಶೂಟಿಂಗ್ ಮುಗಿದ ಖುಷಿಗೆ ಕಾಳಿಮಾತೆ ಮುಂದೆ ಹಾಕಿದ್ದ ಸ್ಟೆಪ್ಪೇ ಈಗ ವೈರಲ್ ಆಗಿದೆ. ಕನ್ನಡ ಚಿತ್ರರಂಗವನ್ನು ಇದೇ ರೀತಿ ಒಗ್ಗಟ್ಟಾಗಿ ನೋಡಬೇಕು ಅಂತಾ ಇಷ್ಟಪಡೋನು ನಾನು. ಬೇರೆ ರಾಜ್ಯದ ಸಿನಿಮಾಗಳಿಗೆ ಸಪೋರ್ಟ್ ಮಾಡಿದ ಹಾಗೆ ನಮ್ಮ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ತಿಳಿಸಿದ್ದರು.
ಇದನ್ನೂ ಓದಿ: ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್
ಕಲೈಪುಲಿ ಎಸ್.ತನು ಅವರ ವಿ.ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ಅವರ ನಿರ್ದೇಶನದ ಬಹುನಿರೀಕ್ಷಿತ 'ಮ್ಯಾಕ್ಸ್' ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇದನ್ನೂ ಓದಿ: 'ಸಿನಿಮಾ ತಡವಾಗಿದ್ದಕ್ಕೆ ಕ್ಷಮಿಸಿ, ಲೇಟಾದ್ರೂ ಲೇಟೆಸ್ಟಾಗಿ ಬರ್ತೀವಿ': ಸುದೀಪ್