ಚೆನ್ನೈ(ತಮಿಳುನಾಡು): ಕಾಲಿವುಡ್ ನಟ ಅಜಿತ್ ಕುಮಾರ್ ಅವರನ್ನು ರುಟಿನ್ ಚಕ್ಅಪ್ಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಬಹು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ನಟ ಯಾವುದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿಲ್ಲ ಮತ್ತು ಪರೀಕ್ಷೆಯ ಫಲಿತಾಂಶಗಳು ಹೊರಬಂದ ನಂತರ ಮನೆಗೆ ಮರಳುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಅಜಿತ್ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲು ಅಜರ್‌ಬೈಜಾನ್‌ಗೆ ಪ್ರಯಾಣಿಸುವ ಮೊದಲು ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು ಎಂದು ನಟನ ನಿಕಟ ಮೂಲಗಳು ಬಹಿರಂಗಪಡಿಸಿವೆ. ಅವರ ಆಸ್ಪತ್ರೆ ಭೇಟಿಯ ಸುದ್ದಿ ಅಭಿಮಾನಿಗಳಲ್ಲಿ ಕೆಲ ಕಾಲ ಕಳವಳವನ್ನು ಉಂಟುಮಾಡಿತ್ತು. ಏಕೆಂದರೆ ನಟನಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಹೀಗಾಗಿ ಅವರ ಅಭಿಮಾನಿಗಳು ಈ ಸುದ್ದಿಯಿಂದ ಕೆಲ ಕಾಲ ಗೊಂದಲಕ್ಕೆ ಒಳಗಾಗಿದ್ದಂತೂ ಸುಳ್ಳಲ್ಲ